For Quick Alerts
  ALLOW NOTIFICATIONS  
  For Daily Alerts

  ಕಿಂಗ್ ಖಾನ್ ಶಾರುಖ್‌ಗೆ ಮಂಡಿ ಶಸ್ತ್ರ ಚಿಕಿತ್ಸೆ

  By Rajendra
  |

  ಒಂದು ವರ್ಷದ ಹಿಂದೆ ಬಾಲಿವುಡ್ ನಟ ಶಾರುಖ್ ಖಾನ್ ಮಂಡಿಗೆ ಗಾಯ ಮಾಡಿಕೊಂಡಿದ್ದರು. ಆದರೆ ನೋವು ಮಾತ್ರ ಬಾಧಿಸುತ್ತಲೆ ಇತ್ತು. ಹಾಗಾಗಿ ಜುಲೈನಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಲಿದ್ದಾರೆ. ಆಕ್ಷನ್ ಪ್ರಧಾನ ರಾ.ಒನ್ ಚಿತ್ರದಲ್ಲಿ ಸಿಕ್ಕಾಪಟ್ಟೆ ಸಾಹಸ ಸನ್ನಿವೇಶಗಳಿದ್ದು ಅವುಗಳಲ್ಲಿ ಬಿಡುವಿಲ್ಲದಂತೆ ಭಾಗಿಯಾಗಿದ್ದು ಮತ್ತಷ್ಟು ಮಂಡಿ ನೋವಿಗೆ ಕಾರಣವಾಗಿದೆ.

  ಈ ಹಿಂದೆ ಗಾಯಗೊಂಡಾಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪಿಜಿಯೋಥೆರಪಿಸ್ಟ್ ಆಂಡ್ರ್ಯೂ ಲೆಪ್ಯುಯಸ್ ಚಿಕಿತ್ಸೆ ನೀಡಿದ್ದರು. ಸದ್ಯಕ್ಕೆ ಹೈದರಾಬಾದ್‌ನಲ್ಲಿ ಚಿತ್ರೀಕರಣದಲ್ಲಿರುವ ಶಾರುಖ್ ಅವರಿಗೆ ಅಲ್ಲಿನ ವೈದ್ಯ ಡಾ.ಅಲಿ ಇರಾನಿ ಮಂಡಿಯನ್ನು ಪರೀಕ್ಷಿಸುತ್ತಿದ್ದಾರೆ.

  "ಮಂಡಿ ನೋವಿನಿಂದ ಅವರು ಚಿತ್ರೀಕರಣದಲ್ಲಿ ಸರಿಯಾಗಿ ಪಾಲ್ಗೊಳ್ಳಲ್ಲು ಆಗುತ್ತಿರಲಿಲ್ಲ. ಎಡಗಾಲಿನ ಮಂಡಿ ಚಿಪ್ಪು ಮುರಿದಿರುವ ಕಾರಣ ಹೀಗಾಗುತ್ತಿದೆ. ಹಾಗಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ" ಎಂದು ಡಾ.ಅಲಿ ಅವರು ತಿಳಿಸಿದ್ದಾರೆ. (ಏಜೆನ್ಸೀಸ್)

  English summary
  Bollywood actor Shah Rukh Khan injured his knee over a year ago. The injury has come back to haunt the actor and he has to undergo a knee surgery in July. He has a tear in the meniscus of his left knee,” said a source.
  Saturday, June 18, 2011, 11:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X