»   » ಲಿಂಗ ಪತ್ತೆ ವದಂತಿ ಹಬ್ಬಿಸಿದವರಿಗೆ ಕರೀನಾ ಖಡಕ್ ಎಚ್ಚರಿಕೆ

ಲಿಂಗ ಪತ್ತೆ ವದಂತಿ ಹಬ್ಬಿಸಿದವರಿಗೆ ಕರೀನಾ ಖಡಕ್ ಎಚ್ಚರಿಕೆ

By: ಸೋನು ಗೌಡ
Subscribe to Filmibeat Kannada

ಬೇಬೋ ಕರೀನಾ ಕಪೂರ್ ಮತ್ತು ಸೈಫ್ ಅಲಿಖಾನ್ ಅವರು ತಮ್ಮ ಮನೆಗೆ ಪುಟ್ಟ ಅತಿಥಿಯೊಬ್ಬರನ್ನು ಬರಮಾಡಿಕೊಳ್ಳಲು ತಯಾರಾಗಿದ್ದಾರೆ. ಇದೀಗ ಈ ದಂಪತಿಗಳಿಗೆ ಯಾವ ಮಗು ಹುಟ್ಟುತ್ತದೆ ಅನ್ನೋ ಬಗ್ಗೆ ಭಾರಿ ಚರ್ಚೆ ಏರ್ಪಟ್ಟಿದೆ.

ಸದ್ಯಕ್ಕೆ ತಾಯಿಯಾಗುತ್ತಿರುವ ಸಂಭ್ರಮದಲ್ಲಿರುವ ನಟಿ ಕರೀನಾ ಕಪೂರ್ ಅವರು ತಮ್ಮ ಪತಿ ಸೈಫ್ ಅವರ ಜೊತೆಗೂಡಿ ಲಂಡನ್ ನಲ್ಲಿ ಲಿಂಗ ಪತ್ತೆ ಮಾಡಿಸಿಕೊಂಡಿದ್ದಾರೆ ಎಂಬುದಾಗಿ ಮಾಧ್ಯಮಗಳು ಪ್ರಚಾರ ಮಾಡಿವೆ. [ನನ್ನ ಮತ್ತು ಕರೀನಾ ಮಗು ಒಟ್ಟಿಗೆ ಸ್ಕೂಲ್ ಗೆ ಹೋಗ್ತಾರೆ: ತುಷಾರ್]

Actress Kareena and Saif Ali Khan deny sex determination test

ಲಿಂಗ ಪತ್ತೆ ನಡೆಸಿದ ಲಂಡನ್ ವೈದ್ಯರು ಕರೀನಾ ಮತ್ತು ಸೈಫ್ ದಂಪತಿಗಳಿಗೆ ಗಂಡು ಮಗು ಆಗುತ್ತೆ ಎಂದಿದ್ದಾರಂತೆ. ಆದರೆ ಇದನ್ನು ಕಠಿಣವಾಗಿ ತಳ್ಳಿ ಹಾಕಿರುವ ನಟಿ ಕರೀನಾ ಕಪೂರ್ 'ನಾನು ಯಾವುದೇ ಭ್ರೂಣಲಿಂಗ ಪತ್ತೆ ಪರೀಕ್ಷೆಗೆ ಒಳಗಾಗಿಲ್ಲ' ಎಂದು ಆಗಿ ಸ್ಪಷ್ಟನೆ ನೀಡಿದ್ದಾರೆ. [ಕರೀನಾಳಿಂದ ಮಕ್ಕಳು ನಿರೀಕ್ಷಿಸಿಲ್ಲ: ಸೈಫ್ ಅಲಿ ಖಾನ್]

Actress Kareena and Saif Ali Khan deny sex determination test

ಭಾರತದಲ್ಲಿ ಭ್ರೂಣಲಿಂಗ ಪತ್ತೆ ಕಾರ್ಯಕ್ಕೆ ನಿಷೇಧ ಇರುವ ಕಾರಣ ಕರೀನಾ ಅವರು ಚಿಕಿತ್ಸೆ ಪಡೆಯುವ ಸಲುವಾಗಿ ಲಂಡನ್ ಗೆ ತೆರಳಿ ಅಲ್ಲಿ ಲಿಂಗ ಪತ್ತೆ ಪರೀಕ್ಷೆ ಮಾಡಿಸಿಕೊಂಡಿದ್ದಾರೆ ಎಂದು ಎಲ್ಲಾ ಕಡೆ ಗುಲ್ಲೆದ್ದಿತ್ತು. [ಹಾಟ್ ತಾರೆಗಳ ಸೆಕ್ಸಿ ಬೆನ್ನಿನ ಚಿಲಿಪಿಲಿ ಚಿತ್ರಗಳು]

ಇದೀಗ ಎಲ್ಲಾ ಅಂತೆ-ಕಂತೆ ಸುದ್ದಿಗಳನ್ನು ತಳ್ಳಿ ಹಾಕಿರುವ ಸೈಫ್ ದಂಪತಿಗಳು ಒಬ್ಬರ ಖಾಸಗಿ ವಿಚಾರವನ್ನು ಅನಗತ್ಯವಾಗಿ ದೊಡ್ಡ ವಿಚಾರ ಮಾಡಿ ಸುದ್ದಿ ಮಾಡಬೇಡಿ ಎಂದು ಎಲ್ಲರಿಗೆ ಖಡಕ್ ಆಗಿ ವಾರ್ನ್ ಮಾಡಿದ್ದಾರೆ.

English summary
Bollywood star couple Saif Ali Khan and Kareena Kapoor Khan, who are expecting their first baby, have rubbished reports of having done a sex determination test in London.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada