»   »  ವಕೀಲನಾಗಿ ಶಾರುಖ್ ಖಾನ್ ಚಿತ್ರ

ವಕೀಲನಾಗಿ ಶಾರುಖ್ ಖಾನ್ ಚಿತ್ರ

Subscribe to Filmibeat Kannada

ಎಲ್ಲಾ ಸುಸೂತ್ರವಾಗಿ ನಡೆದರೆ ಬಾಲಿವುಡ್ ನಟ ಶಾರುಖ್ ಖಾನ್ ವಕೀಲರ ಪಾತ್ರದಲ್ಲಿ ಕಾಣಿಸಲಿದ್ದಾರೆ. ತಮ್ಮ ಮುಂದಿನ ಚಿತ್ರ "ಜಾಲಿ ಎಲ್ ಎಲ್ ಬಿ' ಚಿತ್ರದಲ್ಲಿ ಅವರು ವಕೀಲನ ಪಾತ್ರವನ್ನು ಪೋಷಿಸಲಿದ್ದಾರೆ. ಈ ಚಿತ್ರ ಮುಂದಿನ ವರ್ಷ ಸೆಟ್ಟೇರುವ ನಿರೀಕ್ಷೆ ಇದೆ.

ಶಾರುಖ್ ರ ರೆಡ್ ಚಿಲ್ಲೀಸ್ ಎಂಟರ್ ಟೈನ್ ಮೆಂಟ್ ಸಂಸ್ಥೆಯೊಂದಿಗೆ ರಾಕೇಶ್ ಉಪಾಧ್ಯಾಯ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ವಕೀಲರ ಜೀವನ ಮತ್ತು ನ್ಯಾಯಾಂಗದ ವ್ಯವಸ್ಥೆಯ ಸುತ್ತ ಕತೆ ಸುತ್ತುತ್ತದೆ ಎನ್ನುತ್ತವೆ ಬಾಲಿವುಡ್ ಮೂಲಗಳು. ಸುಭಾಷ್ ಕಪೂರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಈ ಹಿಂದೆ 'ಸಲಾಂ ಇಂಡಿಯಾ' ಎಂಬ ಚಿತ್ರವನ್ನು ಸುಭಾಷ್ ನಿರ್ದೇಶಿಸಿದ್ದರಂತೆ. ಚಿತ್ರಕತೆಗೆ ಸಂಬಂಧಿಸಿದಂತೆ ಈಗಾಗಲೆ ಶಾರುಖ್ ರೊಂದಿಗೆ ಮಾತುಕತೆ ನಡೆದಿದೆ.ಚಿತ್ರಕತೆ ಶಾರುಖ್ ಗೆ ಇಷ್ಟವಾಗಿದೆ ಎನ್ನುತ್ತಾರೆ ಸುಭಾಷ್. ಶಾರುಖ್ ಅವರ ಸ್ವಂತ ನಿರ್ಮಾಣದೊಂದಿಗೆ ಚಿತ್ರ ನಿರ್ಮಿಸುತ್ತಿರುವುದಕ್ಕೆ ತುಂಬ ಸಂತೋಷವಾಗುತ್ತಿದೆ ಎನ್ನುತ್ತಾರೆ ರಾಕೇಶ್ ಉಪಾಧ್ಯಾಯ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada