»   »  ವರಮಾನ ತೆರಿಗೆಯಲ್ಲಿ ಶಾರುಖ್ ಹಿಂದಿಕ್ಕಿದ ಅಕ್ಕಿ

ವರಮಾನ ತೆರಿಗೆಯಲ್ಲಿ ಶಾರುಖ್ ಹಿಂದಿಕ್ಕಿದ ಅಕ್ಕಿ

Subscribe to Filmibeat Kannada
Akshay Kumar beats SRK in tax paying
ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ರು. 31 ಕೋಟಿ ವರಮಾನ ತೆರಿಗೆ ಪಾವತಿಸುವ ಮೂಲಕ ಶಾರುಖ್ ಖಾನ್ ರನ್ನು ಹಿಂದಿಕ್ಕಿದ್ದಾರೆ. ಈ ಆರ್ಥಿಕ ವರ್ಷದಲ್ಲಿ ಶಾರುಖ್ ಖಾನ್ ರು.30.9 ಕೋಟಿಗಳ ವರಮಾನ ತೆರಿಗೆಯನ್ನು ಪಾವತಿಸಿದ್ದಾರೆ.

ಅತಿ ಹೆಚ್ಚು ತೆರಿಗೆ ಪಾವತಿಸುವ ಬಾಲಿವುಡ್ ನಟ ಎಂಬ ಹೆಗ್ಗಳಿಕೆಗೆ ಶಾರುಖ್ ಪಾತ್ರರಾಗಿದ್ದರು. ಆದರೆ ಇದೇ ಮೊದಲ ಬಾರಿಗೆ ಶಾರುಖ್ ಗಿಂತಲೂ ಅತಿಹೆಚ್ಚು ವರಮಾನ ತೆರಿಗೆಯನ್ನು ಅಕ್ಷಯ್ ಕುಮಾರ್ ಪಾವತಿಸಿದ್ದಾರೆ. ಹಾಗಾಗಿ ಅತಿ ಹೆಚ್ಚು ವರಮಾನ ತೆರಿಗೆ ಪಾವತಿಸುವ ಎರಡನೇ ನಟನ ಸ್ಥಾನ ಶಾರುಖ್ ಪಾಲಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶಾರುಖ್ ವರಮಾನ ತೆರಿಗೆ ಒಂಚೂರು ಕಡಿಮೆಯಾಗಿದೆ. ಬಾಲಿವುಡ್ ನಲ್ಲಿ ಅತಿ ಹೆಚ್ಚು ವರಮಾನ ತೆರಿಗೆ ಪಾವತಿಸುವ ನಂತರದ ಸ್ಥಾನದಲ್ಲಿ ಸಲ್ಮಾನ್ ಖಾನ್ ಮತ್ತು ಸೈಫ್ ಆಲಿ ಖಾನ್ ಇದ್ದಾರೆ.

ದೇಶದಲ್ಲೇ ಅತಿಹೆಚ್ಚು ತೆರಿಗೆ ಪಾವತಿಸುವವರ ಪಟ್ಟಿಯಲ್ಲಿ ಶಾರುಖ್ 8 ನೇ ಸ್ಥಾನದಲ್ಲಿದ್ದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ 19ನೇ ಸ್ಥಾನದಲ್ಲಿದ್ದಾರೆ. ಗುಜರಾತ್ ನಲ್ಲಿ ಕೋಟ್ಯಾಧಿಪತಿ ತೆರಿಗೆದಾರ ಸಂಖ್ಯೆ ಕೇವಲ ಮೂರು. ಒರಿಸ್ಸಾ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ತಲಾ ಒಬ್ಬೊಬ್ಬರು ಕೋಟ್ಯಾಧಿಪತಿ ತೆರಿದಾರರಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇಬ್ಬರಿದ್ದರೆ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಅಂದರೆ 54 ಮಂದಿ ಕೋಟ್ಯಾಧಿಪತಿ ತೆರಿಗೆದಾರರಿದ್ದಾರೆ. ದೆಹಲಿಯಲ್ಲಿ 16, ತಮಿಳುನಾಡಿನಲ್ಲಿ 15, ಕರ್ನಾಟಕದಲ್ಲಿ 13 ಮತ್ತು ಆಂಧ್ರಪ್ರದೇಶದಲ್ಲಿ 12 ಮಂದಿ ಕೋಟ್ಯಾಧಿಪತಿ ತೆರಿಗೆದಾರರಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಸಲ್ಮಾನ್ ಖಾನ್ ನನ್ನ ಸಹ ನಟ ಮಾತ್ರ: ಅಸಿನ್
ವಿಜಯ್ 'ದೇವ್ರು' ಇದು ಯಾವ ಚಿತ್ರದ ರೀಮೇಕ್?
ಅದಿತಿ ಗೋವಿತ್ರಿಕರ್ ಗೆ ಕನ್ನಡದಲ್ಲಿ ನಟಿಸುವಾಸೆ
ವಿಜಯ್ ಮತ್ತು ಶುಭಾ ನಡುವಿನ ಗಾಸಿಪ್ ನಿಜವೇ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada