»   »  ಸೋನಾಲಿ ಕುಲಕರ್ಣಿಯೂ ಪಾರದರ್ಶಕ ವಸ್ತ್ರವೂ!

ಸೋನಾಲಿ ಕುಲಕರ್ಣಿಯೂ ಪಾರದರ್ಶಕ ವಸ್ತ್ರವೂ!

Posted By:
Subscribe to Filmibeat Kannada
Sonali Kulkarni
ಒಟ್ಟಿನಲ್ಲಿ ಬಾಲಿವುಡ್ ನಟಿಯರ ನಾಚಿಕೆ, ಮಾನ, ಮರ್ಯಾದೆ ಸಭೆ ಸಮಾರಂಭಗಳಲ್ಲಿ ಹರಾಜಾಗುತ್ತಿದೆ ಎಂಬುದಕ್ಕೆ ಇಲ್ಲಿದೆ ಒಂದುನಿದರ್ಶನ! 'ಸಾವರಿಯ' ಪ್ರೀಮಿಯಂ ಶೋನಲ್ಲಿ ನಟಿ ಸೋನಾಲಿ ಕುಲಕರ್ಣಿ ಅವರನ್ನು ನೋಡಿದ ಪತ್ರಕರ್ತರು ಎರಡೆರಡು ಬಾರಿ ಕಣ್ಣುಜ್ಜಿಕೊಂಡು ನೋಡುವಂತಾಯಿತು. ಕಾರಣ ಆಕೆ ಬಟ್ಟೆ ತೊಟ್ಟಿದ್ದಾರೋ ಇಲ್ಲವೋ ಎಂಬ ಅನುಮಾನ!

ಪಾರದರ್ಶಕ ಉಡುಪಿನಲ್ಲಿ ಬಂದಿದ್ದ ಆಕೆಯನ್ನು ಕಂಡವರು ಇನ್ನೂ ಚೇತರಿಸಿಕೊಂಡಿಲ್ಲವಂತೆ! ಆಕೆ ತೊಟ್ಟಿದ್ದ ವಸ್ತ್ರ ಒಳ ಉಡುಪುಗಳ ಬ್ರ್ಯಾಂಡ್ ಯಾವುದೆಂದು ಹೇಳುವಷ್ಟು ಪಾರದರ್ಶಕವಾಗಿತ್ತು. ಬಾಲಿವುಡ್ ನಟಿಯರಲ್ಲಿ ಸ್ಪರ್ಧೆ ಹೇಗಿದೆಯಂದರೆ, ಟೂ ಪೀಸ್ ಬಟ್ಟೆಗಳು, ಬಿಕಿನಿಗಳನ್ನು ಬದಿಗಿಟ್ಟು ಪಾರದರ್ಶಕ ವಸ್ತ್ರಗಳನ್ನು ತೊಡುತ್ತಿದ್ದಾರೆ. ಒಟ್ಟಿನಲ್ಲಿ ಬಟ್ಟೆ ತೊಟ್ಟಿದ್ದೇವೆ ಎಂದು ನಂಬಿಸುವುದಷ್ಟೇ ಅವರ ಉದ್ದೇಶ.

ಹದಿನೇಳನೇ ಶತಮಾನದಲ್ಲಿ ಪಾರದರ್ಶಕವಾಗಿದ್ದ ಮಸ್ಲಿನ್ ಬಟ್ಟೆಗಳು ಯೂರೋಪ್ ನಲ್ಲಿ ಬಹಳ ಪ್ರಸಿದ್ಧವಾಗಿದ್ದವು. ಬೆಂಕಿ ಪೊಟ್ಟಣದಲ್ಲಿ ಮಡಿಚಿಡಬಹುದಾಗಿದ್ದ ಮಸ್ಲಿನ್ ಬಟ್ಟೆಗಳು ಭಾರತಕ್ಕೆ ಬಂದಾಗ ಇತಿಹಾಸದಲ್ಲಿ ಎಷ್ಟೆಲ್ಲಾ ಚಳವಳಿಗಳಾದವು ಎಂಬುದನ್ನು ಓದಿದ್ದೇವೆ. ಈಗ ಬಾಲಿವುಡ್ ಗೂ ವಸ್ತ್ರ ಸಂಹಿತೆ ಬೇಕು ಅನ್ನಿಸುವುದಿಲ್ಲವೇ?

(ದಟ್ಸ್ ಕನ್ನಡ ಚಿತ್ರವಾರ್ತೆ)

ಸ್ಲಂಡಾಗ್ ಮಿಲಿಯನೇರ್ ಬಾಲನಟಿ ಮಾರಾಟಕ್ಕೆ?
ಡ್ಯಾನಿ ಬಾಯ್ಲ್ ನಿರ್ದೇಶನದಲ್ಲಿ ಐಶ್ವರ್ಯ ರೈ?
ಐಶ್ವರ್ಯ ರೈ ತಾರಾ ವರ್ಚಸ್ಸು ಒಂದಿನಿತು ಕುಗ್ಗಿಲ್ಲ!
ಸಲ್ಮಾನ್ ಖಾನ್ ನನ್ನ ಸಹ ನಟ ಮಾತ್ರ: ಅಸಿನ್
ನಯನ ತಾರಾ ಸೊಂಟದ ವಿಷಯ ಬೇಡವೊ ಶಿಷ್ಯ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada