For Quick Alerts
  ALLOW NOTIFICATIONS  
  For Daily Alerts

  ಮದುಗೆ ಸುದ್ದಿಗೆ ಹೊಸ ಟ್ವಿಸ್ಟ್‌ ಕೊಟ್ಟ ಕತ್ರೀನಾ ಕೈಫ್

  |

  ಬಾಲಿವುಡ್‌ನಲ್ಲಿ ಸ್ಟಾರ್‌ ಜೋಡಿಗಳ ಮದುವೆ ವಿಚಾರ ಬಂದರೆ ಸಾಕು, ಆ ಸುದ್ದಿಗೆ ಸಾಕಷ್ಟು ರೆಕ್ಕೆ ಪುಕ್ಕಗಳು ಬೆಳೆದು ಬಿಡುತ್ತವೆ. ಯಾಕಂದ್ರೆ ಬಾಲಿವುಡ್‌ನಲ್ಲಿ ಯಾವುದೇ ಸ್ಟಾರ್‌ ಜೋಡಿ ಮದುವೆ ಆದರು ಕೂಡ ಆದಷ್ಟು ಮದುವೆ ಸುದ್ದಿಯನ್ನ ಗೌಪ್ಯವಾಗಿ ಕಾಪಾಡಿ ಕೊಂಡಿರುತ್ತಾರೆ.

  ಬಹುತೇಕರು ಸದ್ದಿಲ್ಲದೆ ಮದುವೆಯಾಗಿ ಸುದ್ದಿ ಆಗಿ ಬಿಡುತ್ತಾರೆ. ಈಗ ಇದೇ ಸಾಲಿಗೆ ಮತ್ತೊಂದು ಜೋಡಿ ಸೇರಿಕೊಳ್ಳುತ್ತಿದೆ. ನಟಿ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ಸುದ್ದಿ ಸದ್ಯಕ್ಕೆ ರೆಕ್ಕೆ ಪುಟ್ಟ ಕಟ್ಟಿಕೊಂಡು ಹಾರಾಡುತ್ತಿದೆ.

  ಹಲವು ತಿಂಗಳಿನಿಂದ ಈ ಸುದ್ದಿ ಹರಿದಾಡುತ್ತಿದ್ದರು, ಮದುವೆ ಬಗ್ಗೆ ಈ ಜೋಡಿ ಮಾತನಾಡಿರಲಿಲ್ಲ. ಅಥವಾ ಮದುವೆ ಆಗುತ್ತೇವೆ ಅನ್ನುವ ಬಗ್ಗೆ ಎಲ್ಲೂ ಬಾಯ್ಬಿಟ್ಟಿಲ್ಲ. ಆದರೂ ಕೂಡ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಹಲವು ಬರಿ ಒಟ್ಟೊಟ್ಟಿಗೆ ಕ್ಯಾಮೆರಾ ಕಣ್ಣಿಗೆ ಬಿದ್ದ ಕಾರಣ ಅವರ ಮದುವೆ ಸುದ್ದಿ ದೊಡ್ಡದಾಗಿ ಹಬ್ಬಿ ಬಿಟ್ಟಿದೆ. ಇನ್ನೂ ಈ ಜೋಡಿ ಮದುವೆ ಆಗೋದು ಪಕ್ಕ ಅನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಜೀವಂತವಾಗಿದೆ. ಅಷ್ಟೇ ಅಲ್ಲ ಈ ಜೋಡಿ ಇದೆ ವರ್ಷದ ಅಂತ್ಯದಲ್ಲಿ, ಅಂದರೆ ಡಿಸೆಂಬರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ ಎಂದು ಹೇಳಲಾಗುತ್ತಿತ್ತು. ಅದು ಯಾವ ಮಟ್ಟಿಗೆ ಈ ಜೋಡಿಯ ಮದುವೆ ಸುದ್ದಿ ಹಬ್ಬಿದೆ ಅಂದರೆ, ಈಗಾಗಲೇ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ತೆರೆಮರೆಯಲ್ಲಿ ಮದುವೆಯ ತಯಾರಿಯನ್ನು ನಡೆಸಿದ್ದಾರೆ. ಮದುವೆಗಾಗಿ ಶಾಪಿಂಗ್ ಕೂಡ ಆರಂಭಿಸಿದ್ದಾರೆ. ಮದುವೆಯ ಉಡುಪಿಗಳನ್ನ ಬಾಲಿವುಡ್‌ನ ಖ್ಯಾತ ವಸ್ತ್ರ ವಿನ್ಯಾಸಕ ಸಬ್ಯಸಾಚಿಯ ಬಳಿ ಡಿಸೈನ್‌ ಮಾಡಿಸಲಾಗುತ್ತಿದೆ ಅಂತಲೂ ಹೇಳಲಾಗಿತ್ತು.

  ಮದುವೆ ಸುದ್ದಿ ಸುಳ್ಳು ಎಂದ ಕತ್ರೀನಾ ಕೈಫ್!

  ಮದುವೆ ಬಗ್ಗೆ ಹರಿದಾಡುತ್ತಿರುವ ಎಲ್ಲಾ ವಿಚಾರಕ್ಕೂ ಈಗ ನಟಿ ಕತ್ರಿನಾ ಕೈಫ್ ಫುಲ್ ಉತ್ತರ ಕೊಟ್ಟಿದ್ದಾರೆ. ತನ್ನ ಮದುವೆ ವಿಚಾರದ ಬಗ್ಗೆ ಹರಿದಾಡುತ್ತಾ ಇರುವ ಸುದ್ದಿಗಳು ಶುದ್ಧ ಸುಳ್ಳು ಎಂದಿದ್ದಾರೆ. ಬಾಲಿವುಡ್‌ ಮಾಧ್ಯಮ ಒಂದರ ಸಂದರ್ಶನದಲ್ಲಿ ಈ ಬಗ್ಗೆ ಕತ್ರೀನಾ ಮಾತನಾಡಿದ್ದಾರೆ.

  ಮದುವೆ ಸುದ್ದಿಗಳು ಈ ರೀತಿ ಯಾಕೆ ಹುಟ್ಟಿ ಕೊಳ್ಳುತ್ತಿವೆ ಎನ್ನುವುದರ ಬಗ್ಗೆ ನನಗೆ ಅರಿವಿಲ್ಲ, ನನ್ನ ಮದುವೆ ಯಾವಾಗ ಎನ್ನುವುದು ಬೇರೆ ಯಾರೋ ನಿರ್ಧರಿಸುತ್ತಿದ್ದಾರೆ. ನನಗೆ ಗೊತ್ತಿಲ್ಲದೆ ನಾನು ಡಿಸೆಂಬರ್‌ನಲ್ಲಿ ಮದುವೆಯಾಗುತ್ತಿದ್ದೇನೆ ಎಂದು ಹೇಳಲಾಗುತ್ತೆ ಎಂದು ಕತ್ರೀನಾ ಲೇವಡಿ ಮಾಡಿದ್ದಾರೆ.

   Actress katrina kaif Talk About Her Wedding With Vicky Kaushal

  ಸದ್ಯಕ್ಕೆ ಮದುವೆ ಆಗುತ್ತಿಲ್ಲ ಎನ್ನುವ ವಿಚಾರವನ್ನ ನಟಿ ಕತ್ರೀನಾ ಹಂಚಿಕೊಂಡಿದ್ದಾರೆ. ಆದ್ರೆ ಎಲ್ಲೂ ಕೂಡ ತಾನು ವಿಕ್ಕಿ ಕೌಶಲ್ ಜೊತೆಗೆ ಮದುವೆ ಆಗುವುದಿಲ್ಲ ಎಂದು ಹೇಳಿಕೊಂಡಿಲ್ಲ. ಹಾಗಾಗಿ ಕತ್ರೀನಾ ಮತ್ತು ವಿಕ್ಕಿ ಮದುವೆಯಾಗುವುದು ಪಕ್ಕ ಎನ್ನುವಂತಾಗಿದೆ. ಡಿಸೆಂಬರ್‌ನಲ್ಲಿ ಮದುವೆ ಆಗದೇ ಹೋದರು ಕೂಡ ಮುಂದೆ ಕತ್ರೀನಾ ಮತ್ತು ವಿಕ್ಕಿ ಸತಿಪತಿಯಾಗಿ ಅಭಿಮಾನಿಗಳ ಮುಂದೆ ಸರ್ಪ್ರೈಸ್ ಎಂಟ್ರಿ ಕೊಡುವ ವಿಚಾರವನ್ನ ತಳ್ಳಿ ಹಾಕುವ ಹಾಗಿಲ್ಲ. ಯಾಕೆಂದರೆ ಈ ಹಿಂದೆ ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಸ್ಟಾರ್ ನಟ ನಟಿಯರು ತಮ್ಮ ಮದುವೆಯ ವಿಚಾರವನ್ನು ಗೌಪ್ಯವಾಗಿ ಕಾಪಾಡಿಕೊಂಡು ಬಂದಿದ್ದರು. ಅವರ ಮದುವೆ ದಿನವೇ ಮದುವೆ ಆಗುತ್ತಿದ್ದಾರೆ ಅನ್ನೋ ವಿಚಾರ ಬೆಳಕಿಗೆ ಬಂದಿತ್ತು. ಹಾಗಾಗಿಯೇ ಈ ಜೋಡಿಯೂ ಕೂಡ ತಮ್ಮ ಮದುವೆ ವಿಚಾರವನ್ನು ಗೌಪ್ಯವಾಗಿ ಕಾಪಾಡಿಕೊಂಡು ಬರುತ್ತಿದೆ ಎನ್ನಲಾಗುತ್ತಿದೆ. ಸದ್ಯಕ್ಕಂತೂ ಈ ವರ್ಷ ಮದುವೆ ಇಲ್ಲ ಎನ್ನುವಂತಹ ವಿಚಾರವನ್ನು ಕತ್ರಿನಾ ಸ್ಪಷ್ಟಪಡಿಸಿದ್ದಾರೆ ಆದರೆ ಮುಂದೆ ಏನು ಅನ್ನುವುದರ ಬಗ್ಗೆ ಕತ್ರೀನಾ ಬಾಯ್ಬಿಟ್ಟಿಲ್ಲ.

  English summary
  Actress katrina kaif Refuse Her Wedding With vicky kaushal,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X