»   »  ನಟಿ ಪ್ರಿಯಾಂಕ ಚೊಪ್ರಾಗೊಂದು ಗಂಡು ಬೇಕಂತೆ!

ನಟಿ ಪ್ರಿಯಾಂಕ ಚೊಪ್ರಾಗೊಂದು ಗಂಡು ಬೇಕಂತೆ!

Subscribe to Filmibeat Kannada
Priyanka Chopra
ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ಮದುವೆಯಾಗುತ್ತಿದ್ದಾರಂತೆ. ಆದರೆ ಈಕೆಗೆ ಟಿವಿ ಕಾರ್ಯಕ್ರಮದ ಮೂಲಕ ತನಗೆ ಸರಿಹೊಂದುವ ವರನನ್ನು ಆಯ್ಕೆ ಮಾಡಿಕೊಳ್ಳಲು ಇಷ್ಟವಿಲ್ಲವಂತೆ. ಬದಲಿಗೆ ತನಗೆ ಗೊತ್ತಿರುವ ಮಂದಿಯ ಮೂಲಕ ತನ್ನ ಮದುವೆ ಪ್ರಸ್ತಾಪವನ್ನು ಮುಂದಿಟ್ಟು ಒಳ್ಳೆಯ ವರನನ್ನು ಹುಡುಕುವಂತೆ ಹೇಳಿದ್ದಳಾರೆಂಬ ಒಂದು ಸುದ್ದಿ ಹರಿದಾಡುತ್ತಿದೆ.

ಬಾಲಿವುಡ್ ನಟ ಶಾಹಿದ್ ಕಪೂರ್ ಜೊತೆಗಿನ ಸಂಬಂಧ ಥಳುಕು ಹಾಕಿದ ಗಾಳಿ ಸುದ್ದಿ ಈಕೆಯ ಮನಸ್ಸಿಗೆ ನೋವುಂಟು ಮಾಡಿದೆಯಂತೆ. ಇದರಿಂದ ಹೊರಬರಲು ಪ್ರಿಯಾಂಕ ಬಯಸುತ್ತಿದ್ದಾರೆ. ಒಳ್ಳೆಯ ಹುಡುಗನನ್ನು ಹುಡುಕಿ ಕೊಡಲೇಬೇಕೆಂದು ತನ್ನ ಕಡೆಯವರಿಗೆಲ್ಲ ಹೇಳಿದ್ದಾರೆ. ಇದಕ್ಕಾಗಿ ಪ್ರಿಯಾಂಕರ ಆಪ್ತರು ಮತ್ತು ಬಂಧುಗಳು ವರನ್ವೇಷಣೆಯಲ್ಲಿ ತಲ್ಲೀನರಾಗಿದ್ದಾರೆ.

ಕೆಲವರಂತೂ ಹಲವಾರು ಮಂದಿಯನ್ನು ಹುಡುಕಿಟ್ಟಿದ್ದಾರಂತೆ. ಅದರಲ್ಲಿ ಮೊದಲ ಹತ್ತು ಮಂದಿಯ ಹೆಸರನ್ನು ಪ್ರಿಯಾಂಕ ಮುಂದಿರಿಸಿದ್ದಾರೆ. ಆ ಪಟ್ಟಿಯಲ್ಲಿರುವ ಹತ್ತು ಮಂದಿ ವರರೆಲ್ಲರೂ ಸದ್ಯ ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಾಯಕ ನಟರಂತೆ!

ಮೊನ್ನೆ ಮೊನ್ನೆ ಬಾಲಿವುಡ್ ಐಟಂ ಬೆಡಗಿ ರಾಖಿ ಸಾವಂತ್ ಮದುವೆ ವಿಷಯ ಎಲ್ಲಡೆ ಪ್ರಸ್ತಾಪವಾಗಿತ್ತು. ತನಗೆ ಬೇಕಾದ ವರನನ್ನು ಆಯ್ಕೆ ಮಾಡಲು ರಾಖಿ ಟಿವಿ ಕಾರ್ಯಕ್ರಮದ ಮೂಲಕ ಸ್ವಯಂವರ ಏರ್ಪಡಿಸಿದ್ದರು. ಈಗ ಪ್ರಿಯಾಂಕ ಛೋಪ್ರಾ ಸರದಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada