For Quick Alerts
  ALLOW NOTIFICATIONS  
  For Daily Alerts

  ಅವಕಾಶ ಕೊಡಿಸುತ್ತೇನೆಂದು ರೇಪ್ ಮಾಡಲು ಯತ್ನಿಸಿದ್ದ: ಖ್ಯಾತ ನಟಿಯ ಶಾಕಿಂಗ್ ಹೇಳಿಕೆ

  |

  ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆಂದು ಹೇಳಿ ರೂಂ ಗೆ ಕರೆದು ಅತ್ಯಾಚಾರ ಎಸಗಲು ಯತ್ನಿಸಿದ್ದ ಎಂದು ಮುಂಬೈ ನ ಖ್ಯಾತ ನಟಿಯೊಬ್ಬರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

  ಮೀ ಟೂ ಅಭಿಯಾನ ನಡೆದಾಗ ಖ್ಯಾತ ನಟಿಯರು ತಮ್ಮೊಂದಿಗೆ ಆಗಿದ್ದ ಕಹಿ ಅನುಭವವಗಳನ್ನು ಹೊರಗೆ ಹಾಕಿದ್ದರು. ಹಲವು ಖ್ಯಾತನಾಮರ ಅಸಲಿ ಮುಖಗಳು ಆ ಸಂದರ್ಭದಲ್ಲಿ ಹೊರಗೆ ಬಂದಿದ್ದವು. ಈಗ ಹೊಸದಾಗಿ ಖ್ಯಾತ ನಟಿಯೊಬ್ಬರು ತಮ್ಮೊಂದಿಗಾಗಿದ್ದ 'ಕಾಸ್ಟಿಂಗ್ ಕೌಚ್' ಅನುಭವವನ್ನು ಹಂಚಿಕೊಂಡಿದ್ದಾರೆ.

  ಬಾಲಿವುಡ್ ನ ಕೆಲವು ಚಿತ್ರಗಳಲ್ಲಿ ಅಭಿನಯಿಸಿರುವ, ಪ್ರಸಿದ್ಧ ಟಿವಿ ಶೋಗಳಲ್ಲಿ ಪ್ರಧಾನ ಭೂಮಿಕೆ ನಿಭಾಯಿಸಿರುವ, ಬಿಗ್ ಬಾಸ್ ಶೋ ನಲ್ಲಿ ಸಹ ಕಾಣಿಸಿಕೊಂಡಿದ್ದ ರಶ್ಮಿ ದೇಸಾಯಿ ತಮ್ಮೊಂದಿಗೆ ಆಗಿದ್ದ ಅತ್ಯಾಚಾರ ಯತ್ನ ಬಗ್ಗೆ ಹಲವು ವರ್ಷಗಳ ನಂತರ ಈಗ ಹೊರಹಾಕಿದ್ದಾರೆ.

  16ನೇ ವಯಸ್ಸಿನಲ್ಲೇ ಸಿನಿಮಾ ಅವಕಾಶಕ್ಕಾಗಿ ಅಲೆದಾಟ

  16ನೇ ವಯಸ್ಸಿನಲ್ಲೇ ಸಿನಿಮಾ ಅವಕಾಶಕ್ಕಾಗಿ ಅಲೆದಾಟ

  ರಶ್ಮಿ ದೇಸಾಯಿ ಅವರು ತಮ್ಮ 16ನೇ ವರ್ಷದಲ್ಲಿಯೇ ಸಿನಿಮಾ ದಲ್ಲಿ ನಟಿಸುವ ಆಸೆ ಹೊತ್ತು ಪ್ರಯತ್ನಗಳನ್ನು ಆರಂಭಿಸಿದ್ದರಂತೆ. ಆಗ ಅವರಿಗೆ ಸೂರಜ್ ಎಂಬಾತನೊಬ್ಬ ಪರಿಚಯವಾಗಿದ್ದನಂತೆ. ಆತ ರಶ್ಮಿ ಅವರಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವ ಭರವಸೆ ಕೊಟ್ಟಿದ್ದ.

  ''ಯಶ್‌ರಾಜ್ ಫಿಲ್ಸ್ಮ್ ನಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿದ್ದ''

  ''ಯಶ್‌ರಾಜ್ ಫಿಲ್ಸ್ಮ್ ನಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿದ್ದ''

  ಅಂತೆಯೇ ಆತನನ್ನು ನಂಬಿದ್ದ ರಶ್ಮಿ ಪ್ರತಿದಿನ ಆತನನ್ನು ಭೇಟಿ ಮಾಡಿ ಮಾತನಾಡುತ್ತಿದ್ದರಂತೆ. ಇನ್ನೂಹದಿನಾರು ವರ್ಷದ ರಶ್ಮಿಯನ್ನು ತನ್ನ ಬಣ್ಣದ ಮಾತುಗಳಿಂದ ನಂಬಿಸಿದ್ದ ಸೂರಜ್, ತನಗೆ ಯಶ್ ರಾಜ್ ಫಿಲ್ಮ್ಸ್‌ಂ ನವರು ಗೊತ್ತು, ಬಾಲಾಜಿ ಫಿಲ್ಮ್ಸ್ಂ ನವರು ಗೊತ್ತು ಎಂದು ಹೇಳಿ ಕೆಲವು ಚಿತ್ರಗಳನ್ನೂ ತೋರಿಸಿದ್ದನಂತೆ.

  ರಶ್ಮಿ ಅವರ ದೇಹದ ಅಳತೆ ಕೇಳಿದ್ದ ಸೂರಜ್

  ರಶ್ಮಿ ಅವರ ದೇಹದ ಅಳತೆ ಕೇಳಿದ್ದ ಸೂರಜ್

  ಭೇಟಿಯಾದ ಮೊದಲ ದಿನವೇ ಆತ ರಶ್ಮಿಯನ್ನು ದೇಹದ ಅಳತೆ ಕೇಳಿದ್ದನಂತೆ. ನನಗೆ ಗೊತ್ತಿಲ್ಲವೆಂದು ರಶ್ಮಿ ಹೇಳಿದ್ದರಂತೆ. ನಂತರ ಒಂದು ದಿನ ಆಡಿಶನ್‌ ಗೆ ಬಾ ಎಂದು ಹೊಟೆಲ್ ಒಂದಕ್ಕೆ ಕರೆಸಿಕೊಂಡಿದ್ದಾನೆ.

  ಮದ್ಯ ಕುಡಿಸಲು ಯತ್ನಿಸಿದ್ದ ಸೂರಜ್

  ಮದ್ಯ ಕುಡಿಸಲು ಯತ್ನಿಸಿದ್ದ ಸೂರಜ್

  ಉತ್ಸುಕತೆಯಿಂದ ಹೋದ ರಶ್ಮಿಗೆ ಡ್ರಿಂಕ್ಸ್‌ ಕುಡಿಯಲು ಕೊಟ್ಟನಂತೆ ಆದರೆ ಅದನ್ನು ರಶ್ಮಿ ನಿರಾಕರಿಸಿದ್ದಾರೆ. ಮದ್ಯ ಕುಡಿಸಿ ನನ್ನ ಮೇಲೆ ಅತ್ಯಾಚಾರ ಮಾಡುವ ಇರಾದೆ ಹೊಂದಿದ್ದ ಎಂದು ರಶ್ಮಿ ಸಂದರ್ಶನದಲ್ಲಿ ಹೇಳಿದ್ದಾರೆ. ನಂತರ ಸತತ ಮೂರು ಗಂಟೆ ಕಾಲ ಹಲವು ರೀತಿಯಲ್ಲಿ ರಶ್ಮಿ ಅವರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾನೆ. ನಂತರ ರಶ್ಮಿ ಅಲ್ಲಿಂದ ಹೊರಗೆ ಬಂದಿದ್ದಾರೆ. ಹೊರಗೆ ಬಂದು ತಾಯಿಗೆ ಕರೆ ಮಾಡಿ ಎಲ್ಲ ವಿಷಯವನ್ನು ಹೇಳಿದರಂತೆ.

  ಕಪಾಳಕ್ಕೆ ಹೊಡೆದಿದ್ದ ರಶ್ಮಿ ತಾಯಿ

  ಕಪಾಳಕ್ಕೆ ಹೊಡೆದಿದ್ದ ರಶ್ಮಿ ತಾಯಿ

  ಮಾರನೇ ದಿನ ತಾಯಿಯೊಂದಿಗೆ ಆತನನ್ನು ಭೇಟಿ ಆದಾಗ, ರಶ್ಮಿ ತಾಯಿ ಆತನ ಕಪಾಳಕ್ಕೆ ಭಾರಿಸಿ ಎಚ್ಚರಿಕೆ ನೀಡಿದರಂತೆ. ನಂತರ ಆತನನ್ನು ನಾನು ನೊಡಲೇ ಇಲ್ಲ. ಈಗ ಆತ ಎಲ್ಲಿದ್ದಾನೋ ಸಹ ಗೊತ್ತಿಲ್ಲ ಎಂದು ರಶ್ಮಿ ದೇಸಾಯಿ ಇತ್ತೀಚೆಗೆ ಮ್ಯಾಗಜೀನ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

  English summary
  Famous actress Rashami Desai talked about her me too moment. She said a man promised to gave chance in movie and try to rape me.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X