For Quick Alerts
  ALLOW NOTIFICATIONS  
  For Daily Alerts

  ಹಾಲಿವುಡ್ ಸಿನಿಮಾದ ರಿಮೇಕ್‌ನಲ್ಲಿ ನಟ ಪ್ರಭಾಸ್?

  |

  ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಬಹುನಿರೀಕ್ಷೆಯ ಸಲಾರ್ ಮತ್ತು ಆದಿಪುರುಷ್ ಎರಡು ಸಿನಿಮಾಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದಲ್ಲದೆ ಇನ್ನು ಹೆಸರಿಡದ ಮತ್ತೊಂದು ಬಹುನಿರೀಕ್ಷೆಯ ಸಿನಿಮಾದ ಚಿತ್ರೀಕರಣಕ್ಕೆ ತಯಾರಿ ಕೂಡ ನಡೆಸುತ್ತಿದ್ದಾರೆ.

  ಕೈ ತುಂಬ ಸಿನಿಮಾಗಳನ್ನು ಇಟ್ಟುಕೊಂಡಿರುವ ಪ್ರಭಾಸ್ ಹಾಲಿವುಡ್ ಸಿನಿಮಾದ ರಿಮೇಕ್‌ನಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಹಾಲಿವುಡ್ ನ ಸೂಪರ್ ಹಿಟ್ ರ್‍ಯಾಂಬೋ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಹಾಲಿವುಡ್ ರ್‍ಯಾಂಬೋ ಹಿಂದಿಯಲ್ಲಿ ಮೂಡಿಬರುತ್ತಿದೆ.

  ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ಪಡೆದ ಮೊದಲ ನಟ ಪ್ರಭಾಸ್?

  ಚಿತ್ರದಲ್ಲಿ ಮೊದಲು ಟೈಗರ್ ಶ್ರಾಫ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಟೈಗರ್ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇರುವ ಕಾರಣ ರ್‍ಯಾಂಬೋ ರಿಮೇಕ್ ನಿಂದ ಹಿಂದೆ ಸರಿದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹಾಗಾಗಿ ಸಿನಿಮಾತಂಡ ಸೌತ್ ಸ್ಟಾರ್ ಪ್ರಭಾಸ್ ಅವರನ್ನು ಸಂಪರ್ಕಮಾಡಿ ಮಾತುಕತೆ ನಡೆಸಿದೆಯಂತೆ.

  ಪ್ರಭಾಸ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕ ತಕ್ಷಣ ಅಧಿಕೃತವಾಗಿ ಸಿನಿಮಾ ಅನೌನ್ಸ್ ಮಾಡಲಿದೆ ಸಿನಿಮಾತಂಡ. ಇನ್ನು ಪ್ರಭಾಸ್ ನಾಯಕನಾಗಿ ಕಾಣಿಸಿಕೊಂಡರೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಸಿದ್ಧಾರ್ಥ್ ಆನಂದ್ ನಿರ್ಧರಿಸಿದ್ದಾರೆ.

  Chandan & Kavitha Engaged : ಉಂಗುರ ಬದಲಿಸಿಕೊಂಡ ಚಂದನ್ ಮತ್ತು ಕವಿತಾ ಗೌಡ | Filmibeat Kannada

  ಟೈಗರ್ ಶ್ರಾಫ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಗಣಪತ್ ಪಾರ್ಟ್-1 ಮತ್ತು ಪಾರ್ಟ್-2ನಲ್ಲಿ ನಟಿಸುತ್ತಿದ್ದಾರೆ. ಹೀರೋಪಂತಿ-2, ಬಾಘಿ-2 ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಪ್ರಭಾಸ್ ಸದ್ಯ ರಾಧೆ ಶ್ಯಾಮ್ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಆದಿಪುರುಷ್ ಮತ್ತು ಸಲಾರ್ ಮುಗಿಯುತ್ತಿದ್ದಂತೆ ಮಹಾನಟಿ ಖ್ಯಾತ ನಿರ್ದೇಶನದ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಚಿತ್ರದಲ್ಲಿ ದೀಪಿಕಾ ನಾಯಕಿಯಾಗಿ ನಟಿಸಲಿದ್ದಾರೆ.

  English summary
  Tollywood Actor Prabhas to replace Tiger Shroff in Rambo remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X