ಲೋಕಸಭೆಗೆ ಐಶ್ವರ್ಯ ರೈ ಬೆಕ್ಕಿನ ನಡಿಗೆ!

ಎಲ್ಲಾ ಸರಿಹೋದರೆ, ಐಶ್ವರ್ಯ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ನಿಶ್ಚಯ ಎಂಬ ಸುದ್ದಿ ಬಾಲಿವುಡ್ ಮತ್ತು ಲಕ್ನೋದಲ್ಲಿ ಸುಳಿದಾಡುತ್ತಿದೆ. ಹಿಂದೆ ನೆಹರೂ ಕುಟುಂಬಕ್ಕೆ ತುಂಬಾ ಆಪ್ತರಾಗಿದ್ದ ಅಮಿತಾಬ್ ಈಗ ಸಮಾಜವಾದಿ ಪಕ್ಷಪ್ರಿಯ ಎನ್ನುವುದು ನಮಗೆ ಗೊತ್ತು. ಸಮಾಜವಾದಿ ಪಾರ್ಟಿಯ ಅಮರ್ ಸಿಂಗ್ ಅವರು ಬಚ್ಚನ್ ಕುಟುಂಬದ ಪರಮಾಪ್ತ ಸ್ನೇಹಿತರಾಗಿದ್ದು ಆ ಪಕ್ಷದ ಟಿಕೆಟ್ಟಿನಿಂದಲೇ ಐಶ್ವರ್ಯ ಅತ್ತೆ ಜಯಾ ಬಚ್ಚನ್ ರಾಜ್ಯಸಭಾ ಸದಸ್ಯೆಯಾಗಿರುವುದೂ ಗೊತ್ತುಂಟಲ್ಲ.
ಅತ್ತೆಯ ಜತೆ ಸೊಸೆಯನ್ನೂ ಸಂಸತ್ತಿನಲ್ಲಿ ಲಗತ್ತು ಮಾಡಲು ಪ್ರಯತ್ನ ನಡೆದಿದ್ದು ಐಶ್ವರ್ಯ ಲೋಕಸಭೆ ಪ್ರವೇಶಿಸುವಂತಾದರೂ ಆಗಬಹುದು. ಆದರೆ ಪಕ್ಷ ಯಾವುದು, ಕ್ಷೇತ್ರಯಾವುದು ಎನ್ನುವುದು ಇನ್ನೂ ಖಾತ್ರಿಯಾಗಿಲ್ಲ. ಅಂತೂ, ಈಕೆ ಚುನಾವಣೆಗೆ ನಿಂತರೆ ಅವರ ಚುನಾವಣಾ ಪೋಸ್ಚರ್, ಬ್ಯಾನರುಗಳನ್ನು ಜನ ಕಿತ್ತುವುದು ಗ್ಯಾರಂಟಿ. ಕಿತ್ತುಕೊಂಡು ಮನೆಗೆ ಪಾರ್ಸೆಲ್ ಮಾಡುವುದು ಅಷ್ಟೇ ಗ್ಯಾರಂಟಿ!
(ದಟ್ಸ್ ಕನ್ನಡ ಚಿತ್ರವಾರ್ತೆ)
ಬಾಲಿವುಡ್ bollywood aishwarya rai ಲೋಕಸಭೆ ಚುನಾವಣೆ ಐಶ್ವರ್ಯ ರೈ samajvadi party ಅಮಿತಾಬ್ ಬಚ್ಚನ್ ಜಯ ಬಚ್ಚನ್ ಸಮಾಜವಾದಿ ಪಕ್ಷ ಎಸ್ಪಿ ash amitab bachchan jaya bachchan loksabha elections


Click it and Unblock the Notifications