Don't Miss!
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- News
ಮಂಗಳೂರಿನಲ್ಲಿ ಚಾಕು ಇರಿತದಿಂದ ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿ ಸಾವು
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪಠಾಣ್'ಗಾಗಿ ಒಟ್ಟಿಗೆ ಸೇರಲಿದ್ದಾರೆ 50,000 ಶಾರುಕ್ ಅಭಿಮಾನಿಗಳು!
ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾದ ವಿರುದ್ಧ ಯೋಜಿತ ವಿವಾದಗಳನ್ನು ಮಾಡಲಾಗುತ್ತಿದೆ. ಒಂದು ದೊಡ್ಡ ಗುಂಪಂತೂ ಸಿನಿಮಾವನ್ನು ಸೋಲಿಸಿಯೇ ತೀರಬೇಕೆಂದು ಪಣ ತೊಟ್ಟಿದೆ. ಆದರೆ ಶಾರುಖ್ ಖಾನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬೆಂಬಲಕ್ಕೆ ಬಂದಿದ್ದಾರೆ.
'ಪಠಾಣ್' ಸಿನಿಮಾ ಜನವರಿ 25 ರಂದು ತೆರೆಗೆ ಬರಲಿದ್ದು, ಅದೇ ದಿನ ಸುಮಾರು ಐವತ್ತು ಸಾವಿರ ಶಾರುಖ್ ಖಾನ್ ಅಭಿಮಾನಿಗಳು ಒಂದೇ ಸಮಯಕ್ಕೆ ದೇಶದ ಬೇರೆ-ಬೇರೆ ನಗರಗಳಲ್ಲಿ 'ಪಠಾಣ್' ಸಿನಿಮಾ ವೀಕ್ಷಿಸುವ ಮೂಲಕ ಶಾರುಖ್ ಖಾನ್‌ಗೆ ಬೆಂಬಲ ನೀಡುವ ಜೊತೆಗೆ ತಮ್ಮ ಅಭಿಮಾನ ಮೆರೆಯಲಿದ್ದಾರೆ.
ಶಾರುಖ್ ಖಾನ್‌ರ ಅಧಿಕೃತ ಫ್ಯಾನ್ಸ್ ಕ್ಲಬ್ ಈ ವಿಶೇಷ ಫಸ್ಟ್ ಡೇ ಫಸ್ಟ್ ಶೋ ಅನ್ನು ಆಯೋಜಿಸಿದ್ದು, ದೇಶದ ಸುಮಾರು 200 ನಗರಗಳಲ್ಲಿ ಏಕಕಾಲಕ್ಕೆ ಫ್ಯಾನ್ಸ್ ಶೋ ಪ್ರಸಾರವಾಗಲಿದೆ. ಈ ಶೋಗಳ ಬುಕಿಂಗ್ ಮೊತ್ತ ಕನಿಷ್ಟ ಒಂದು ಕೋಟಿ ದಾಟಲಿದೆ ಎನ್ನಲಾಗುತ್ತಿದೆ.
ಮುಂಬೈ ಒಂದರಲ್ಲಿಯೇ ಫ್ಯಾನ್ಸ್ ಕ್ಲಬ್‌ನ ಸದಸ್ಯರಿಗಾಗಿ ಸುಮಾರು 8 ಶೋಗಳನ್ನು ಆಯೋಜಿಸಲಾಗಿದೆ. ಇನ್ನು ದೆಹಲಿಯ ಅಭಿಮಾನಿಗಳಿಗಾಗಿ 7 ಶೋ ಆಯೋಜಿಸಲಾಗಿದೆ. ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ಶಾರುಖ್ ಫ್ಯಾನ್ಸ್ ಕ್ಲಬ್ ವಿಶೇಷ ಶೋಗಳನ್ನು ಅಭಿಮಾನಿಗಳಿಗಾಗಿ ಆಯೋಜಿಸಿದೆ.
ಅಭಿಮಾನಿಗಳ ಈ ಹಬ್ಬ 'ಪಠಾಣ್' ಬಿಡುಗಡೆಯ ದಿನ ಮಾತ್ರವೇ ಇರುವುದಿಲ್ಲ ಬದಲಿಗೆ ಒಂದು ವಾರದ ವರೆಗೂ ಇರಲಿದೆ. ಶಾರುಖ್ ಖಾನ್ ಫ್ಯಾನ್ಸ್ ಕ್ಲಬ್‌ನವರು ಇದಕ್ಕೆಂದೇ ವಿಶೇಷ ಟಿ-ಶರ್ಟ್ ಹಾಗೂ ಇತರ ಫ್ಯಾಷನ್ ಆಕ್ಸಸರಿಗಳನ್ನು ತಯಾರಿಸಿದ್ದು ಅಭಿಮಾನಿಗಳಿಗೆ ವಿತರಿಸಲಿದ್ದಾರೆ.
''ನಾವು 'ಪಠಾಣ್' ಸಿನಿಮಾ ಬಿಡುಗಡೆಯನ್ನು ಹಬ್ಬದಂತೆ ಆಚರಿಸಲಿದ್ದೇವೆ. ಡೊಳ್ಳು, ನಗಾರಿಗಳು ಇರಲಿವೆ, ದೊಡ್ಡ ಕಟೌಟ್‌ಗಳನ್ನು ಕಟ್ಟಲಿದ್ದೇವೆ. ದೇಶದ ಹಲವು ಕಡೆಗಳಲ್ಲಿ ಈ ಸಿನಿಮಾವನ್ನು ನಾವು ಸಂಭ್ರಮಿಸಲಿದ್ದೇವೆ'' ಎಂದಿದ್ದಾರೆ ಶಾರುಖ್ ಫ್ಯಾನ್ಸ್ ಕ್ಲಬ್‌ನ ಯಶ್.
ಸುಮಾರು ಐದು ವರ್ಷಗಳ ಬಳಿಕ 'ಪಠಾಣ್' ಸಿನಿಮಾ ಮೂಲಕ ಶಾರುಖ್ ಖಾನ್ ಕಮ್ ಬ್ಯಾಕ್ ಮಾಡುತ್ತಿದ್ದಾರೆ. 2018 ರಲ್ಲಿ ಬಿಡುಗಡೆ ಆಗಿದ್ದ 'ಝೀರೊ' ಶಾರುಖ್ ನಾಯಕನಾಗಿ ನಟಿಸಿದ್ದ ಕೊನೆಯ ಸಿನಿಮಾ ಆಗಿತ್ತು. ಆ ನಂತರ ಕೇವಲ ಅತಿಥಿ ಪಾತ್ರಗಳಲ್ಲಷ್ಟೆ ಶಾರುಖ್ ಖಾನ್ ಕಾಣಿಸಿಕೊಂಡಿದ್ದರು.
'ಪಠಾಣ್' ಸಿನಿಮಾ ಬಿಡುಗಡೆಯನ್ನು ಸಂಭ್ರಮಿಸಲು ದೇಶದಾದ್ಯಂತ ಅಭಿಮಾನಿಗಳು ಕಾಯುತ್ತಿರುವ ಹೊತ್ತಿನಲ್ಲಿಯೇ ಕೆಲವು ಹಿಂದುಪರ ಸಂಘಟನೆಗಳು ಸಿನಿಮಾವನ್ನು ತುಳಿಯಲು ಸತತ ಪ್ರಯತ್ನದಲ್ಲಿ ನಿರತವಾಗಿವೆ. ಈಗಾಗಲೇ ಸಿನಿಮಾಕ್ಕೆ ಕೇಸರಿ ಬಿಕಿನಿ ವಿವಾದ ಗಂಟು ಹಾಕಲಾಗಿದೆ. ಸೆನ್ಸಾರ್ ಮಂಡಳಿಯು ಸಹ ಹಿಂದುಪರ ಸಂಘಟನೆಗಳ ಒತ್ತಾಯಕ್ಕೆ ಮಣಿದು ಕೆಲವು ಕಟ್ಸ್‌ಗಳನ್ನು ಸಿನಿಮಾಕ್ಕೆ ಸೂಚಿಸಿದೆ.
'ಪಠಾಣ್' ಸಿನಿಮಾವು ಸ್ಪೈ ಆಕ್ಷನ್ ಥ್ರಿಲ್ಲರ್ ಕತೆಯನ್ನು ಒಳಗೊಂಡಿದ್ದು, ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಯಶ್ ರಾಜ್ ಫಿಲಮ್ಸ್. ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ನಟಿಸಿದ್ದಾರೆ.