»   »  36-24-36 ಚಿತ್ರದಲ್ಲಿ ಜಯಾ ಬಚ್ಚನ್

36-24-36 ಚಿತ್ರದಲ್ಲಿ ಜಯಾ ಬಚ್ಚನ್

Subscribe to Filmibeat Kannada
Meghna to direct Jaya Bachchan now
ಗುಲ್ಜಾರ್ ಮಗಳು ಮೇಘನಾ ನಿರ್ದೇಶನದಲ್ಲಿ '36-24-36' ಎಂಬ ಹಿಂದಿ ಚಿತ್ರ ಸಿದ್ಧವಾಗುತ್ತಿದೆ. ಈ ಚಿತ್ರದ ಪ್ರಧಾನ ಪಾತ್ರ ಪೋಷಿಸಲು ಜಯಾ ಬಚ್ಚನ್ ಒಪ್ಪಿದ್ದಾರೆ. ಜಯಾ ಮಾತನಾಡುತ್ತಾ, ಗುಲ್ಜಾರ್ ನನ್ನ ತಮ್ಮನ ಸಮಾನ. ಅವರ ಮಗಳ ನಿರ್ದೇಶನದಲ್ಲಿ ನಾನು ನಟಿಸುತ್ತಿರುವುದು ನಿಜಕ್ಕೂ ಖುಷಿ ಕೊಟ್ಟಿದೆ ಎಂದಿದ್ದಾರೆ.

ಮಹಿಳಾ ನಿರ್ದೇಶಕರ ಎರಡು ಚಿತ್ರಗಳಲ್ಲಿ ಈ ವರ್ಷ ನಟಿಸುತ್ತಿದ್ದೇನೆ. ಈ ಹಿಂದೆ ನಾನು ಮಹಿಳೆಯರ ನಿರ್ದೇಶನದಲ್ಲಿ ನಟಿಸಿರಲಿಲ್ಲ. ರೇವತಿ ಶರ್ಮ ಅವರ 'ಫಿರ್ ತುಮ್ ಮಿಲ್ ಗಯಾ' ಎಂಬ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. '36-24-36'ಎರಡನೆಯ ಚಿತ್ರ.

'36-24-36' ಸಂಪೂರ್ಣ ಹಾಸ್ಯ ಚಿತ್ರ. ಗುಲ್ಜಾರ್ ನಿರ್ದೇಶನದಲ್ಲಿ ಈ ಹಿಂದೆ ಎರಡು ಚಿತ್ರಗಳಲ್ಲಿ ನಟಿಸಿದ್ದೆ. ಈಗ ಅವರ ಮಗಳ ಸರದಿ ಎಂದರು. ಪ್ರೀತೀಶ್ ನಂದಿ ಕಮ್ಯುನಿಕೇಷನ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada