»   »  ಪ್ರಿಯಾಂಕಾರನ್ನು ಬುಟ್ಟಿಗೆ ಹಾಕಿಕೊಂಡ ನೀಲಿಮಾ

ಪ್ರಿಯಾಂಕಾರನ್ನು ಬುಟ್ಟಿಗೆ ಹಾಕಿಕೊಂಡ ನೀಲಿಮಾ

Subscribe to Filmibeat Kannada

ಶಾಹೀದ್ ಕಪೂರ್ ಅವರ ತಾಯಿ ನೀಲಿಮಾ ಅಜ್ಮಿ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ. ಈ ಹಿಂದೆ ನೀಲಿಮಾ ಅವರು 'ಇಷ್ಕ್ ವಿಷ್ಕ್'ಎಂಬ ಚಿತ್ರದಲ್ಲಿ ಶಾಹೀದ್ ರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಅಡಿಯಿಟ್ಟ ನೀಲಿಮಾಗೆ ಆದಿಯಲ್ಲೇ ನಿರುತ್ಸಾಹ ಎದುರಾಗಿದೆ.

ಆಕೆ ಸಿದ್ಧಪಡಿಸಿದ ಎರಡು ಚಿತ್ರಕತೆಗಳನ್ನು ಇಮ್ರಾನ್ ಹಸ್ಮಿ ಬಳಿ ಚರ್ಚಿಸಿ ಯಾವುದಾದರೂ ಒಂದು ಚಿತ್ರದಲ್ಲಿ ನಟಿಸುವಂತೆ ವಿನಂತಿಸಿಕೊಂಡಿದ್ದರು. ಆದರೆ ಇಮ್ರಾನ್ ಹಸ್ಮಿ ನಯವಾಗಿ ತಿರಸ್ಕರಿಸಿ ಆಕೆಯ ಆಸೆಗೆ ತಣ್ಣೀರೆರಚಿದ್ದಾರೆ. ಇದರಿಂದ ಮನ ನೊಂದಆಕೆ ವಿಧಿಯಿಲ್ಲದೆ ಮನೆಗೆ ಹಿಂತಿರುಗಿದ್ದಾರೆ.

ಆದರೆ ಶಾಹೀದ್ ಪ್ರಿಯತಮೆ ಪ್ರಿಯಾಂಕಾ ಚೋಪ್ರಾ ಬಳಿಗೆ ಹೊರಟರೆ ಕೆಲಸವಾಗುತ್ತದೆ ಎಂದರಿತು ಇದೇ ಕತೆಯನ್ನ್ನು ಆಕೆ ಹೇಳಿದರು. ಸುಲಭವಾಗಿ ತೋಳ ಹಳ್ಳಕ್ಕೆ ಬಿದ್ದಿತ್ತು.ತಾನು ಈ ಚಿತ್ರದಲ್ಲಿ ನಟಿಸುವುದಾಗಿ ಪ್ರಿಯಾಂಕ ಮಾತುಕೊಟ್ಟಿದ್ದಾರೆ. ನಾಯಕ ನಟನ ಸ್ಥಾನಕ್ಕೆ ಶಾಹೀದ್ ಅವರನ್ನೇ ಆಯ್ಕೆ ಮಾಡಿಕೊಂಡರೆ ಚೆನ್ನಾಗಿರುತ್ತದೆ ಎಂಬ ಸೂಚನೆಯನ್ನು ಪ್ರಿಯಾಂಕ ಕೊಟ್ಟಿದ್ದಾರಂತೆ.

ಈ ಬಗ್ಗೆ ನೀಲಿಮಾ ಮಾತನಾಡುತ್ತಾ, ತಮ್ಮ ಬಳಿ ಎರಡು ಚಿತ್ರಕತೆಗಳಿವೆ. ಸದ್ಯಕ್ಕೆ ಒಂದನ್ನು ತೆರೆಗೆ ತರುತ್ತಿದ್ದೇವೆ. ಈ ಚಿತ್ರದಲ್ಲಿ ವಿರಾಮದ ನಂತರ ನಾಯಕಿ ದರ್ಶನ ಕೊಡುತ್ತಾಳೆ. ಇದಕ್ಕೆ ಬಲವಾದ ಕಾರಣವೂ ಉಂಟು. ಅದೇನು ಎಂಬುದು ಸದ್ಯಕ್ಕೆ ಸಸ್ಪೆನ್ಸ್. ಪ್ರಿಯಾಂಕಾಗೆ ಈ ಕತೆ ತುಂಬಾ ಇಷ್ಟವಾಗಿದೆ ಎನ್ನುತ್ತಾರೆ. ಏತನ್ಮಧ್ಯೆ ಪ್ರಿಯಾಂಕ ಮತ್ತು ಶಾಹೀದ್ ಕಪೂರ್ ನಟನೆಯ ಹೊಸ ಚಿತ್ರ 'ಕಮೀನೆ' ಆಗಸ್ಟ್ 14ರಂದುಬಿಡುಗಡೆಯಾಗಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada