»   »  ಟುಮಾರೊ ಚಿತ್ರಕ್ಕಾಗಿ ಬೆತ್ತಲಾದಸೀಮಾ ಬಿಸ್ವಾಸ್!

ಟುಮಾರೊ ಚಿತ್ರಕ್ಕಾಗಿ ಬೆತ್ತಲಾದಸೀಮಾ ಬಿಸ್ವಾಸ್!

Subscribe to Filmibeat Kannada

ಶೇಖರ್ ಕಪೂರ್ ನಿರ್ದೇಶನದ 'ಬ್ಯಾಂಡಿಡ್ ಕ್ವೀನ್' ಚಿತ್ರದಲ್ಲಿ ನಗ್ನ ವಾಗಿ ಕಾಣಿಸಿಕೊಂಡು ವಿವಾದ ಸೃಷ್ಟಿಸಿದ್ದ ಸೀಮಾ ಬಿಸ್ವಾಸ್ ಮತ್ತೊಮ್ಮೆ ಅರೆನಗ್ನವಾಗಿ ಕಾಣಿಸುತ್ತಿದ್ದಾರೆ. ಅಮ್ಜಾದ್ ಖಾನ್ ಅವರ Tomorrow ಚಿತ್ರದಲ್ಲಿ ಟಾಪ್ ಲೆಸ್ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭೂಗತ ಜಗತ್ತಿನ ಕಥಾ ಹಂದರವನ್ನು Tomorrow ಚಿತ್ರ ಒಳಗೊಂಡಿದೆ.

ಚಿತ್ರದ ದೃಶ್ಯವೊಂದರಲ್ಲಿ ಅರೆ ಬೆತ್ತಲೆಯಾಗಿ ನಟಿಸಿದ್ದು ಅವರ ಬೆನ್ನಿನ ಭಾಗವನ್ನು ಸಂಪೂರ್ಣವಾಗಿ ತೋರಿಸಲಾಗಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ಅಮ್ಜಾದ್ ಮಾತನಾಡುತ್ತಾ, ಹೌದು ಚಿತ್ರದ ಈ ದೃಶ್ಯ ತುಂಬಾ ಮಹತ್ವದ್ದಾಗಿದೆ. ಇದೊಂದು ಭಾವನಾತ್ಮಕ ಸನ್ನಿವೇಶ ಎನ್ನುತ್ತಾರೆ ಅವರು.

ಪೊಲೀಸರು ಕಾಲಿಯಾ ಪಾತ್ರದಲ್ಲಿ ನಟಿಸಿರುವ ರಾಜ್ ಅರ್ಜುನ್ ಹಿಂದೆ ಬಿದ್ದಿರುತ್ತಾರೆ. ತಪ್ಪಿಸಿಕೊಳ್ಳಲು ಸೀಮಾ ಹಿಂದೆ ಅವರು ಬಚ್ಚಿಟ್ಟುಕೊಳ್ಳುತ್ತಾರೆ. ಪೊಲೀಸರು ಹತ್ತಿರ ಬಂದಾಗ ಸೀಮಾ ಪ್ರಣಯ ಸನ್ನಿವೇಶದಲ್ಲಿರುವುದನ್ನು ಕಂಡು ಹೊರಟು ಹೋಗುತ್ತಾರೆ. ಈ ರೀತಿಯಾಗಿ ಕಾಲಿಯಾರನ್ನು ಸೀಮಾ ಚಿತ್ರದಲ್ಲಿ ಕಾಪಾಡುತ್ತಾರೆ ಎಂದು ಆ ಸನ್ನ್ನಿವೇಶದ ಮಹತ್ವವನ್ನು ಅಮ್ಜಾದ್ ತಿಳಿಸಿದ್ದಾರೆ.

ಚಿತ್ರಕತೆಗೆ ಹೊಂದುವಂತೆ ಈ ಸನ್ನಿವೇಶವನ್ನು ಚಿತ್ರೀಕರಿಸಿದ್ದೇವೆ. ಆರಂಭದಲ್ಲಿ ಸೀಮಾಜಿ ಈ ದೃಶ್ಯದಲ್ಲಿ ನಟಿಸಲು ಒಪ್ಪಲಿಲ್ಲ. ಆ ಸನ್ನಿವೇಶದ ಮಹತ್ವವನ್ನು ತಿಳಿಸಿದ ಬಳಿಕ ಅವರು ನಗ್ನವಾಗಿ ನಟಿಸಲು ಅಂಗೀಕರಿಸಿದರು. ಈ ಪ್ರಣಯಭರಿತ ಸನ್ನಿವೇಶವನ್ನು ಮುಂಬೈನ ಸ್ಟುಡಿಯೋ ಒಂದರಲ್ಲಿ ಚಿತ್ರೀಕರಿಸಿದ್ದೇವೆ ಎನ್ನುತ್ತಾರೆ ಅಮ್ಜಾದ್.

ಚಿತ್ರೀಕರಿಸಬೇಕಾದರೆ ಛಾಯಾಗ್ರಾಹಕರನ್ನು ಬಿಟ್ಟರೆ ಯಾರನ್ನೂ ಒಳಗೆ ಬಿಡಲಿಲ್ಲ. ಬರೀ ಬೆನ್ನಿನ ಭಾಗವನ್ನು ಮಾತ್ರ ತೋರಿಸುತ್ತಿದ್ದೇವೆ. ಮುಂಭಾಗವನ್ನು ಈ ಚಿತ್ರದಲ್ಲಿ ತೋರಿಸುತ್ತಿಲ್ಲ. ಸೆನ್ಸಾರ್ ಮಂಡಳಿ ಸಹ ಇದಕ್ಕೆ ಒಪ್ಪಬಹುದು. ಹಾಗಾಗಿ ಬೆನ್ನಿನ ಸಂಪೂರ್ಣ ಭಾಗವನ್ನು ನಗ್ನವಾಗಿ ತೋರಿಸಿದ್ದೇವೆ ಅಷ್ಟೆ ಎನ್ನುತ್ತಾರೆ ನಿರ್ದೇಶಕರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada