»   »  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಕಂಕಣಬಲ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಕಂಕಣಬಲ

Subscribe to Filmibeat Kannada
Shilpa Shetty to marry Raj Kundra
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ(33)ಗೆ ಕಡೆಗೂ ಕಂಕಣ ಬಲ ಕೂಡಿಬಂದಿದೆ. ತನ್ನ ಬಹುಕಾಲದ ಗೆಳೆಯ,ಲಂಡನ್ ಉದ್ಯಮಿ ರಾಜ್ ಕುಂದ್ರಾ(34) ಜತೆ ಶಿಲ್ಪಾ ಸಪ್ತಪದಿ ತುಳಿಯಲಿದ್ದಾರೆ. ಮುಂದಿನ ಅಕ್ಟೋಬರ್ ನಲ್ಲಿ ಸಾಂಪ್ರಾದಾಯಿಕ ಪದ್ಧತಿಯಲ್ಲಿ ಹಸೆಮಣೆ ಏರಲು ಸಿದ್ಧವಾಗಿದ್ದಾರೆ.

''ಸಾಂಪ್ರಾದಾಯಿಕ ವಿವಾಹದಲ್ಲಿ ನನಗೆ ಬಹಳಷ್ಟು ನಂಬಿಕೆಯಿದೆ. ನನ್ನ ತಂದೆ ತಾಯಿ ಸುದೀರ್ಘ 35 ವರ್ಷಗಳಷ್ಟು ಕಾಲ ವೈವಾಹಿಕ ಜೀವನ ನಡೆಸಿದ್ದಾರೆ. ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗುತ್ತವೆ ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ'' ಎನ್ನುತ್ತಾರೆ ಶಿಲ್ಪಾ.

''ನನ್ನ ಬಾಳ ಸಂಗಾತಿಯಾಗುವ ಸೂಕ್ತ ವ್ಯಕ್ತಿಯಾರು ಎಂದು ಯೋಚಿಸಿದಾಗ ಥಟ್ಟನೆ ನನಗೆ ಹೊಳೆದದ್ದು ರಾಜ್ ಕುಂದ್ರಾ. ನಾನು ಪರಿಪೂರ್ಣವಾಗಿ ಅವರನ್ನು ಆತ್ಮಬಂಧುವಾಗಿ ಸ್ವೀಕರಿಸಿದ್ದೇನೆ'' ಎಂದು ತಮ್ಮ ಬಾಳ ಸಂಗಾತಿಯ ಬಗ್ಗೆ ಹೇಳುವಾಗ ಶಿಲ್ಪಾ ಭಾವುಕರಾಗುತ್ತಾರೆ.

ಶಿಲ್ಪಾ ಮತ್ತು ರಾಜ್ ಕುಂದ್ರಾ ಎರಡು ವರ್ಷಗಳಿಂದ ಪರಮಾಪ್ತ ಗೆಳೆಯರು. ಶಿಲ್ಪಾ ಇತ್ತೀಚೆಗೆ ವಿಬ್ರಿಡ್ಜ್ ನಲ್ಲಿ(ಇಂಗ್ಲೆಂಡ್) 5 ದಶಲಕ್ಷ ಫೌಂಡ್ ಗಳಲ್ಲಿ ಏಳು ಬೆಡ್ ರೂಂಗಳನ್ನು ಹೊಂದಿರುವ ಅದ್ದೂರಿ ಮನೆ ಕಟ್ಟಿಸಿದ್ದಾರೆ. ಸಾಕಷ್ಟು ಶ್ರೀಮಂತನಾಗಿರುವ ರಾಜ್ ಕುಂದ್ರಾ ಸಹ ಹಳೆಯ ಕುಬೇರ ಪಟ್ಟಿಯಲ್ಲಿದ್ದಾರೆ. ಅವರು ದುಬೈನಲ್ಲಿ ಬೆಳೆಬಾಳುವ ಹರಳು ಮತ್ತು ಲೋಹಗಳ ವ್ಯಾಪಾರಿ. ಈಗಾಗಲೇ ವಿವಾಹವಾಗಿರುವ ಕುಂದ್ರಾಗೆ ಒಬ್ಬ ಮಗಳೂ ಇದ್ದಾರೆ. ಶಿಲ್ಪಾ ವಿವಾಹ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ.

(ಏಜೆನ್ಸೀಸ್)

ಇದನ್ನೂ ಓದಿ
ಜೇಮ್ಸ್ ಬಾಂಡ್ ಗೆ ಸಿಕ್ಕಳು ಉಕ್ರೇನಿನ ಬೆಡಗಿ
ಬಚ್ಚನ್ ಮಗನಾಗಿ ಹಿಂದಿ ಚಿತ್ರದಲ್ಲಿ ಕಿಚ್ಚ ಸುದೀಪ್
ಕಿಂಗ್ ಖಾನ್ ನ ದುಬೈ ಐಷಾರಾಮಿ ವಸತಿಗೃಹ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada