For Quick Alerts
  ALLOW NOTIFICATIONS  
  For Daily Alerts

  ಶಬರಿಮಲೆ ಭಕ್ತಾದಿಗಳಲ್ಲಿ ನಟ ವಿವೇಕ್ ಒಬೆರಾಯ್

  By Rajendra
  |

  ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆಯಲ್ಲಿ ನಡೆದ ದುರಂತ ಸಂದರ್ಭದಲ್ಲಿ ಬಾಲಿವುಡ್ ಜನಪ್ರಿಯ ನಟ ವಿವೇಕ್ ಒಬೆರಾಯ್ ಕೂಡ ಇದ್ದರು. ಆದರೆ ಅವರು ಅವಘಡದಿಂದ ಪಾರಾಗಿದ್ದಾರೆ. ಶಬರಿಮಲೆಯ ಇಡುಕ್ಕಿಯಲ್ಲಿ ನಡೆದ ನೂಕುನುಗ್ಗಲಿನಲ್ಲಿ 110ಕ್ಕೂ ಅಯ್ಯಪ್ಪ ಸ್ವಾಮಿ ಭಕ್ತರು ಮೃತಪಟ್ಟಿದ್ದಾರೆ.

  ವಿವೇಕ್ ಒಬೆರಾಯ್ ಅವರು ಗುರುವಾರ(ಜ.13) ರಾತ್ರಿಯೇ ಶಬರಿಮಲೆಗೆ ಆಗಮಿಸಿದ್ದರು. ಮಕರಜ್ಯೋತಿ ದರ್ಶನ ಪಡೆದು ಅವರು ಮುಂಬೈಗೆ ವಾಪಾಸಾದರು ಎನ್ನುತ್ತವೆ ಮೂಲಗಳು. ಅಯ್ಯಪ್ಪ ಸ್ವಾಮಿಯ ಪರಮ ಭಕ್ತನಾದ ವಿವೇಕ್ ಕಳೆದ 13 ವರ್ಷಗಳಿಂದಲೂ ಶಬರಿಮಲೆಗೆ ಭೇಟಿ ನೀಡುತ್ತಿದ್ದಾರೆ.

  ಪ್ರಿಯಾಂಕಾ ಆಳ್ವರನ್ನು ವರಿಸಿದ ಬಳಿಕ ವಿವೇಕ್ ಇದೇ ಮೊದಲ ಬಾರಿಗೆ ಶಬರಿಮಲೆಗೆ ಭೇಟಿ ನೀಡಿದ್ದರು. ವಿವೇಕ್ ಅಭಿನಯದನೈಜ ಕತೆಯಾಧಾರಿತ 'ರಕ್ತ ಚರಿತ್ರ' ಚಿತ್ರ ಆಂಧ್ರದಲ್ಲಿ ಸಂಚಲನ ಮೂಡಿಸಿದ್ದು ಗೊತ್ತೇ ಇದೆ. ಒಟ್ಟಿನಲ್ಲಿ ಅವರು ಅಪಾಯದಿಂದ ಪಾರಾಗಿ ಬಂದಿರುವುದು ವಿವೇಕ್ ಅಭಿಮಾನಿಗಳ ಪಾಲಿಗೆ ಸಂತಸದ ವಿಚಾರ. [ಶಬರಿಮಲೆ]

  English summary
  Actor Vivek Oberoi was among those who offered worship at the famous hill shrine of Lord Ayyappa here hours before the stampede at Vandiperiyar in Idukki district that claimed over 100 lives. Oberoi, who reached here on Thursday night, witnessed the 'Makara Jytohi' and left for Mumbai, sources said.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X