For Quick Alerts
  ALLOW NOTIFICATIONS  
  For Daily Alerts

  ಸೀಮಂತ ಸಂಭ್ರಮದಲ್ಲಿ ತೇಲಾಡಿದ ತಾರೆ ಲಾರಾ ದತ್ತಾ

  By Rajendra
  |

  ಬಾಲಿವುಡ್ ತಾರೆ, ಮಾಜಿ ಬ್ಯೂಟಿ ಕ್ವೀನ್ ಲಾರಾ ದತ್ತಾ ಗರ್ಭಿಣಿಯಾಗಿರುವುದು ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಜನವರಿ 2012ಕ್ಕೆ ಡೇಟ್ ನೀಡಲಾಗಿದೆ. ಸುದ್ದಿ ಏನಪ್ಪಾ ಎಂದರೆ ಲಾರಾ ಸದ್ದಿಲ್ಲದಂತೆ ಸೀಮಂತ ಮುಗಿಸಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟಿಸಿ ಸೀಮಂತ ಸುದ್ದಿಯನ್ನು ಸ್ಫೋಟಿಸಿದ್ದಾರೆ.

  "ಸೀಮಂತ ಮುಗಿಯುವವರೆಗೂ ತಮ್ಮ ಪತಿ ಮಹೇಶ್ ಭೂಪತಿ ಜೊತೆಗೇ ಇದ್ದರು. ಬಾಲಿವುಡ್‌ನ ಬಹಳಷ್ಟು ಮಂದಿ ಬಂದಿದ್ದರು. ಅವರಿಗೆಲ್ಲಾ ಧನ್ಯವಾದಗಳು. ವಿಶೇಷ ಅತಿಥಿಯಾಗಿ ಸಾನಿಯಾ ಮಿರ್ಜಾ ಕೂಡ ಆಗಮಿಸಿದ್ದರು" ಎಂದು ಲಾರಾ ಟ್ವೀಟಿಸಿದ್ದಾರೆ.

  ಫೆಬ್ರವರಿ 16, 2010ರಲ್ಲಿ ಮಹೇಶ್ ಭೂಪತಿಯನ್ನು ಲಾರಾ ವರಿಸಿದ್ದರು. ಕೂಸು ಹುಟ್ಟುವುದಕ್ಕೂ ಮುನ್ನವೇ ಕುಲಾವಿ ಹೊಲಿಸಿದರು ಎಂಬಂತೆ, ಲಾರಾ ತನ್ನ ಕಂದನಿಗೆ ಹೆಸರು ಸೂಚಿಸುವಂತೆ ಅಭಿಮಾನಿಗಳಲ್ಲಿ ಈಗಲೇ ವಿನಂತಿಸಿಕೊಂಡಿದ್ದಾರೆ. (ಏಜೆನ್ಸೀಸ್)

  English summary
  Actress Lara Dutta tweeted about her baby shower 'Had the best baby shower!So much love and lots of blessings! Thank u all as well for all your wishes'. The ceremony was arranged by her sister and from the sports field Sania Mirza was spotted.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X