»   »  ಮನೆಕೆಲಸದ ಯುವತಿ ಮೇಲೆ ಶೈನಿ ಅತ್ಯಾಚಾರ

ಮನೆಕೆಲಸದ ಯುವತಿ ಮೇಲೆ ಶೈನಿ ಅತ್ಯಾಚಾರ

Subscribe to Filmibeat Kannada

ಮುಂಬೈ, ಜೂ. 15 : ಇದೊಂದು ನಾಚಿಕೆಗೇಡಿನ ಪ್ರಸಂಗ. ಮಾಡೆಲ್ ರಂಗದಿಂದ ಬಾಲಿವುಡ್ ಗೆ ಪ್ರವೇಶ ಪಡೆದಿದ್ದ ಶೈನಿ ಅಹುಜಾ ಎಂಬ ನಟ ಮನೆಕೆಲಸದ ಹುಡುಗಿ ಮೇಲೆ ಅತ್ಯಾಚಾರ ನಡೆಸಿದ ಭೀಕರ ಘಟನೆ ಮುಂಬೈನ ಅಂಧೇರಿ ಪಶ್ಚಿಮದ ಓಶಿವಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಅತ್ಯಾಚಾರಕ್ಕೊಳಗಾದ 19 ವರ್ಷದ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಶೈನಿ ಅಹುಜಾ ಅವರನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಭಾನುವಾರ ಮಧ್ಯಾಹ್ನ 3 ರಿಂದ 5 ಗಂಟೆಯೊಳಗೆ ಶೈನಿ ಅಹುಜಾ ವಾಸವಾಗಿರುವ ಪ್ಲಾಟ್ ನಲ್ಲಿ ಈ ಕೃತ್ಯ ನಡೆದಿದೆ. ಶೈನಿ ಅವರ ಪತ್ನಿ ಮನೆಯಲ್ಲಿ ಇರಲಿಲ್ಲ. ಆಗ ಮನೆ ಕೆಲಸಕ್ಕೆ ಬಂದಿದ್ದ 19 ವರ್ಷದ ಯುವತಿಯನ್ನು ತನ್ನ ಬೆಡ್ ರೂಂಗೆ ಹೊತ್ತೊಯ್ದ ಶೈನಿ ಆಕೆಯನ್ನು ಅತ್ಯಾಚಾರ ಮಾಡಿದ್ದಾನೆ. ಅತ್ಯಾಚಾರಕ್ಕೊಳಗಾದ ಯುವತಿ ಮಾನಸಿಕವಾಗಿ ತೀವ್ರ ಅಸ್ವಸ್ಥಳಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಈಗ ಅಕೆಯ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ಡಿಸಿಪಿ ನಿಕೇತ್ ಕೌಶಿಕ್ ತಿಳಿಸಿದ್ದಾರೆ.

ಅತ್ಯಾಚಾರಕ್ಕೊಳಗಾಗಿರುವುದನ್ನು ದೃಢಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಗಾಗಿ ಯುವತಿಯನ್ನು ನಾಗಪಾಡಾ ಪೊಲೀಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯನ್ನು ಪರೀಕ್ಷೆ ನಡೆಸಿದ ವೈದ್ಯರು ಯುವತಿ ಮೇಲೆ ಅತ್ಯಾಚಾರ ನಡೆದಿರುವುದನ್ನು ದೃಢಪಡಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಶೈನಿ ಅಹುಜಾ ಅನುಪಮ ಎಂಬುವವರನ್ನು ಮದುವೆಯಾಗಿದ್ದರು. ಒಂದು ಮಗು ಸಹಾ ಇದೆ. ಸದ್ಯ ಅನುಪಮ ವಿದೇಶಿ ಪ್ರವಾಸದಲ್ಲಿದ್ದಾರೆ. ಶೈನಿ ಕೃತ್ಯಕ್ಕೆ ಬಾಲಿವುಡ್ ನ ಅನೇಕರು ಖಂಡಿಸಿದ್ದಾರೆ.

(ಏಜನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada