»   » ಬಿಗ್ ಬಿ ಅಮಿತಾ ಬಚ್ಚನ್‌ಗೆ ಮತ್ತೊಂದು ಆಪರೇಷನ್

ಬಿಗ್ ಬಿ ಅಮಿತಾ ಬಚ್ಚನ್‌ಗೆ ಮತ್ತೊಂದು ಆಪರೇಷನ್

Posted By:
Subscribe to Filmibeat Kannada

ಅನಾರೋಗ್ಯದಿಂದ ಬಳಲುತ್ತಿರುವ ಬಾಲಿವುಡ್ ನಟ ಅಮಿತಾಬ್ ಬಚ್ಚನ್ (69) ಅವರಿಗೆ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಯಲಿದೆ. ಈ ವಿಷಯವನ್ನು ಸ್ವತಃ ಅಮಿತಾಬ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ. ಚಿಕಿತ್ಸೆಗಾಗಿ ಇನ್ನೊಂದಷ್ಟು ದಿನ ಆಸ್ಪತ್ರೆಯಲ್ಲೇ ಉಳಿಯುವ ಸಂದರ್ಭ ಬರಬಹುದು ಎಂದಿದ್ದಾರೆ.

"ತಾನು ಈಗಷ್ಟೇ ಚೇತರಿಸಿಕೊಂಡಿದ್ದೇನು" ಎಂದು ಬುಧವಾರ ಟ್ವೀಟಿಸಿದ್ದ ಅಮಿತಾಬ್, ಕೆಲವೇ ಗಂಟೆಗಳಲ್ಲಿ ಇದಕ್ಕೆ ಭಿನ್ನವಾದ ಸಂದೇಶವನ್ನು ರವಾನಿಸಿದ್ದರು. ಇದರಿಂದ ಅಮಿತಾಬ್ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು.

ಬಹುಶಃ ಮತ್ತೊಂದಿಷ್ಟು ವೈದ್ಯ ಪರೀಕ್ಷೆಗಳು...ಚಿಕಿತ್ಸೆ...ಆಪರೇಷನ್ ಥಿಯೇಟರ್‌ಗೆ ಹೋಗುವ ಸಂದರ್ಭ ಬರಬಹುದು. ಇವೆಲ್ಲವನ್ನೂ ನೋಡುತ್ತಿದ್ದರೆ ಹೆಚ್ಚಿನ ಸಮಯ ಇಲ್ಲೇ ಕಳೆಯಬೇಕಾಗಬಹುದು ಎಂದು ಅಮಿತಾಬ್ ಟ್ವೀಟ್ಟರ್‌ನಲ್ಲಿ ನಿಟ್ಟುಸಿರು ಬಿಟ್ಟಿದ್ದಾರೆ.

"ಇದು ಇನ್ನೂ ಎಷ್ಟು ಕಾಲ ಮುಂದುವರಿಯುತ್ತದೋ ಗೊತ್ತಿಲ್ಲ. ನನಗಾಗಿ ಪ್ರಾರ್ಥಿಸುತ್ತಿರುವ, ನನ್ನ ಮೇಲೆ ಪ್ರೇಮಾಭಿಮಾನ ಗರೆಯುತ್ತಿರುವ ಅಭಿಮಾನಿಗಳು, ಪ್ರಜೆಗಳಿಗೆ ಹೃದಯಪೂರ್ವಕ ಕೃತಜ್ಞತೆಗಳು" ಎಂದಿದ್ದಾರೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಾವು ನೀವೆಲ್ಲಾ ಹಾರೈಸೋಣ. (ಏಜೆನ್ಸೀಸ್)

English summary
Big B Amitabh Bachchan, who underwent two operations on Saturday to rectify his hernia said yesterday on Twitter that he will have to undergo a second surgery and added that his stay in the hospital will be prolonged.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X