»   » ಗತವೈಭವಕ್ಕೆ ಮರಳಿದ ಮಾಜಿ ಸುಂದರಿ ಐಶ್ವರ್ಯಾ ರೈ

ಗತವೈಭವಕ್ಕೆ ಮರಳಿದ ಮಾಜಿ ಸುಂದರಿ ಐಶ್ವರ್ಯಾ ರೈ

Posted By:
Subscribe to Filmibeat Kannada

ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಈ ಮತ್ತೆ ಫಾರ್ಮ್ ಗೆ ಮರಳಿದ್ದಾರೆ. ತಮ್ಮ ಗತವೈಭವವನ್ನು ಬೆಳ್ಳಿತೆರೆಗೆ ಮರಳಿಸಲು ಅವರು ಸಿದ್ಧವಾಗಿದ್ದಾರೆ. ಮಾರ್ಚ್ 2015ರ 'ವೋಗ್' ಸಂಚಿಕೆ ಅವರ ಹೊಸ ಲಕಲಕ ಫೋಟೋಗಳನ್ನು ಹೊತ್ತು ತಂದಿದೆ.

'ವೋಗ್' ನಿಯತಕಾಲಿಕೆಯ ಮುಖಪುಟ ಅಲಂಕರಿಸಿರುವ ಐಶ್ವರ್ಯಾ ರೈ ಅವರು ಸೆಕೆಂಡ್ ಇನ್ನಿಂಗ್ಸ್ ಗೆ ರೆಡಿಯಾಗಿದ್ದಾರೆ. "ಐಶ್ವರ್ಯಾ ರೈ ಕಂಬ್ಯಾಕ್? ಐ ನೆವರ್ ವೆಂಟ್ ಅವೇ" ಎಂಬ ಶೀರ್ಷಿಕೆ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ ಸಂಚಿಕೆ. [ಮಗಳ ಮೇಲೆ ಆ ಪ್ರಯೋಗ ಮಾಡಲ್ಲ: ಐಶ್ವರ್ಯಾ ರೈ]

ತಾಯಿಯಾದ ಮೇಲೆ ಐಶ್ವರ್ಯಾ ರೈ ಬಣ್ಣದ ಪ್ರಪಂಚದಿಂದ ದೂರ ಸರಿದಿದ್ದರು. ಅವರು ಮತ್ತೆ ಬಣ್ಣ ಹಚ್ಚುವುದು ಯಾವಾಗ? ಎಂದು ಅಭಿಮಾನಿಗಳು ಕಾತುರದಿಂದ ಎದುರುನೋಡುವಂತಾಗಿತ್ತು. ಅವರು ನಿರ್ದೇಶನಕ್ಕೆ ಮರಳುತ್ತಾರೆ ಎಂಬ ಸುದ್ದಿಯೂ ಹೊಗೆಯಾಡುತ್ತಿತ್ತು.

Actress Aishwarya Rai is back in a new avatar

ಜೊತೆಗೆ ಚಿತ್ರವನ್ನು ನಿರ್ಮಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಕಡೆಗೂ ಎಲ್ಲಾ ಊಹಾಪೋಹಗಳಿಗೂ ತೆರೆಬೀಳುವ ಸಮಯ ಬಂದಿದೆ. ಸರಿಸುಮಾರು ಐದು ವರ್ಷಗಳ ಬಳಿಕ ಅವರು 'ಜಬ್ಜಾ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಆಕ್ಷನ್, ಥ್ರಿಲ್ಲರ್ ಅಂಶಗಳಿಂದ ಕೂಡಿರುವ ಈ ಚಿತ್ರಕ್ಕೆ ಸಂಜಯ್ ಗುಪ್ತ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೆ ಶೂಟಿಂಗ್ ಸಹ ಆರಂಭವಾಗಿದೆ. ಈ ಬಗ್ಗೆ ಸ್ವತಃ ಸಂಜಯ್ ಗುಪ್ತ ಟ್ವೀಟಿಸಿ ತಿಳಿಸಿದ್ದರು. ಚಿತ್ರದ ಪಾತ್ರಕ್ಕಾಗಿ ಐಶೂ ವಿಶೇಷ ಮುತುವರ್ಜಿ ವಹಿಸಿದ್ದಾರೆ.

ನಾಯಕಿ ಪ್ರಧಾನ ಚಿತ್ರವಾದ ಇದರಲ್ಲಿ ಐಶ್ವರ್ಯಾ ರೈ ಜೊತೆಗೆ ಇರ್ಫಾನ್ ಖಾನ್, ಶಬಾನಾ ಅಜ್ಮಿ, ಅನುಪಮ್ ಖೇರ್ ಪ್ರಮುಖ ಪಾತ್ರದಲ್ಲಿದ್ದಾರೆ. ಎಸ್ಸೆಲ್ ವಿಜನ್ ಪ್ರೊಡಕ್ಷನ್ಸ್ ಪ್ರೈ.ಲಿ ವೈಟ್ ಫೆದರ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. (ಏಜೆನ್ಸೀಸ್)

English summary
Aishwarya Rai features on the Cover of Vogue India magazine's March 2015 issue. The cover story was titled as 'Aishwarya Rai - Comeback? I Never Went Away?'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada