For Quick Alerts
  ALLOW NOTIFICATIONS  
  For Daily Alerts

  ಖ್ಯಾತ ನಟಿ ಮತ್ತು ರಾಜಕಾರಣಿ ಕಿರಣ್ ಖೇರ್‌ಗೆ ಕ್ಯಾನ್ಸರ್

  |

  ಬಾಲಿವುಡ್‌ನ ಖ್ಯಾತ ನಟಿ ಮತ್ತು ಗಾಯಕಿ ಹಾಗೂ ರಾಜಕಾರಣಿ ಕಿರಣ್ ಖೇರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಚಂಡೀಗಢದ ಸಂಸದೆಯಾಗಿರುವ ಕಿರಣ್ ಖೇರ್ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಸದ್ಯ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಈ ಬಗ್ಗೆ ಚಂಡೀಗಢದ ಬಿಜೆಪಿ ಅಧ್ಯಕ್ಷ ಅರುಣ್ ಸೂದ್ ಬಹಿರಂಗ ಪಡಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅರುಣ್ ಸೂದ್, ಕಳೆದ ವರ್ಷದಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

  ದರ್ಶನ್ 'ಶಾಸ್ತ್ರಿ' ಸಿನಿಮಾದ ನಾಯಕಿ ಮಾನ್ಯಾಗೆ ಪಾರ್ಶ್ವವಾಯು

  ಕಿರಣ್ ಖೇರ್ ಕಳೆದ ವರ್ಷ ನವೆಂಬರ್‌ನಲ್ಲಿ ತನ್ನ ಚಂಡೀಗಢ್ ನಿವಾಸದಲ್ಲಿ ಎಡಗೈಗೆ ಗಾಯ ಮಾಡಿದ್ದ ಕಿರಣ್ ಖೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಸಮಯದಲ್ಲಿ ಕಿರಣ್ ಖೇರ್ ಅನಾರೋಗ್ಯದಿಂದ ಬಳಲುತ್ತಿದ್ದ ಬಗ್ಗೆ ಬಹಿರಂಗವಾಗಿದೆ. ಬಳಿಕ ಅವರು ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ.

  ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿರುವ ಕಿರಣ್ ಖೇರ್ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆಗಾಗ ಕೋಕಿಲಾಬೆನ್ ಆಸ್ಪತ್ರೆಗೆ ಭೇಟಿ ಆರೋಗ್ಯ ತಪಾಸಣೆ ನಡೆಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.

  ನಟಿ ಕಿರಣ್ ಖೇರ್ 2014ರಲ್ಲಿ ಲೋಕಸಭೆಗೆ ಆಯ್ಕೆಯಾಗುವ ಮೂಲಕ ರಾಜಕೀಯದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದರು. ಮೋದಿ ಅಲೆಯ ಮೇಲೆ ಸವಾರಿ ಮಾಡಿದ ಕಿರಣ್ 2019ರ ಚುನಾವಣೆಯಲ್ಲಿ ಮತ್ತೆ ಗೆದ್ದು ಬೀಗಿದರು. ಕಳೆದ ಒಂದು ವರ್ಷದಿಂದ ಹೆಚ್ಚಾಗಿ ಕಾಣಿಸಿಕೊಳ್ಳದ ಕಿರಣ್ ಖೇರ್ ವಿರುದ್ಧ ಕಾಂಗ್ರೆಸ್ ಭಾರಿ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಚಂಡೀಗಢ್ ಬಿಜೆಪಿ ಅನಾರೋಗ್ಯದ ಬಗ್ಗೆ ಮಾಹಿತಿ ಬಹಿರಂಗ ಪಡಿಸಿದ್ದಾರೆ.

  Thalaiva Rajnikanth ಗೆ ಒಲಿಯಿತು ಶ್ರೇಷ್ಠ Dada Saheb Phalke ಪ್ರಶಸ್ತಿ | Filmibeat Kannada

  68 ವರ್ಷದ ನಟಿ ಮತ್ತು ರಾಜಕಾರಣಿ ಕಿರಣ್ ಖೇರ್ ಸದ್ಯ ಎರಡನೇ ಪತಿ ಅನುಪಮ್ ಖೇರ್ ಜೊತೆ ವಾಸುತ್ತಿದ್ದಾರೆ. ಅನುಪಮ್ ಖೇರ್ ಬಾಲಿವುಡ್‌ನ ಖ್ಯಾತ ನಟ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಹಿಂದಿ ಮತ್ತು ಪಂಜಾಬಿ ಭಾಷೆಯಲ್ಲಿ ನಟಿಸಿರುವ ಕಿರಣ್ ಖೇರ್ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಳಿಕ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.

  English summary
  Actor, Politician Kirron Kher suffering from blood cancer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X