For Quick Alerts
  ALLOW NOTIFICATIONS  
  For Daily Alerts

  ಹೀನಾಯ ಸೋಲು ಕಂಡ ಕಂಗನಾ ಸಿನಿಮಾ 'ಧಾಕಡ್‌': ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?

  |

  ಬಾಲಿವುಡ್‌ನಲ್ಲಿ ಕಾಂಟ್ರವರ್ಸಿಗಳಿಂದಲೇ ಹೆಚ್ಚು ಫೇಮಸ್ ಆಗಿರುವ ನಟಿ ಕಂಗನಾ ರನೌತ್ ಸಿನಿಮಾ 'ಧಾಕಡ್‌' (ಮೇ 20) ರಂದು ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಆದರೆ, ಈ ಸಿನಿಮಾ ಕಲೆಕ್ಷನ್ ಮಾಡದೆ ಹೀನಾಯ ಸೋಲು ಕಂಡಿದೆ. ಸಾಮಾನ್ಯವಾಗಿ ಬಾಲಿವುಡ್‌ನಲ್ಲಿ ಸ್ಟಾರ್‌ ನಟ ನಟಿಯರ ಸಿನಿಮಾ ರಿಲೀಸ್ ಆದ ಮೊದಲ ದಿನ 1 ಕೋಟಿ ರೂಪಾಯಿ ಗಳಿಕೆಯಾದರೂ ಮಾಡುತ್ತದೆ. ಆದರೆ, ಕಂಗನಾ ಸಿನಿಮಾ ಮೊದಲ ದಿನದಲ್ಲಿ 50 ಲಕ್ಷ ದಾಟಲು ಕೂಡ ಹೆಣಗಾಡಿದೆ.

  'ಧಾಕಡ್‌' ಸಿನಿಮಾ ರಿಲೀಸ್‌ಗೂ ಮುನ್ನ ಕಂಗನಾ ರನೌತ್‌ ಸಿನಿಮಾ ಬಗ್ಗೆ ಹಲವು ಕಡೆ ಪ್ರಚಾರ ಮಾಡಿದ್ದರು. ಅಲ್ಲದೆ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಮೊದಲ ದಿನವೇ ಸಿನಿಮಾ ಡಲ್ ಹೊಡೆದಿದೆ. ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ದರೂ, ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾಗಿದೆ.

  ಮೇ(20) ರಂದು ಕಂಗನಾ ಅಭಿನಯದ 'ಧಾಕಡ್' ಸಿನಿಮಾ ಜೊತೆಗೆ ಮತ್ತೊಂದು ಸಿನಿಮಾ 'ಭೂಲ್ ಭುಲಯ್ಯ 2' ಕೂಡ ರಿಲೀಸ್ ಆಗಿದೆ. 'ಭೂಲ್ ಭುಲಯ್ಯ 2' ಮೊದಲ ದಿನದಲ್ಲಿ 14.11 ಕೋಟಿ ರೂಪಾಯಿ ಗಳಿಸುವ ಮೂಲಕ ಉತ್ತಮ ಪ್ರದರ್ಶನಗೊಂಡಿದೆ. ಆದರೆ, ಕಂಗನಾ ಸಿನಿಮಾ ಕೇವಲ 50 ಲಕ್ಷ ದಾಟಲು ಹರಸಾಹಸ ಪಟ್ಟಿದೆ.

  ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಅಭಿನಯಿಸಿದ್ದ 'ಭೂಲ್ ಭುಲಯ್ಯ 2' ಸಿನಿಮಾಗೆ ಪ್ರೇಕ್ಷಕರು ಉತ್ತಮ ರೆಸ್ಪಾನ್ಸ್ ನೀಡಿದ್ದಾರೆ. ಹೀಗಾಗಿ 'ಧಾಕಡ್' ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಅಲ್ಲದೆ 'ಧಾಕಡ್' ಸಿನಿಮಾ ಕಲೆಕ್ಷನ್‌ಗೂ 'ಭೂಲ್ ಭುಲಯ್ಯ 2' ಸಿನಿಮಾ ಟಕ್ಕರ್ ಕೊಟ್ಟಿದೆ. ಹೀಗಾಗಿ 'ಧಾಕಡ್' ಸಿನಿಮಾ ಕಲೆಕ್ಷನ್‌ಗೆ ಭಾರೀ ಪೆಟ್ಟು ಬಿದ್ದಂತಾಗಿದೆ.

  'ಧಾಕಡ್' ಮೊದಲ ದಿನದ ಕಲೆಕ್ಷನ್ 50 ಲಕ್ಷ ಆಗಿದ್ದರೆ, ಎರಡನೇ ದಿನ ಕೇವಲ 50 ಲಕ್ಷ ಆಸುಪಾಸಿನಲ್ಲಿಯೇ ಕಲೆಕ್ಷನ್ ಮಾಡಿದ್ದು, ಒಟ್ಟಾರೆ ಎರಡು ದಿನದ್ದೂ ಸೇರಿ 65 ಲಕ್ಷ ಕಲೆಕ್ಷನ್ ಮಾಡುವುದಕ್ಕೆ ಒದ್ದಾಡಿದೆ. ಸದ್ಯ ಇಂದು (ಮೇ 22) ವಿಕೇಂಡ್ ಇರುವ ಕಾರಣ ಜನರು ಸಿನಿಮಾ ವೀಕ್ಷಣೆ ಮಾಡಬಹುದು ಎಂಬ ನಿರೀಕ್ಷೆಯಿದೆ. ಇದಾದ ಮೇಲೆ ಸಿನಿಮಾ ಥಿಯೇಟರ್‌ನಿಂದ ಎತ್ತಂಗಡಿ ಆಗಬಹುದು ಎಂಬ ಮಾತುಗಳು ಬಾಲಿವುಡ್ ಅಂಗಳದಿಂದ ಕೇಳಿ ಬರುತ್ತಿದೆ. ಇದರಿಂದಾಗಿ 'ಧಾಕಡ್' ಸಿನಿಮಾ ಮಾಡಿ ನಿರ್ಮಾಪಕರೂ ಕೂಡ ಕೈ ಸುಟ್ಟಕೊಂಡಂತಾಗಿದೆ.

  ಸದ್ಯ ಸಿನಿಮಾ ಹೀನಾಯ ಸೋಲು ಕಂಡರೂ ಸಹ ಕಂಗನಾ ಬಾಲಿವುಡ್‌ನ ಒಳಿತಿನ ಬಗ್ಗೆ ಮಾತನಾಡಿದ್ದಾರೆ. 'ಭೂಲ್ ಭುಲಯ್ಯ 2' ಸಿನಿಮಾ ಗೆದ್ದಿರುವುದಕ್ಕೆ ಕಂಗನಾ ಶುಭಾಶಯ ತಿಳಿಸಿದ್ದಾರೆ. 'ಭೂಲ್ ಭುಲಯ್ಯ 2' ಸಿನಿಮಾ ಗೆದ್ದಿರುವುದು ಮಂಕಾದ ಬಾಲಿವುಡ್‌ಗೆ ಹೊಸ ಚೈತನ್ಯ ತಂದುಕೊಟ್ಟಿದೆ ಎಂದು ಹಾರೈಸಿದ್ದಾರೆ. ಸದ್ಯ ಕಂಗನಾಳ ಈ ನಡೆಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದು, ಮುಂದಿನ ಸಿನಿಮಾಗಳಲ್ಲಿ ಒಳ್ಳೆಯ ಸ್ಕ್ರಿಪ್ಟ್‌ಗಳಲ್ಲಿ ನಟಿಸಲಿ ಎಂದು ಸಲಹೆ ನೀಡಿದ್ದಾರೆ.

  Actress Kangana Starrer Dhaakad Box Office Collection Day 2
  English summary
  Actress Kangana Starrer Dhaakad Box Office Collection Day 2,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X