For Quick Alerts
  ALLOW NOTIFICATIONS  
  For Daily Alerts

  ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಮೊದಲ ದಿನ ಗಳಿಸಿದ್ದೆಷ್ಟು?

  |

  ಆಮಿರ್ ಖಾನ್ ನಟಿಸಿ, ನಿರ್ಮಾಣ ಮಾಡಿರುವ 'ಲಾಲ್ ಸಿಂಗ್ ಚಡ್ಡ' ಸಿನಿಮಾ ನಿನ್ನೆ (ಆಗಸ್ಟ್ 11) ಬಿಡುಗಡೆ ಆಗಿದೆ. ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ನಾಲ್ಕು ವರ್ಷ ಸಮಯ ಹಾಗೂ ಕೋಟ್ಯಂತರ ಹಣವನ್ನು ಇದೊಂದು ಸಿನಿಮಾಕ್ಕಾಗಿ ವ್ಯಯಿಸಿದ್ದ ಆಮಿರ್ ಖಾನ್‌ಗೆ ಮೊದಲ ದಿನ ಬಾಕ್ಸ್ ಆಫೀಸ್ ರಿಪೋರ್ಟ್ ಪೂರ್ಣ ತೃಪ್ತಿಯನ್ನಂತೂ ತಂದುಕೊಟ್ಟಿಲ್ಲ ಹಾಗೆಂದು ಪೂರ್ಣ ನಿರಾಸೆಯನ್ನೂ ಮಾಡಿಲ್ಲ.

  'ಲಾಲ್ ಸಿಂಗ್ ಚಡ್ಡ' ಸಿನಿಮಾದ ಎದುರು ಸ್ಟಾರ್ ನಟ ಅಕ್ಷಯ್ ಕುಮಾರ್ ನಟನೆಯ 'ರಕ್ಷಾ ಬಂಧನ್' ಸಹ ಎದುರಾಳಿಯಾಗಿ ನಿಂತಿದ್ದರಿಂದ ಎರಡು ಸಿನಿಮಾಗಳಿಗೆ ತುಸು ಹಿನ್ನೆಡೆಯೇ ಆಗಿದೆ. ಹಾಗಿದ್ದರೆ 'ಲಾಲ್ ಸಿಂಗ್ ಚಡ್ಡ' ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು? ಇಲ್ಲಿದೆ ಮಾಹಿತಿ.

  'ಲಾಲ್ ಸಿಂಗ್ ಚಡ್ಡ' ಸಿನಿಮಾ ಮೊದಲ ದಿನ ಸುಮಾರು 15 ಕೋಟಿಯಾದರೂ ಗಳಿಸುತ್ತದೆ ಎಂಬ ನಿರೀಕ್ಷೆ ಇತ್ತು ಆದರೆ ಪಿಂಕ್‌ವಿಲ್ಲಾ ಮಾಹಿತಿಯಂತೆ ಈ ಸಿನಿಮಾ ಮೊದಲ ದಿನ ಗಳಿಸುರುವುದು 10.45 ಕೋಟಿಯಿಂದ 11 ಕೋಟಿಯವಷ್ಟೆ. ಮಲ್ಟಿಪ್ಲೆಕ್ಸ್‌ ಚೈನ್‌ಗಳಾದ ಪಿವಿಆರ್, ಐನಾಕ್ಸ್, ಸಿನೆಪಪೊಲೀಸ್‌ ಗಳಲ್ಲಿ ಈ ಸಿನಿಮಾ ಗಳಿಸಿರುವುದು 6.25 ಕೋಟಿಯಷ್ಟೆ. ಇನ್ನುಳಿದ ಹಣ ಬಂದಿರುವುದು ನಾನ್ ಮಲ್ಟಿಪ್ಲೆಕ್ಸ್‌ಗಳಿಂದ.

  ಸಿನಿಮಾದ ಆರಂಭದ ಶೋಗಳು ಚೆನ್ನಾಗಿಯೇ ಆಗಿದ್ದವು, ಅದೇ ಕಾರಣಕ್ಕೆ ಸಿನಿಮಾದ ಮೊದಲ ದಿನದ ಕಲೆಕ್ಷನ್ 15 ಕೋಟಿ ದಾಟುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಮೊದಲ ಶೋ ಬಳಿಕ ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆಗಳು ಹೆಚ್ಚಾದ ಕಾರಣ ಸಂಜೆ, ರಾತ್ರಿ ಶೋಗಳಿಗೆ ಹೆಚ್ಚು ಜನ ಬರಲಿಲ್ಲ. ಅಲ್ಲದೆ ಗುರುವಾರ ವಾರಾಂತ್ಯದ ದಿನವಲ್ಲವಾಗಿರುವ ಕಾರಣದಿಂದಲೂ ಕಲೆಕ್ಷನ್ ಕಡಿಮೆ ಆಗಿರುವ ಸಾಧ್ಯತೆ ಇದೆ.

  'ಲಾಲ್ ಸಿಂಗ್ ಚಡ್ಡ' ಸಿನಿಮಾ ತಂಡ ಈಗ ವಾರಾಂತ್ಯದ ಕಲೆಕ್ಷನ್ ಮೇಲೆ ಕಣ್ಣಿಟ್ಟಿದೆ. ಸ್ವಾತಂತ್ರ್ಯೋತ್ಸವ ಸಹ ಇರುವ ಕಾರಣ ಸರಣಿ ರಜೆಗಳಿದ್ದು, ಈ ಸಮಯದಲ್ಲಿ ಹೆಚ್ಚು ಮಂದಿ ಮಲ್ಟಿಪ್ಲೆಕ್ಸ್‌ಗಳಿಗೆ ಬರಬಹುದೆನ್ನುವ ನಿರೀಕ್ಷೆ ಇದೆ.

  ಆಮಿರ್ ಖಾನ್-ಕರೀನಾ ಕಪೂರ್ ನಟಿಸಿರುವ 'ಲಾಲ್ ಸಿಂಗ್ ಚಡ್ಡ' ಹಾಲಿವುಡ್ ಸಿನಿಮಾ 'ಫಾರೆಸ್ಟ್ ಗಂಪ್' ಸಿನಿಮಾದ ರೀಮೇಕ್ ಆಗಿದೆ. ಸಿನಿಮಾದಲ್ಲಿ ಮುಗ್ಧ ಸಿಖ್ ಪಾತ್ರದಲ್ಲಿ ಆಮಿರ್ ಖಾನ್ ನಟಿಸಿದ್ದಾರೆ. ಸಿನಿಮಾವನ್ನು ಅದ್ವೈತ್ ಚಂದನ್ ನಿರ್ದೇಶನ ಮಾಡಿದ್ದಾರೆ ಚಿತ್ರಕತೆ ಬರೆದಿರುವುದು ಅತುಲ್ ಕುಲಕರ್ಣಿ. ಸಂಗೀತ ನೀಡಿರುವುದು ಪ್ರೀತಮ್ ಮತ್ತು ತನುಜ್ ಟಿಕ್ಕು.

  English summary
  Aamir Khan starer Laal Singh Chaddha movie first day box office collection report is here. Movie not able to cross 11 crore mark.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X