For Quick Alerts
  ALLOW NOTIFICATIONS  
  For Daily Alerts

  ಕಷ್ಟದಲ್ಲಿದ್ದೇನೆ ಸಹಾಯ ಮಾಡಿ ಎಂದು ಕೈಮುಗಿದ ಹಿರಿಯ ನಟ

  |

  ಕೋವಿಡ್‌ನಿಂದಾಗಿ ಹಲವು ನಟ-ನಟಿಯರು ಅದರಲ್ಲಿಯೂ ಕ್ಯಾರೆಕ್ಟರ್ ಆರ್ಟಿಸ್ಟ್‌ಗಳು, ಪೋಷಕ ನಟರು, ಹಿರಿಯ ನಟರು ಬಹಳಷ್ಟು ತೊಂದರೆಗೀಡಾಗಿದ್ದಾರೆ. ಕೆಲಸವಿಲ್ಲದೆ ಇದ್ದ ಉಳಿತಾಯದ ಹಣವನ್ನು ಆರೋಗ್ಯಕ್ಕೆ ಇನ್ನಿತರೆ ಕಾರಣಗಳಿಗೆ ಖರ್ಚು ಮಾಡಿ ಬರಿಗೈ ಆಗಿದ್ದಾರೆ. ಹಲವು ಹಿರಿಯ ನಟರು ಈಗ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

  ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ ರೇಷಮ್ ಅರೋರ ಸಹ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ತಮಗೆ ಸಹಾಯದ ಅಗತ್ಯವಿದೆ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

  ಅಮಿತಾಬ್ ಬಚ್ಚನ್‌ರ ಸೂಪರ್ ಹಿಟ್ ಸಿನಿಮಾಗಳಾದ 'ಕುದಾ ಗವಾ', 'ಅಗ್ನಿಪತ್' ಸಿನಿಮಾಗಳಲ್ಲಿ ನಟಿಸಿರುವ ರೇಷಮ್ ಅರೋರ, ಕೋವಿಡ್‌ಗೆ ಮುಂಚೆಯೂ ಕೆಲವು ಸಿನಿಮಾಗಳು, ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಆದರೆ ಕೋವಿಡ್ ನಂತರ ಅವರಿಗೆ ಯಾವ ಅವಕಾಶವೂ ದೊರಕುತ್ತಿಲ್ಲ.

  ಈ ಬಗ್ಗೆ ವಿಡಿಯೋನಲ್ಲಿ ಮಾತನಾಡಿರುವ ರೇಷಮ್ ಅರೋರಾ, ''ಎಲ್ಲರೂ ಹೇಳುತ್ತಿದ್ದಾರೆ ಎಲ್ಲವೂ ಸಾಮಾನ್ಯ ಪರಿಸ್ಥಿತಿಗೆ ಬರುತ್ತಿದೆ ಎಂದು ಆದರೆ ನನಗೆ ಒಂದು ಕೆಲಸವೂ ಸಿಗುತ್ತಿಲ್ಲ. ನಾನು ನಿರುದ್ಯೋಗಿ ಆಗಿದ್ದೇನೆ'' ಎಂದಿದ್ದಾರೆ ರೇಷಮ್.

  ತಮಗೆ ಆದ ಅಪಘಾತದ ಬಗ್ಗೆ ಮಾತನಾಡಿರುವ ರೇಷಮ್, ಕೆಲ ತಿಂಗಳ ಹಿಂದೆ ನನಗೆ ಅಪಘಾತವಾಯ್ತು, ನಾನು ರೈಲಿನಿಂದ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡೆ. ಆಗೆಲ್ಲ ಸಾಕಷ್ಟು ಹಣ ಖರ್ಚಾಯಿತು, ನಂತರ ಚಿಡಿಯಾ ಘರ್ ಹೆಸರಿನ ಶೋ ಒಂದರ ಶೂಟಿಂಗ್ ಸಮಯದಲ್ಲಿ ವಿಚಿತ್ರ ಹುಳುವೊಂದು ಕಾಲಿಗೆ ಕಚ್ಚಿ ನಡೆಯಲಾಗದಂತೆ ಆಗಿಬಿಟ್ಟಿತು. ಆ ನಂತರ ನನ್ನ ಪತ್ನಿಗೆ ಕಣ್ಣಿನ ಸಮಸ್ಯೆ ಎದುರಾಗಿ ಆಕೆಗೆ ಆಪರೇಷನ್ ಮಾಡಿಸಬೇಕಾಯಿತು'' ಎಂದು ಕಷ್ಟಗಳನ್ನು ತೋಡಿಕೊಂಡಿದ್ದಾರೆ ರೇಷಮ್.

  ''ನಾನು ಆರ್ಥಿಕವಾಗಿ ಕುಸಿದು ಹೋಗಿದ್ದು ನನಗೆ ಸಹಾಯದ ಅವಶ್ಯಕತೆ ಇದೆ. ನನಗೆ ಕೆಲಸದ ಅವಶ್ಯಕತೆ ಇದೆ. ಸಿಂಟಾ (ಸಿಐಎನ್‌ಟಿಎಎ) ದವರು ಸಹಾಯ ಮಾಡಿ ಕೆಲವು ಕಡೆ ಕೆಲಸ ಕೊಡಿಸಿದರಾದರೂ ಅದು ಜೀವನೋಪಾಯಕ್ಕೆ ಸಾಕಾಗುತ್ತಿಲ್ಲ. ನನಗೆ ಹೆಚ್ಚಿನ ಕೆಲಸದ ಅವಶ್ಯಕತೆ ಇದೆ. ನನಗೆ ಆರ್ಥಿಕ ಸಹಾಯದ ಅವಶ್ಯಕತೆ ಇದೆ'' ಎಂದಿದ್ದಾರೆ ರೇಷಮ್ ಅರೋರಾ.

  ಕೋವಿಡ್ ಸಂದರ್ಭದಲ್ಲಿ ಹಲವು ಚಿತ್ರರಂಗಗಳಲ್ಲಿ ಪೋಷಕ ನಟರು, ಹಿರಿಯ ನಟರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕನ್ನಡದಲ್ಲಿಯೂ ಕೆಲವು ಹಿರಿಯ ನಟರು ತಾವು ಕಷ್ಟದಲ್ಲಿರುವುದಾಗಿ ನೆರವಿನ ಅಗತ್ಯ ಇದೆಯೆಂದು ಮನವಿ ಮಾಡಿದ್ದರು. ನಟ ಸುದೀಪ್ ಸೇರಿದಂತೆ ಹಲವು ನಟರು ತಮ್ಮ ಕೈಲಾದ ಮಟ್ಟಿಗೆ ಹಿರಿಯ ನಟರುಗಳಿಗೆ ಸಹಾಯ ಮಾಡಿದರು. ವಾಣಿಜ್ಯ ಮಂಡಳಿ, ಚಲನಚಿತ್ರ ಅಕಾಡೆಮಿಯೂ ಸಣ್ಣ-ಪುಟ್ಟ ಸಹಾಯಗಳನ್ನು ಮಾಡಿತು.

  English summary
  Actor Resham Arora requested for financial help. He said he is broken and he need work and financial help to survive.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X