ಸಲ್ಮಾನ್ ಖಾನ್ ನನ್ನ ಸಹ ನಟ ಮಾತ್ರ: ಅಸಿನ್

ಈ ವಿಷಯ ನಿಜವೇ ಎಂದು ಅಸಿನ್ ರನ್ನು ಕೇಳಿದರೆ, ''ನಾವಿಬ್ಬರೂ ಲಂಡನ್ ಡ್ರೀಮ್ಸ್ ನಲ್ಲಿ ನಟಿಸುತ್ತಿದ್ದೇವೆ ಅಷ್ಟೆ. ಆತ ನನ್ನ ಸಹ ನಟ ಮಾತ್ರ. ಪ್ರೀತಿ ಪ್ರೇಮ ಎಂದು ಏನೇನೋ ಊಹಿಸಿಕೊಳ್ಳ ಬೇಡಿ. ಈ ಚಿತ್ರ ಮುಗಿದ ಬಳಿಕ ಅವರವರ ದಾರಿ ಅವರದು. ಸಲ್ಮಾನ್ ಖಾನ್ ನೊಂದಿಗೆ ಹೇಗಿರಬೇಕೋ ಹಾಗೇ ಇದ್ದೇನೆ. ಆತನೊಂದಿಗೆ ಹೆಚ್ಚು ಸಲುಗೆಯಿಂದೇನು ಇಲ್ಲ ಎನ್ನುತ್ತಾರೆ ಅಸಿನ್.
ನನ್ನ ಅನುಮತಿ ಇಲ್ಲದೆ ನನ್ನ ಜೀವನದಲ್ಲಿ ಯಾರೂ ಪ್ರವೇಶಿಸಲು ಸಾಧ್ಯವಿಲ್ಲ. ಬಾಲಿವುಡ್ ನಲ್ಲಿ ಈ ರೀತಿಯ ವದಂತಿಗಳು ಬಹಳಷ್ಟು ಹುಟ್ಟಿಕೊಳ್ಳುತ್ತದೆ ಎಂದು ನನ್ನ ಬಳಿ ಬಹಳಷ್ಟು ಮಂದಿ ಹೇಳಿದಾಗ ನಾನು ನಂಬಲಿಲ್ಲ. ಆದರೆ ಈಗ ನಂಬದೆ ವಿಧಿ ಇಲ್ಲ. 'ಗಜಿನಿ' ಸಾಧಿಸಿದ ವಿಜಯ ನನಗೆ ಒಳ್ಳೆ ಹೆಸರು ತಂದುಕೊಟ್ಟಿತು. ಆ ಕಾರಣಕ್ಕೆ ನನ್ನನ್ನು ಮಾನಸಿಕವಾಗಿ ಬಲಹೀನಗೊಳಿಸಲು ಯಾರೋ ಈ ರೀತಿಯ ವದಂತಿಗಳನ್ನು ಹುಟ್ಟುಹಾಕಿದ್ದಾರೆ ಎಂದು ಅಸಿನ್ ಅಲವತ್ತು ಕೊಂಡಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಕರೀನಾ ಸೀರೆ ಬೆಲೆ ಕೇವಲ ಎಂಟು ಲಕ್ಷ ರುಪಾಯಿ!
ಐಶ್ವರ್ಯ ರೈಗಿಂತಲೂ ಸುಂದರಿ ಕತ್ರಿನಾ ಕೈಫ್!
ಸಲ್ಲೂ, ಕತ್ರೀನಾ ವಿವಾಹ; ಸಾಮ್ನಾದಲ್ಲಿ ವರದಿ!
ಕಾಮಿಡಿ ಕಿಲಾಡಿ ಯಾಗಲು ಹೊರಟ ಕತ್ರಿನಾ ಕೈಫ್


Click it and Unblock the Notifications











