»   » ಬಾಲಿವುಡ್ ಮೈದಾನಕ್ಕೆ ಹರ್ಭಜನ್ ಸಿಂಗ್

ಬಾಲಿವುಡ್ ಮೈದಾನಕ್ಕೆ ಹರ್ಭಜನ್ ಸಿಂಗ್

Subscribe to Filmibeat Kannada

"ವಿಕ್ಟರಿ" ಎಂಬ ಹಿಂದಿ ಚಿತ್ರದಲ್ಲಿ ಕ್ರಿಕೆಟಿಗ ಹರಭಜನ್ ಸಿಂಗ್ ಗೌರವ ಪಾತ್ರದಲ್ಲಿ ನಟಿಸಿದ್ದಾರೆ. ಹರ್ಮನ್ ಬವೇಜಾ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಈ ವಿಷಯನ್ನು ಹರಭಜನ್ ಪ್ರಸ್ತಾಪಿಸಿದರು. ''ನನ್ನಲ್ಲಿ ಉತ್ತಮ ನಟನಿದ್ದಾನೆ. ಒಂದು ವೇಳೆ ನಾನು ಕ್ರಿಕೆಟ್ ಬಿಟ್ಟು ಬಾಲಿವುಡಗೆ ಬಂದರೆ ನೀವು "ಘಜನಿ ಮತ್ತು ರಜನಿ" ಇಬ್ಬರನ್ನೂ ಮರೆಯುತ್ತೀರಿ ಹಾಗೂ ನನ್ನ ಅಭಿಮಾನಿ ಆಗುವುದರಲ್ಲಿ ಸಂದೇಹವಿಲ್ಲ'' ಎಂದು ಸಿನಿಮಾ ಪತ್ರಕರ್ತರ ಪ್ರಶ್ನೆಗೆ ಭಜ್ಜಿ ಉತ್ತರಿಸಿದರು.

ನಿರ್ಮಾಪಕ ಅಜಿತ್ ಪಾಲ್ ಬಯಸಿದರೆ "ವಿಕ್ಟರಿ 2" ಚಿತ್ರದಲ್ಲಿ ನಾನೇ ನಾಯಕ ನಟನಾಗುತ್ತೇನೆ. ಸದಾ ಒಂದಲ್ಲೊಂದು ವಿವಾದದಲ್ಲಿರುವ ಭಜ್ಜಿ ಬಗ್ಗೆ ಒಂದು ಚಿತ್ರ ಮಾಡುವುದಕ್ಕಿಂತಲೂ ಒಂದು ಧಾರಾವಾಹಿ ಮಾಡುವುದೇ ಒಳಿತು ಎಂದು ಹರ್ಮನ್ ಬವೇಜಾ ಹಾಸ್ಯ ಚಟಾಕಿ ಹಾರಿಸಿದರು. ಇದಕ್ಕೆ ಪ್ರತಿಕ್ರಿಯಿಸುತ್ತಾ ಭಜ್ಜಿ, ಹೌದು ನನ್ನನ್ನು ಹಾಕಿಕೊಂಡು ಧಾರಾವಾಹಿ ಮಾಡಿದರೆ ಹಿಂದಿಯ ಜನಪ್ರಿಯ ಧಾರಾವಾಹಿಗಳನ್ನು ಹಿಂದಿಕ್ಕ್ಕುತ್ತೇನೆ ಎಂದರು.

ಸದ್ಯಕ್ಕೆ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಅಮೀರ್ ಖಾನ್ ಗೆ ಯಾರೂ ಪ್ರತಿಸ್ಪರ್ಧಿಗಳೇ ಇಲ್ಲದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಸುಳಿವು ಕೊಡದೆ ಬಾಲಿವುಡ್ ಮೈದಾನಕ್ಕೆ ಏಕಾಏಕಿ ಹರ್ಭಜನ್ ಸಿಂಗ್ ಇಳಿದಿದ್ದಾರೆ. ಅಮೀರ್ ಖಾನ್ ವಿಕೆಟನ್ನ್ನು ಉರುಳಿಸುವ ಮೂಲಕ 'ಬೆಳ್ಳಿ'ಕಪ್ಪನ್ನು ಹೊಡೆಯಬೇಕು ಎಂಬುದು ಹರ್ಭಜನ್ ರ ಲೆಕ್ಕಾಚಾರ. ಇನ್ನಿಂಗ್ಸ್ ಈಗಷ್ಟೆ ಶುರುವಾಗಿದೆ, ಮುಂದೆ ಏನಾಗುತ್ತದೆ ಎಂಬುದು ತೆರೆಯ ಮೇಲಷ್ಟೆ ನೋಡಿ ತಿಳಿದುಕೊಳ್ಳಬೇಕು!!

(ಏಜೆನ್ಸೀಸ್)

Please Wait while comments are loading...