»   » ಗಿಡ ನೆಡಿ ಗಿಡ ನೆಡಿ ಎನ್ನುವ ವಿಶ್ವಸುಂದರಿ

ಗಿಡ ನೆಡಿ ಗಿಡ ನೆಡಿ ಎನ್ನುವ ವಿಶ್ವಸುಂದರಿ

Posted By:
Subscribe to Filmibeat Kannada
Priyanka Chopra
ಮಾಜಿ ವಿಶ್ವಸುಂದರಿ, ಬಾಲಿವುಡ್ ನ ಬೇಡಿಕೆಯ ನಟಿಗೆ ಈಗ ಪರಿಸರ ಸಂರಕ್ಷಣೆಯ ಕಾಳಜಿ ಹೆಚ್ಚಾಗಿದೆ. ಎನ್ ಡಿಟಿವಿ ಹಾಗೂ ಟಯೋಟಾ ಪ್ರಾಯೋಜಕತ್ವದ ಪರಿಸರ ಕಾಳಜಿ ವಿಡಿಯೋದಲ್ಲಿ ಪ್ರಿಯಾಂಕಾ ಕಾಣಿಸಲಿದ್ದಾರೆ. ಇದು ಅನಿಮೇಷನ್ ವಿಡಿಯೋ ಆಗಿರುವುದು ವಿಶೇಷ. ನೀರು ಉಳಿಸಿ, ಇಂಧನ ಸಮರ್ಪಕವಾಗಿ ಬಳಸಿ, ಗಿಡ ನೆಡಿ, ಮಾಲಿನ್ಯ ಕಮ್ಮಿ ಮಾಡಿ ಎಂದೆಲ್ಲಾ ಈ ಸುಂದರಿಯ ಬಾಯಲ್ಲಿ ಹೇಳಿಸಿ, ಸಾರ್ವಜನಿಕರಿಗೆ ಪರಿಸರ ಸಂರಕ್ಷಣೆ ಬಗ್ಗೆ ಒಂದಿಷ್ಟಾದರೂ ಕಾಳಜಿ ಹುಟ್ಟಲಿ ಎಂಬುದು ಎನ್ ಡಿಟಿವಿ ಆಶಯ.

ಅನಿಮೇಷನ್ ಹಾಗೂ ನೈಜ ಚಿತ್ರಗಳನ್ನು ಹೊಂದಿರುವ ಈ ವಿಡಿಯೋಗೆ ಶಂಕರ್ , ಎಹಸಾನ್, ಲಾಯ್ ತಂಡ ಸಂಗೀತ ನೀಡಿದ್ದು, ಖ್ಯಾತ ಸಾಹಿತಿ ಗುಲ್ಜಾರ್ ಅವರು ಪದಗಳನ್ನು ಹೊಸೆದಿದ್ದಾರೆ. NDTV 24×7, NDTV India ಹಾಗೂ NDTV Profit ವಾಹಿನಿಗಳಲ್ಲಿ ಈ ವಿಡಿಯೋ ಬಿತ್ತರಗೊಳ್ಳಲಿದೆ. ಹೆಚ್ಚಿನ ವಿವರಗಳನ್ನು http://green.ndtv.com/ ನಿಂದ ಪಡೆಯಬಹುದು. ಪೇಪರ್ ತ್ಯಜಿಸಿ, ಪರಿಸರ ಉಳಿಸಿ ಎನ್ನುತ್ತಾ ಐಡಿಯಾ ಸೆಲ್ಯುಲರ್ ಜಾಹೀರಾತಿನಲ್ಲಿ ತಾನೇ ಮರವಾಗಿ ಅಭಿಷೇಕ್ ಬಚ್ಚನ್ ಕಾಣಿಸಿಕೊಂಡಿರುವುದು ಒಂದೆಡೆಯಾದರೆ, ಅನಿಮೇಟೆಕ್ ವಿಡಿಯೋ ಮೂಲಕ ಸಾರ್ವಜನಿಕರ ಅದರಲ್ಲೂ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಪ್ರಿಯಾಂಕಾ ಮುಂದಾಗಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada