ಶಮಿತಾ ಶೆಟ್ಟಿ ಜತೆ ನೈಟ್ ಕ್ಲಬ್ ನಲ್ಲಿ ಶೇನ್ ವಾರ್ನ್!

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಒಡೆತನದ ರಾಜಸ್ತಾನ್ ರಾಯಲ್ಸ್ ತಂಡದ ನಾಯಕ ಶೇನ್ ವಾರ್ನ್ ಮತ್ತು ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಮಧ್ಯೆ ಈ ರೀತಿಯ ಸುದ್ದಿಯೊಂದು ಸದ್ಯಕ್ಕೆ ಚಾಲ್ತಿಯಲ್ಲಿದೆ. ತನ್ನ ಖಾಸಗಿ ಬದುಕಿನಲ್ಲಿ ಸಭ್ಯಸ್ಥನಲ್ಲದ ಆಸ್ಟ್ರೇಲಿಯಾದ 'ಬ್ಯಾಡ್ ಬಾಯ್' ವಾರ್ನ್ ಮತ್ತು ಶಮಿತಾ ಶೆಟ್ಟಿ ನಡುವೆ ಗೆಳೆತನದ ಬೆಸುಗೆ ಏರ್ಪಟ್ಟಿದೆ ಎಂದು ಮೈದಾನದಲ್ಲೂ ಹೊರಗೂ ಕೇಳಿಬರುತ್ತಿದೆ. ಹಿಂದಿ ಚಿತ್ರರಂಗದಲ್ಲಿ ಅಷ್ಟೇನೂ ಹೆಸರು ಮಾಡದ ಶಮಿತಾರನ್ನು ಒಮ್ಮೆಯಷ್ಟೆ ಭೇಟಿಯಾಗಿದ್ದ ವಾರ್ನ್ ಈಗ ಫುಲ್ ಟೈಂ ತನ್ನ ತಂಡದ ಜತೆ ಕಂಡು ಶಮಿತಾಳ ಮೇಲೆ ಆತನ ಕಣ್ಣು ಬಿದ್ದಿದೆ ಎಂದು ಸುದ್ದಿ. ಹೇಳಿ ಕೇಳಿ ವಾರ್ನ್ 'ರಸಿಕ' ಬೇರೆ.
ಕೆಲವು ಮೂಲಗಳ ಪ್ರಕಾರ, ಶಮಿತಾ ಹಾಗೂ ಶೇನ್ ವಾರ್ನ್ ಜತೆಯಾಗಿ ನೈಟ್ ಕ್ಲಬ್ಬಿನಲ್ಲಿ ಇರುವುದನ್ನು ಮಾಧ್ಯಮದವರು ಕಂಡಿದ್ದರು. ಮಾಧ್ಯಮದ ಮಂದಿ ಈ ಹೊಸ ಜೋಡಿಗಳ ಫೋಟೋ ತೆಗೆಯಲು ಪ್ರಯತ್ನಿಸಿದಾಗ ಶಮಿತಾ ಕ್ಲಬ್ಬಿನ ಹಿಂಬಾಗಿಲಿನಿಂದ ಹೊರಟು ಹೋಗಿದ್ದಾಳೆ. ಈ ವಿಷಯದ ಬಗ್ಗೆ ಶಮಿತಾರನ್ನೇ ಕೇಳಿದರೆ, ''ಅದು ಕೇವಲ ತಂಡದ ಗೆಲುವಿನ ಸಲುವಾಗಿ ನಡೆಸಿದ ಪಾರ್ಟಿ. ಅಲ್ಲಿ ಕೇವಲ ನಾನು ವಾರ್ನ್ ಮಾತ್ರ ಇರಲಿಲ್ಲ, ಇಡೀ ರಾಜಸ್ತಾನ್ ರಾಯಲ್ಸ್ ತಂಡದ ಆಟಗಾರರಿದ್ದರು. ನಾನೇನೂ ಪ್ರತ್ಯೇಕವಾಗಿ ವಾರ್ನ್ ಜೊತೆ ಬಂದಿಲ್ಲ ಎಂದು ಶಮಿತಾ ಉತ್ತರ ನೀಡಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











