For Quick Alerts
  ALLOW NOTIFICATIONS  
  For Daily Alerts

  ಕಂಗನಾರ ಕಿಡ್ನ್ಯಾಪ್-ಡಿಪ್ಪಿ ಜೊತೆ ಡೇಟಿಂಗ್: ಖಾನ್ ಸಾಹೇಬ್ರ ಹೊಸ ವರಸೆ

  By ಸೋನು ಗೌಡ
  |

  ಬಾಲಿವುಡ್ ನ ಟಾಪ್ ನಟಿಮಣಿಯರಾದ ದೀಪಿಕಾ ಪಡುಕೋಣೆ ಮತ್ತು ಕಂಗನಾ ರನೌತ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತಾರೆ. ಜೊತೆಗೆ ಅವಕಾಶ ಸಿಕ್ಕರೆ ಅವರ ಜೊತೆ ಚಾಟಿಂಗ್-ಡೇಟಿಂಗ್ ಮಾಡೋಕು ಎಲ್ಲರೂ ತಯಾರಾಗಿರುತ್ತಾರೆ.

  ಇದೇ ಆಸೆಯನ್ನು ಬಾಲಿವುಡ್ ನ ಖ್ಯಾತ ನಟ ಇರ್ಫಾನ್ ಖಾನ್ ಅವರು ಕೂಡ ವ್ಯಕ್ತಪಡಿಸಿದ್ದಾರೆ. ಅದ್ಭುತ ನಟನಾಗಿರುವ ಇರ್ಫಾನ್ ಖಾನ್ ಅವರು ಇತ್ತೀಚೆಗಷ್ಟೇ ಡಿಪ್ಪಿ ಮತ್ತು ಕಂಗನಾ ಜೊತೆ ಡೇಟಿಂಗ್-ಮೀಟಿಂಗ್ ಮಾಡುವ ಅಪರೂಪದ ಆಸೆಯನ್ನು ವ್ಯಕ್ತಪಡಿಸಿದ್ದಾರೆ.[ಇರ್ಫಾನ್ ಖಾನ್ ಸಾಹೇಬ್ರೇ ಯಾಕ್ಬೇಕಿತ್ತು 'ಈ' ಉಸಾಬರಿ]

  ಅಷ್ಟಕ್ಕೂ ಇರ್ಫಾನ್ ಖಾನ್ ಅವರಿಗೆ ಯಾಕೆ ಇಂತಹ ಆಸೆ?, ಅಂತ ನಿಮಗೂ ಆಶ್ಚರ್ಯ ಆಗ್ತಿರಬೇಕಲ್ಲ. ಅಂದಹಾಗೆ ಇರ್ಫಾನ್ ಖಾನ್ ಅವರು ಈ ಮಾತನ್ನು ಸುಮ್ಮನೆ ತಮಾಷೆಗೆ ಹೇಳಿದ್ರೋ?, ಅಥವಾ ಸೀರಿಯಸ್ಸ್ ಆಗಿ ಹೇಳಿದ್ರೋ ಅನ್ನೋದನ್ನು ತಿಳಿಯಲು ಮುಂದೆ ಓದಿ.....

  ಪ್ರೊಮೋಷನ್ ನಲ್ಲಿ ಇರ್ಫಾನ್ ಖಾನ್

  ಪ್ರೊಮೋಷನ್ ನಲ್ಲಿ ಇರ್ಫಾನ್ ಖಾನ್

  ಅಂದಹಾಗೆ ಇತ್ತೀಚೆಗೆ ಪ್ರೊಮೋಷನ್ ಶೋ ಒಂದರಲ್ಲಿ ಭಾಗವಹಿಸಿದ್ದ ನಟ ಇರ್ಫಾನ್ ಖಾನ್ ಅವರಿಗೆ ಕಾರ್ಯಕ್ರಮದ ಆಯೋಜಕರು 'ಯಾರನ್ನು ಕಿಡ್ನ್ಯಾಪ್ ಮಾಡ್ತೀರಿ?, ಯಾರ ಜೊತೆ ಡೇಟಿಂಗ್ ಮಾಡ್ತೀರಿ?, ಹಾಗೂ ಯಾರ ಜೊತೆ ನಟಿಸಲು ಇಷ್ಟಪಡ್ತೀರಿ?, ಅಂತ ಕೆಲವು ಪ್ರಶ್ನೆಗಳನ್ನು ಕೇಳಿದರು.

  ಯಾರನ್ನು ಕಿಡ್ನ್ಯಾಪ್ ಮಾಡ್ತೀರಿ.?

  ಯಾರನ್ನು ಕಿಡ್ನ್ಯಾಪ್ ಮಾಡ್ತೀರಿ.?

  ಯಾರನ್ನು ಕಿಡ್ನ್ಯಾಪ್ ಮಾಡ್ತೀರಿ ಅನ್ನೋ ಪ್ರಶ್ನೆಗೆ, ಕಂಗನಾ ರನೌತ್ ಅವರನ್ನು ಕಿಡ್ನ್ಯಾಪ್ ಮಾಡುತ್ತೇನೆ ಎಂದು ನಟ ಇರ್ಫಾನ್ ಖಾನ್ ಅವರು ನೇರವಾಗಿ ಹಾಗೂ ಫನ್ನಿಯಾಗಿ ಉತ್ತರ ಕೊಟ್ಟರು.

  ಯಾರ ಜೊತೆ ಡೇಟಿಂಗ್.?

  ಯಾರ ಜೊತೆ ಡೇಟಿಂಗ್.?

  ಯಾರ ಜೊತೆ ಡೇಟಿಂಗ್ ಮಾಡುತ್ತೀರಿ ಅನ್ನೋ ಪ್ರಶ್ನೆಗೆ, ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಅವರ ಜೊತೆ ಡೇಟಿಂಗ್ ಮಾಡುತ್ತೇನೆ ಎಂದಿದ್ದಾರೆ ಇರ್ಫಾನ್ ಖಾನ್.

  ಯಾರ ಜೊತೆ ನಟಿಸಲು ಇಷ್ಟ

  ಯಾರ ಜೊತೆ ನಟಿಸಲು ಇಷ್ಟ

  'ಇಬ್ಬರ ಜೊತೆಗೂ ತೆರೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ', ಎಂದು ಇರ್ಫಾನ್ ಖಾನ್ ಫನ್ನಿ-ಫನ್ನಿ ಉತ್ತರ ನೀಡಿದ್ದಾರೆ.

  ದೀಪಿಕಾ-ಇರ್ಫಾನ್

  ದೀಪಿಕಾ-ಇರ್ಫಾನ್

  ನಟಿ ದೀಪಿಕಾ ಪಡುಕೋಣೆ ಮತ್ತು ಇರ್ಫಾನ್ ಖಾನ್ ಅವರು ಈ ಮೊದಲು 'ಪೀಕು' ಎಂಬ ಚಿತ್ರದಲ್ಲಿ ಒಂದಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ಎಲ್ಲರ ಮೆಚ್ಚುಗೆ ಗಳಿಸಿದ್ದು, ಮಾತ್ರವಲ್ಲದೇ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.[ಪೀಕು ವಿಮರ್ಶೆ: ಹೊಟ್ಟೆಪಾಡಿನ ಮನೆ ಮನೆ ಕಥೆ]

  ಕಂಗನಾ-ಇರ್ಫಾನ್

  ಕಂಗನಾ-ಇರ್ಫಾನ್

  ಸದ್ಯಕ್ಕೆ 'ಮದಾರಿ' ಚಿತ್ರದ ಯಶಸ್ಸಿನಲ್ಲಿರುವ ನಟ ಇರ್ಫಾನ್ ಖಾನ್ ಅವರು ಇದೀಗ ರಿತೇಶ್ ಭಾಟ್ರಾ ಅವರ ಮುಂದಿನ ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಇರ್ಫಾನ್ ಖಾನ್ ಅವರು ನಟಿ ಕಂಗನಾ ಅವರ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ.

  'ಮದಾರಿ' ಕಲೆಕ್ಷನ್

  'ಮದಾರಿ' ಕಲೆಕ್ಷನ್

  ಜುಲೈ 22 ರಂದು ತೆರೆಕಂಡ, ಇರ್ಫಾನ್ ಖಾನ್ ನಟನೆಯ 'ಮದಾರಿ' ಬಾಕ್ಸಾಫೀಸ್ ನಲ್ಲಿ ಒಳ್ಳೆ ಯಶಸ್ಸು ಗಳಿಸಿದ್ದು, ಮೊದಲ ವಾರದಲ್ಲಿ ಸುಮಾರು 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

  English summary
  Bollywood Actor Irrfan Khan Wants To Kidnap Actress Kangana Ranaut and Date with Actress Deepika Padukone. Here is the Question and Answer session at a promotional show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X