»   » ಟ್ವಿಟ್ಟರ್ ನಲ್ಲಿ ಖಾನ್ ದ್ವಯರ ನಡುವೆ ಸಮರ

ಟ್ವಿಟ್ಟರ್ ನಲ್ಲಿ ಖಾನ್ ದ್ವಯರ ನಡುವೆ ಸಮರ

Posted By:
Subscribe to Filmibeat Kannada

ಬಾಲಿವುಡ್ ನ ಬ್ಯಾಡ್ ಬಾಯ್ ಎಂದೇ ಖ್ಯಾತನಾಗಿರುವ ಸಲ್ಮಾನ್ ಖಾನ್, ಕಿಂಗ್ ಖಾನ್ ಶಾರುಖ್ ರನ್ನು ಹಿಂದಿಕ್ಕಿದ್ದಾರೆ, ಟ್ವಿಟ್ಟರ್ ನಲ್ಲಿ! ಇತ್ತೀಚೆಗೆ ಸಲ್ಲು ಟ್ವಿಟ್ಟರ್ ಗೆ ಲಗ್ಗೆ ಇಟ್ಟ ಸುದ್ದಿ ಓದಿರುತ್ತೀರಿ. ಒಂದೇ ದಿನ ಸಲ್ಲುಗೆ 18, 833 ಹಿಂಬಾಲಕರು ದುಂಬಾಲು ಬಿದ್ದಿದ್ದಾರೆ.

ಆದರೆ ಕಿಂಗ್ ಖಾನ್ ಶಾರುಖ್ ಟ್ವಿಟ್ಟರ್ ಗೆ ಲಗ್ಗೆ ಇಟ್ಟು ದಿನಬೆಳಗಾಗುವುದರಲ್ಲಿ 1 0,000 ಹಿಂಬಾಲಕರು (Followers) ಬೆನ್ನಿಗೆ ಬಿದ್ದಿದ್ದರು. ಇಷ್ಟಕ್ಕೂ ಸಲ್ಲುರನ್ನು ಟ್ವಿಟ್ಟರ್ ಗೆ ಕರೆತಂದದ್ದು ಆಭರಣ ವಿನ್ಯಾಸಕಿ ಫರಾ ಖಾನ್ ಅಲಿ. ಅಂತರ್ಜಾಲದಲ್ಲಿ ಫರಾ ಖಾನ್ ಅವರಿಗೆ ಲೆಕ್ಕವಿಲ್ಲದಷ್ಟು ಅಭಿಮಾನಿಗಳಿದ್ದಾರಂತೆ.

ತಮ್ಮ ಚೊಚ್ಚಲ ಟ್ವೀಟ್ ನಲ್ಲಿ ಸಲ್ಲು ಹೇಳಿದ್ದೇನೆಂದರೆ, ಟ್ವೀಟ್ ಮಾಡುವವನೆ ಬಾಸ್ ಎಂದು ನನ್ನ ತಮ್ಮ ಅರ್ಬಾಸ್ ಖಾನ್ ಹೇಳಿದ್ದ.ಇಷ್ಟು ದಿನ ನನ್ನ ಹೆಸರಲ್ಲಿ ಯಾರ‌್ಯಾರೋ ಟ್ವೀಟ್ ಮಾಡುತ್ತಿದ್ದರು. ಈಗ ಟ್ವಿಟ್ಟರ್ ಗೆ ನಾನೇ ಬಂದಿದ್ದೇನೆ. ಬೇರೆಯವರೆಲ್ಲಾ ಪಕ್ಕಕ್ಕೆ ಸರಿಯಲೇಬೇಕು ಎಂದಿದ್ದಾನೆ ಸಲ್ಲು.

ಬಾಲಿವುಡ್ ನ ತಾರೆಗಳಾದ ರಣಬೀರ್ ಮತ್ತು ಕತ್ರಿನಾ ಕೈಫ್ ಟ್ವಿಟ್ಟರ್ ಗೆ ಬರುವುದಿಲ್ಲ ಎಂದು ಘೋಷಿಸಿದ್ದಾರೆ. ಏತನ್ಮಧ್ಯೆ ಶಾರುಖ್ ಖಾನ್ ಹಿಂಬಾಲಕರ ಸಂಖ್ಯೆ 2,66,743ರಷ್ಟಾಗಿದೆ. ಟ್ವಿಟ್ಟರ್ ನಲ್ಲಿ ಇಬ್ಬರು ಖಾನ್ ಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada