»   » ಮಗಳ ಮೇಲೆ ಆ ಪ್ರಯೋಗ ಮಾಡಲ್ಲ: ಐಶ್ವರ್ಯಾ ರೈ

ಮಗಳ ಮೇಲೆ ಆ ಪ್ರಯೋಗ ಮಾಡಲ್ಲ: ಐಶ್ವರ್ಯಾ ರೈ

Posted By:
Subscribe to Filmibeat Kannada

ಬಾಲಿವುಡ್ ನ ಮೆಹಬೂಬ ಐಶ್ವರ್ಯಾ ರೈ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಆದರೆ ಇಷ್ಟು ದಿನ ತಾಯ್ತನದ ಪರಮ ಸುಖವನ್ನು ಅನುಭವಿಸಿ ಇದೀಗ ಬೆಳ್ಳಿತೆರೆಗೆ ಮತ್ತೆ ಮರಳುತ್ತಿದ್ದಾರೆ. ತಮ್ಮ ಏಕಮಾತ್ರ ಪುತ್ರಿ ಆರಾಧ್ಯರನ್ನೂ ಬೆಳ್ಳಿತೆರೆಗೆ ಪರಿಚಯಿಸುತ್ತಾರಾ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ತನ್ನ ಮಗಳ ಮೇಲೆ ನಾನು ಆ ರೀತಿಯ ಯಾವುದೇ ಪ್ರಯೋಗವನ್ನೂ ಮಾಡಲ್ಲ. ಅವಳನ್ನು ಬೆಳೆಸುವ ಕಡೆಗಷ್ಟೇ ನನ್ನ ದೃಷ್ಟಿ ಎಂದಿದ್ದಾರೆ. ಸಾಮಾನ್ಯವಾಗಿ ಸಿನಿಮಾ ತಾರೆಗಳು ತಮ್ಮ ವಾರಸುದಾರರನ್ನು ಚಿಕ್ಕಂದಿನಲ್ಲೇ ಬೆಳ್ಳಿತೆರೆಗೆ ಪರಿಚಯಿಸುವ ಸಾಹಸಕ್ಕೆ ಕೈಹಾಕುತ್ತಾರೆ. [ಐಶ್ವರ್ಯಾ ರೈ ಮಗಳ ಜೊತೆ ಮಂಗ್ಳೂರಿಗೆ ಬಂದೋದ್ರು!]

Aaradhya has not yet started experimenting with make up: Aishwarya

ಆದರೆ ಈ ವಿಚಾರದಲ್ಲಿ ಐಶ್ವರ್ಯಾ ರೈ ಮಾತ್ರ ಹಿಂದೆ ಸರಿಯುತ್ತಿದ್ದಾರೆ. ಈಗಲೇ ನನ್ನ ಮಗಳಿಗೆ ಮೇಕಪ್ ಹಾಕಿ ಪ್ರಯೋಗಗಳನ್ನು ಮಾಡಲ್ಲ ಎಂದಿದ್ದಾರೆ. ಅವರ ಮಾತುಗಳ ಗೂಡಾರ್ಥ ಈಗಲೇ ತಮ್ಮ ಪುತ್ರಿಯನ್ನು ಬೆಳ್ಳಿತೆರೆಗೆ ಪರಿಚಯಿಸಲ್ಲ ಎಂಬುದು.

ತಮ್ಮ ಪುತ್ರಿಗಾಗಿ ಸಾಕಷ್ಟು ಕಾಲ ಸಿನಿಮಾಗಳಿಂದ ದೂರ ಉಳಿದಿದ್ದರು ಐಶ್ವರ್ಯಾ ರೈ. ಈಗ ತಮ್ಮ ಮಗಳು ಸ್ವಲ್ಪ ದೊಡ್ಡವಳಾಗಿರುವ ಕಾರಣ ಅವರು ಬಣ್ಣದ ಬದುಕಿಗೆ ಮರಳುತ್ತಿದ್ದಾರೆ. ಆರಾಧ್ಯ ಬಚ್ಚನ್ ಇನ್ನೂ ನೆನ್ನೆ ಮೊನ್ನೆ ಹುಟ್ಟಿದಂತೆ ಭಾಸವಾಗುತ್ತಿದ್ದರೂ ಅದಾಗಲೇ ಮೂರು ವರ್ಷ ಮುಗಿಸಿ ನಾಲ್ಕನೇ ವರ್ಷಕ್ಕೆ ಅಡಿಯಿಟ್ಟಿದ್ದಾರೆ.

ಸದ್ಯಕ್ಕಂತೂ ತಮ್ಮ ಪುತ್ರಿಯನ್ನು ಬೆಳ್ಳಿತೆರೆಗೆ ತರಲ್ಲ ಎಂಬ ಆಲೋಚನೆಯಲ್ಲಿ ಐಶೂ ಇದ್ದಾರೆ. ಆದರೆ ಐಶೂ ಮಾತ್ರ ಕರಣ್ ಜೋಹರ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದ ಮೂಲಕ ಬೆಳ್ಳಿತೆರೆಗೆ ರೀ ಎಂಟ್ರಿ ಕೊಡುತ್ತಿದ್ದಾರೆ. ರಣಬೀರ್ ಕಪೂರ್, ಅನುಷ್ಕಾ ಶರ್ಮಾ ತಾರಾಗಣದಲ್ಲಿರುವ ಈ ಚಿತ್ರ ಜೂನ್ 3ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರದ ಶೀರ್ಷಿಕೆ 'ಏ ದಿಲ್ ಹೈ ಮುಷ್ಕಿಲ್'. (ಏಜೆನ್ಸೀಸ್)

English summary
Bollywood star actress Aishwarya Rai Bachchan says Aaradhya has not yet started experimenting with make-up.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada