Don't Miss!
- News
Breaking; ಕೋಲಾರವೇ ಕ್ಷೇತ್ರವೇ ಏಕೆ, ಸಿದ್ದರಾಮಯ್ಯ ಪ್ರತಿಕ್ರಿಯೆ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Sports
ಜಿಂಬಾಬ್ವೆ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ 2ನೇ ದಿನ: Live score
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಾಲಿವುಡ್ ಜನರ ಕುತಂತ್ರಗಳ ಬಿಚ್ಚಿಟ್ಟ ಹಿರಿಯ ನಟ ಗೋವಿಂದ
ನಟ ಗೋವಿಂದ ಒಂದು ಕಾಲದಲ್ಲಿ ಬಾಲಿವುಡ್ ನ ಅತ್ಯಂತ ಬ್ಯುಸಿ ನಟ. ತಮ್ಮ ಭಿನ್ನ ಶೈಲಿಯ ನೃತ್ಯ, ಮ್ಯಾನರಿಸಂ ಗಳಿಂದ ದೊಡ್ಡ ಅಭಿಮಾನಿ ವರ್ಗವನ್ನು ಸಂಪಾದಿಸಿದ್ದರು. ಸತತವಾಗಿ ಹಿಟ್ ಮೇಲೆ ಹಿಟ್ ನೀಡಿದ್ದ ಈ ನಟ ಅಮಿತಾಬ್ ಬಚ್ಚನ್, ಶಾರುಖ್, ಸಲ್ಮಾನ್ ಖಾನ್‌ಗಿಂತಲೂ ಬ್ಯುಸಿಯಾಗಿದ್ದ ದಿನಗಳಿದ್ದವು.
ಆದರೆ ನಿಧಾನಕ್ಕೆ ಅವರ ಸಿನಿಮಾಗಳಿಗೆ ಪ್ರೇಕ್ಷಕರು ಕಡಿಮೆ ಆದರು. ಒಂದು ಹಂತದಲ್ಲಿ ಸಿನಿಮಾ ರಂಗದಿಂದ ದೂರವೇ ಉಳಿದುಬಿಟ್ಟರು ಗೋವಿಂದ. ಅವರನ್ನು ಮತ್ತೆ ಸಿನಿಮಾಕ್ಕೆ ಕರೆತಂದಿದ್ದು ಸಲ್ಮಾನ್ ಖಾನ್. ಆ ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಮತ್ತೆ
ತೆರೆಗೆ
ಬರುತ್ತಿದೆ
ದೇಶವನ್ನೇ
ಅಲುಗಾಡಿಸಿದ್ದ
ಹರ್ಷದ್
ಮೆಹ್ತಾ
ಹಗರಣ
ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಈ ನಟ, ಹೇಗೆ ಬಾಲಿವುಡ್‌ನ ಕೆಲವು ಮಂದಿ ತಮ್ಮ ವಿರುದ್ಧ ಷಡ್ಯಂತ್ರ ಮಾಡಿದ್ದರು. ತಮ್ಮ ಸಿನಿಮಾ ವೃತ್ತಿಯನ್ನೇ ಮುಳುಗಿಸಲು ಯತ್ನಿಸಿದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಹಿಟ್ ಸಿನಿಮಾ 'ಕೂಲಿ ನಂಬರ್ 1' ರೀಮೇಕ್ ಬಗ್ಗೆಯೂ ಮಾತನಾಡಿದ್ದಾರೆ.

16 ಕೋಟಿ ಹಣ ಕಳೆದುಕೊಂಡಿದ್ದೇನೆ: ಗೋವಿಂದ
''ಕಳೆದ ಒಂದು ದಶಕದಲ್ಲಿ ಸುಮಾರು 16 ಕೋಟಿ ಹಣವನ್ನು ನಾನು ಕಳೆದುಕೊಂಡಿದ್ದೇನೆ. ಬಾಲಿವುಡ್‌ನ ಕೆಲವರು ನನ್ನನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡರು. ನನ್ನ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗದಂತೆ ಮಾಡಿದರು. ನನ್ನ ವೃತ್ತಿಗೆ ಅಂತ್ಯ ಹಾಡಲು ನೋಡಿದರು. ನನ್ನವರೇ ನನ್ನನ್ನು ದೂರ ತಳ್ಳಿದರು. ನಾನು ಕಷ್ಟದಲ್ಲಿದ್ದಾಗ ಸಹಾಯ ಮಾಡಲಿಲ್ಲ. ಆದರೆ ಅಂಥಹವರನ್ನೆಲ್ಲಾ ಈಗ ದೂರ ತಳ್ಳಿದ್ದೇನೆ. 2021 ಅನ್ನು ಅದ್ಭುತವಾಗಿ ಪ್ರಾರಂಭ ಮಾಡುತ್ತಿದ್ದೇನೆ'' ಎಂದಿದ್ದಾರೆ ಗೋವಿಂದ.

ಅಮಿತಾಬ್ ಬಚ್ಚನ್ ಬಂದರೆ ಎದ್ದು ಹೋಗುತ್ತಿದ್ದರು: ಗೋವಿಂದ
'ನಾನು ಸಹ ಬಾಲಿವುಡ್‌ನಲ್ಲಿರುವ ಸ್ವಜನಪಕ್ಷಪಾತದಿಂದ ನೊಂದವನೇ. ಅಮಿತಾಬ್ ಬಚ್ಚನ್ ಸಹ ಈ ಉದ್ಯಮದಲ್ಲಿ ಕಷ್ಟಪಟ್ಟಿದ್ದನ್ನು ನಾನು ನೋಡಿದ್ದೇನೆ. ಅಮಿತಾಬ್ ಬಚ್ಚನ್ ವೇದಿಕೆ ಮೇಲೆ ಬಂದರೆ 'ಸಿನಿಮಾ ಕುಟುಂಬದ ಮಂದಿ' ಕಾರ್ಯಕ್ರಮದಿಂದ ಎದ್ದು ಹೋಗುತ್ತಿದ್ದರು. ನಾನು ಅಮಿತಾಬ್‌ಗೆ ಬೆಂಬಲ ನೀಡಿದೆ. ಅದಕ್ಕಾಗಿಯೇ ಅವರು ನನ್ನನ್ನು ತುಳಿದರು ಎನಿಸುತ್ತದೆ' ಎಂದಿದ್ದಾರೆ ಗೋವಿಂದ.
ಅಮೀರ್
ಖಾನ್
ಜೊತೆ
ತೆರೆ
ಹಂಚಿಕೊಳ್ಳಲಿದ್ದಾರೆ
ತೆಲುಗಿನ
ಯುವ
ನಟ
Recommended Video

ಕೆಟ್ಟ ವ್ಯಕ್ತಿ ಆಗಿದ್ದೆ. ಕುಡಿತ, ಸಿಗರೇಟು ಕಲಿತಿದ್ದೆ: ಗೋವಿಂದ
'ಒಂದು ಸಮಯದಲ್ಲಿ ನಾನು ಬಹಳ ಕೆಟ್ಟ ವ್ಯಕ್ತಿ ಆಗಿಬಿಟ್ಟಿದ್ದೆ. ಕುಡಿಯುವುದು, ಪಾರ್ಟಿ ಮಾಡುವುದು. ವಿಪರೀತ ಸಿಗರೇಟು ಸೇದುವುದು ಕಲಿತಿದ್ದೆ. ಬಹಳ ಬೇಗ ಭಾವುಕನಾಗಿಬಿಡುತ್ತಿದ್ದೆ. ಆದರೆ ಈಗ ಸಂಪೂರ್ಣ ಬದಲಾಗಿದ್ದೇನೆ. ನಾನು ಯಾವುದೇ ವಿಷಯಕ್ಕೂ ಭಾವುಕಗೊಳ್ಳುವುದಿಲ್ಲ' ಎಂದಿದ್ದಾರೆ ಗೋವಿಂದ.

'ಕೂಲಿ ನಂಬರ್ 1' ರೀಮೇಕ್ ಬಗ್ಗೆ ಅಸಮಾಧಾನ
ತಮ್ಮ ನಟನೆಯ ಸೂಪರ್ ಹಿಟ್ ಸಿನಿಮಾ, 'ಕೂಲಿ ನಂಬರ್ 1' ಸಿನಿಮಾವನ್ನು ಈಗ ರೀಮೇಕ್ ಮಾಡಿದ್ದರ ಬಗ್ಗೆ ಕೇಳಿದಾಗ, 'ನಾನು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡುವುದಿಲ್ಲ. ನನ್ನ ಬಗ್ಗೆ ಹಲವರು ಕೆಟ್ಟದಾಗಿ ಮಾತನಾಡಿದ್ದು ಇದೆ. ಆದರೆ ಯಾರ-ಯಾವ ಕೆಲಸವನ್ನೂ ವಿಮರ್ಶೆ ಮಾಡುವುದಿಲ್ಲ. ನಾನು ಎಲ್ಲರ ಶ್ರಮವನ್ನು ಗೌರವಿಸುತ್ತೇನೆ. ಅವರೂ ಸಹ ಬಂಡವಾಳ ಹೂಡಿರುತ್ತಾರೆ' ಎಂದಿದ್ದಾರೆ. ಆದರೆ ಗೋವಿಂದ ಅವರ ಈ ಉತ್ತರದಿಂದಲೇ ಗೊತ್ತಾಗುತ್ತಿದೆ ಅವರಿಗೆ ಹೊಸ 'ಕೂಲಿ ನಂಬರ್ 1' ಸಿನಿಮಾದ ಬಗ್ಗೆ ಅಸಮಾಧಾನ ಇದೆ ಎಂದು.