ನೇತ್ರದಾನ ಮಾಡಿದ ನಯನ ಮನೋಹರ ಚೆಲುವೆ
ಬಾಲಿವುಡ್ ತಾರೆ, ನಿರ್ಮಾಪಕಿ, ಉದ್ಯಮಿ ಶಿಲ್ಪಾ ಶೆಟ್ಟಿ ತಮ್ಮ ಸುಂದರ ಕಣ್ಣುಗಳನ್ನು ಮರಣಾನಂತರ ದಾನ ಮಾಡುವುದಾಗಿ ಬರೆದುಕೊಟ್ಟಿದ್ದಾರೆ. ಈ ಮೂಲಕ ಬಾಲಿವುಡ್ ನಲ್ಲಿ ನೇತ್ರದಾನಕ್ಕೆ ನಾಂದಿ ಹಾಡಿದ್ದಾರೆ. ಇತ್ತೀಚೆಗೆ ಅವರು ಮಹಾರಾಷ್ಟ್ರದ ಶನಿ ಸಿಂಗಣಾಪುರದ ಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡರು.
ಅಲ್ಲಿನ ಯಶವಂತ್ ಸಾಮಾಜಿಕ ಪ್ರತಿಷ್ಠಾನ ಸಂಸ್ಥೆ ಮೂಲಕ ನೇತ್ರದಾನದ ಪತ್ರಗಳಿಗೆ ಸಹಿ ಹಾಕಿದರು. ತನ್ನ ಪತಿ ರಾಜ್ ಕುಂದ್ರಾ ಜೊತೆ ಶಿರಡಿಯ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ಬಳಿಕ ಅವರು ಸಿಂಗಣಾಪುರಕ್ಕೆ ಬಂದು ಕಣ್ಣುಗಳನ್ನು ದಾನವಾಗಿ ಬರೆದುಕೊಟ್ಟಿದ್ದಾರೆ. [ಸೀರೆಯಲಿ ಶಿಲ್ಪಾ ಶೆಟ್ಟಿ ಸೌಂದರ್ಯ ಅನಾವರಣ]
ಕೇವಲ ಶಿಲ್ಪಾ ಶೆಟ್ಟಿ ಅಷ್ಟೇ ಅಲ್ಲದೆ ಅವರ ಸೋದರಿ ಶಮಿತಾ ಶೆಟ್ಟಿ ಸಹ ತಮ್ಮ ನಯನಗಳನ್ನು ದಾನವಾಗಿ ಬರೆದುಕೊಟ್ಟಿದ್ದಾರೆ. ನೇತ್ರದಾನದ ಬಳಿಕ ಮಾತನಾಡಿದ ಶಿಲ್ಪಾ, ಮರಣಾನಂತರ ನನ್ನ ಕಣ್ಣುಗಳು ಇನ್ನೊಬ್ಬರ ಬಾಳಿಗೆ ಬೆಳಕು ನೀಡಿದರೆ ಅದಕ್ಕಿಂತಲೂ ಸಂತೋಷ ಇನ್ನೇನಿದೆ ಎಂದಿದ್ದಾರೆ. [ಅಂಧರಿಗಾಗಿ 'ಬೆಳಕು' ನೀಡಿದ ಅಶ್ವಿನಿ ಅಂಗಡಿ]'ದೋಸ್ತಾನ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿದ್ದ ಶಿಲ್ಪಾ ಶೆಟ್ಟಿ ಆ ಬಳಿಕ ಪೂರ್ಣ ಪ್ರಮಾಣದ ಪಾತ್ರಗಳಲ್ಲಿ ಅಭಿನಯಿಸಲೇ ಇಲ್ಲ. ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡ ಆಪ್ನೆ ಚಿತ್ರವೇ ಕೊನೆ. ಈಗವರು ತನ್ನ ಗಂಡನ ಬಿಜಿನೆಸ್ ನೋಡಿಕೊಂಡು, ಮಗುವನ್ನು ಆಡಿಸಿಕೊಂಡು, ಚಿತ್ರ ನಿರ್ಮಾಣದಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್)


Click it and Unblock the Notifications












