»   » ಲಮ್ಹಾ ಚಿತ್ರಕ್ಕೆ ಮುಸ್ಲಿಂ ದೇಶಗಳಲ್ಲಿ ನಿಷೇಧ!

ಲಮ್ಹಾ ಚಿತ್ರಕ್ಕೆ ಮುಸ್ಲಿಂ ದೇಶಗಳಲ್ಲಿ ನಿಷೇಧ!

Posted By:
Subscribe to Filmibeat Kannada

ಬಹುಶಃ ನಿರ್ದೇಶಕ ರಾಹುಲ್ ಧೋಲಾಕಿಯಾ ಆಗಲಿ, ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಸಂಜಯ್ ದತ್, ಬಿಪಾಶಾ ಬಸು ಅವರಿಗಾಗಲಿ ಲಮ್ಹಾ ಚಿತ್ರ ನಿಷೇಧಗೊಳ್ಳುವ ನಿರೀಕ್ಷೆ ಇರಲಿಲ್ಲ. ಆದರೆ, ಇಂದು ಎಲ್ಲೆಡೆ ತೆರೆಕಂಡಿರುವ ಲಮ್ಹಾ ಚಿತ್ರಕ್ಕೆ ಮುಸ್ಲಿಂ ವಿರೋಧಿ ಎಂದು ಮಧ್ಯಪ್ರಾಚ್ಯ ದೇಶಗಳಲ್ಲಿ ನಿಷೇಧ ಹೇರಲಾಗಿದೆ.

ಉಗ್ರಗಾಮಿಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ, ಅವರ ನೋವು ನಲಿವು ಹಾಗೂ ಕಾಶ್ಮೀರದ ಜನಸಾಮಾನ್ಯರ ಪರಿಸ್ಥಿತಿಯ ಸುತ್ತಾ ಸುಂದರವಾದ ಕಥೆ ಹೆಣೆದ ನಿರ್ದೇಶಕ ರಾಹುಲ್ ಗೆ ಈ ನಿಷೇಧ ನಿಜಕ್ಕೂ ಆಘಾತ ತಂದಿದೆ. ಚಿತ್ರದ ನಂತರ ಕಾಶ್ಮೀರ ಸಮಸ್ಯೆ ಕುರಿತು ಪುಸ್ತಕವನ್ನು ರಚಿಸುವುದಾಗಿ ರಾಹುಲ್ ಹೇಳಿದ್ದರು.

ಯುಎಇ, ಬಹರೇನ್,ಕತಾರ್ ಹಾಗೂ ಕುವೈಟ್ ನಲ್ಲಿ ಅಲ್ಲದೆ ಕಾಶ್ಮೀರ ಕೆಲವು ಚಿತ್ರಮಂದಿರಗಳಲ್ಲಿ ಇಂದು ಚಿತ್ರ ಪ್ರದರ್ಶನ ಭಾಗ್ಯ ಕಂಡಿಲ್ಲ. ನಿಷೇಧ ಹೇರಿರುವ ದೇಶಗಳ ಸೆನ್ಸಾರ್ ಬೋರ್ಡ್ ನವರಿಗೆ ಚಿತ್ರದ ಯಾವ ದೃಶ್ಯ ಅಥವಾ ಸಂಭಾಷಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಕೂಡಾ ತಿಳಿದಿಲ್ಲ ಎನ್ನುತ್ತಾರೆ ರಾಹುಲ್.

ಚಿತ್ರದ ಪ್ರಧಾನ ಭೂಮಿಕೆಯಲ್ಲಿರುವ ಬಿಪಾಶಾ ಬಸು , ಕಾಶ್ಮೀರಿ ಚೆಲುವೆಯಾಗಿ ಕಾಣಿಸಲಿದ್ದು, ಈ ಬೆಳವಣಿಗೆಯಿಂದ ತೀವ್ರ ನೋವಾಗಿದೆ ಎಂದಿದ್ದಾರೆ.

ಅಭಿಪ್ರಾಯ ಮಂಡನೆಯ ಸ್ವಾತಂತ್ರಕ್ಕೆ ಇದು ಧಕ್ಕೆ ತಂದಿದೆ. ಮಧ್ಯಪ್ರಾಚ್ಯದ ಜನರಿಗೆ ಇದರಿಂದ ಕೆಟ್ಟ ಸಂದೇಶ ರವಾನೆ ಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಚಿತ್ರದಲ್ಲಿ ಶಾರ್ಪ್ ಶೂಟರ್ ಪಾತ್ರ ನಿರ್ವಹಿಸಿರುವ ಸಂಜಯ್ ದತ್ ಕೂಡಾ ಇದೇ ರೀತಿ ಅಭಿಪ್ರಾಯಪಟ್ಟಿದ್ದು, ಇದು ಅನೀರೀಕ್ಷಿತ ಎಂದಿದ್ದಾರೆ. ಚಿತ್ರದಲ್ಲಿ ರಂಗ್ ದೇ ಬಸಂತಿ ಖ್ಯಾತಿಯ ಕುನಲ್ ಕಪೂರ್ ಸಹಾ ಅಭಿನಯಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada