»   »  ಕೋಟಿ ಸಂಕಟಗಳ ಸರಮಾಲೆ 'ಸಂಕಟ್ ಸಿಟಿ'!

ಕೋಟಿ ಸಂಕಟಗಳ ಸರಮಾಲೆ 'ಸಂಕಟ್ ಸಿಟಿ'!

Posted By:
Subscribe to Filmibeat Kannada

ಕಾರುಗಳನ್ನು ಕದ್ದು ಅವುಗಳನ್ನು ಗ್ಯಾರೇಜಿಗೆ ತಲುಪಿಸುವುದು ಗುರು ಕೆಲಸ. ಅವುಗಳನ್ನು ಯಾರೂ ಗುರುತು ಹಿಡಿಯದಂತೆ ಬದಲಾಯಿಸಿ ಕಡಿಮೆ ಬೆಲೆಗೆ ಮಾರುವ ವಿದ್ಯೆ ಗಣಪತಿಗೆ ಗೊತ್ತು. ಇವರಿಬ್ಬರೂ ಕೂಡಿ ಮಾಡುತ್ತಿರುವ ಕಳ್ಳತನಕ್ಕೆ ಒಂದು ದಿನ ಬ್ರೇಕ್ ಬೀಳುತ್ತದೆ.

ಒಂದು ದುಬಾರಿ ಕಾರನ್ನು ಕಳ್ಳತನ ಮಾಡಿ ಅದರಲ್ಲಿನ ಕೋಟಿ ರು.ಗಳನ್ನು ತಮ್ಮ ಖಾತೆಗೆ ಜಮಾಯಿಸಬೇಕು ಎಂದು ಹಂಚಿಕೆ ಹೂಡುತ್ತಾರೆ. ಆ ಹಣ ಭೂಗತ ದೊರೆಯೊಬ್ಬನ ಹಣ ಎಂದು ತಿಳಿದು ಆತಂಕಕ್ಕೊಳಗಾಗುತ್ತಾರೆ. ಅಷ್ಟರಲ್ಲಿ ಹಣವನ್ನು ರಹಸ್ಯವಾಗಿ ಬಚ್ಚಿಟ್ಟ ಗಣಪತಿಗೆ ಅಪಾಯ ಸಂಭವಿಸುತ್ತದೆ.

ಗಣಪತಿ ಹಣ ಎಲ್ಲಿ ಬಚ್ಚಿಟ್ಟಿದ್ದಾನೋ ಗೊತ್ತಿಲ್ಲ. ಆ ಹಣವನ್ನು ಹೊರತರಲು ಗುರು ಯಾವ ರೀತಿ ಪ್ರಯತ್ನಿಸುತ್ತಾನೆ? ಮೋನಾಳೊಂದಿಗಿನ ಪರಿಚಯ ಗುರುಗೆ ನೆರವಾಗುತ್ತದೆಯೇ? ಈ ಕತೆಯಲ್ಲಿ ಒಂದು ಚಿತ್ರ ತಂಡ ಪ್ರವೇಶಿಸುವುದರೊಂದಿಗೆ ಕತೆ ಹೇಗೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಕಡೆಗೆ ಈ ಕೋಟಿ ಸಂಕಟಗಳಿಂದ ಅವರು ಪಾರಾಗುತ್ತಾರಾ?

ಈ ಎಲ್ಲಾ ಸಮಸ್ಯೆಗಳಿಗೆ ಉತ್ತರವೇ 'ಸಂಕಟ್ ಸಿಟಿ' ಚಿತ್ರ. ಮೋಸರ್ ಬೇರ್, ಸೆವೆನ್ ಎಂಟರ್ ಟೈನ್ ಮೆಂಟ್ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ. ಪಂಕಜ್ ಅಡ್ವಾನಿ ನಿರ್ದೇಶನ ಚಿತ್ರಕ್ಕಿದೆ. ಇದೊಂದು ಸಂಪೂರ್ಣ ಹಾಸ್ಯಪ್ರಧಾನ ಚಿತ್ರ.

ಈ ಕುರಿತು ಮಾತನಾಡಿದ ಪಂಕಜ್ ಅಡ್ವಾನಿ, ಹಣ, ಹತ್ಯೆ, ಪ್ರತೀಕಾರ, ದುರಾಸೆ, ಭಯ, ಪ್ರೀತಿ ಪ್ರೇಮ ಪ್ರಣಯ ಹೀಗೆ ಎಲ್ಲ ಅಂಶಗಳನ್ನು ಚಿತ್ರದಲ್ಲಿ ಸ್ಪರ್ಶಿಸಿದ್ದೇವೆ ಎನ್ನುತ್ತಾರೆ. ಕೆಕೆ ಮಿನನ್, ಚುಂಕಿ ಪಾಂಡೆ, ದಿಲೀಪ್ ಪ್ರಭಾವಲ್ಕನ್, ಅನುಪಮ್ ಖೇರ್, ರಿಮ್ಮಿ ಸೇನ್, ಯಶಪಾಲ್ ಶರ್ಮಾ ಚಿತ್ರದ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada