For Quick Alerts
  ALLOW NOTIFICATIONS  
  For Daily Alerts

  ಹಲ್ಲೆ ಮಾಡಿ ನಟಿಯಿಂದ ಮೊಬೈಲ್ ಕಸಿದು ಪರಾರಿ

  |

  ಮುಂಬೈನಲ್ಲಿ ಇತ್ತೀಚೆಗೆ ನಟಿಯರ ಮೇಲೆ ಹಲ್ಲೆ ದೌರ್ಜನ್ಯದ ಸುದ್ದಿಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಇದೀಗ ನಟಿ ನಿಖಿತಾರ ಮೇಲೆ ಹಲ್ಲೆ ಮಾಡಿದ ಕೆಲ ದುರುಳರು ಆಕೆಯ ಮೊಬೈಲ್ ಫೋನ್ ಕಸಿದು ಪರಾರಿಯಾಗಿರುವ ಘಟನೆ ವರದಿಯಾಗಿದೆ.

  ಸಿನಿಮಾಗಳು ಹಾಗೂ ಹಿಂದಿ ಧಾರಾವಾಹಿಗಳಲ್ಲಿ ಜನಪ್ರಿಯವಾಗಿರುವ ನಟಿ ನಿಖಿತಾ ದತ್ತಾ, ನಿನ್ನೆ (ಡಿಸೆಂಬರ್ 01) ರಾತ್ರಿ ಮುಂಬೈನ ಬಾಂದ್ರಾ ಏರಿಯಾದಲ್ಲಿ ನಡೆದುಕೊಂಡು ತಮ್ಮ ಮನೆಯತ್ತ ಹೋಗಬೇಕಾದರೆ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು, ನಟಿಯ ತಲೆಗೆ ಹೊಡೆದಿದ್ದಾರೆ. ನಂತರ ಆಕೆಯ ಬಳಿ ಇದ್ದ ಮೊಬೈಲ್ ಅನ್ನು ಕಸಿದು ಪರಾರಿಯಾಗಿದ್ದಾರೆ.

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟಿ ನಿಖಿತಾ ದತ್ತ, ''ಬಾಂದ್ರಾದ 14ನೇ ಅಡ್ಡರಸ್ತೆಯಲ್ಲಿ ರಾತ್ರಿ 7:45ರ ಸಮಯದಲ್ಲಿ ನಡೆದುಕೊಂಡು ಹೋಗಬೇಕಾದರೆ ಬೈಕ್‌ನಲ್ಲಿ ಬಂದ ಇಬ್ಬರು ನನ್ನ ತಲೆಗೆ ಹೊಡೆದು ಮೊಬೈಲ್ ಕಸಿದು ಪರಾರಿಯಾದರು. ಆ ಅಚಾನಕ್ ಘಟನೆಯಿಂದ ನನಗೆ ದಿಗ್ಬ್ರಮೆಯಾಯಿತು. ಆ ಕ್ಷಣದಲ್ಲಿ ಅಲ್ಲಿದ್ದ ಕೆಲವು ಪಾದಚಾರಿಗಳು ನನ್ನ ನೆರವಿಗೆ ಬಂದರು, ಒಬ್ಬ ವ್ಯಕ್ತಿಯಂತೂ ಬೈಕ್‌ನಲ್ಲಿ ಅವರನ್ನು ಹಿಂಬಾಲಿಸುವ ಯತ್ನ ಮಾಡಿದರು ಆದರೆ ಅವರು ಸಿಗಲಿಲ್ಲ'' ಎಂದಿದ್ದಾರೆ ನಟಿ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  ಕೆಲವು ದಿನಗಳ ಹಿಂದೆ ನಟಿ ಪಾಯಲ್ ಘೋಷ್ ಅವರ ಮೇಲೆ ಮುಂಬೈನಲ್ಲಿಯೇ ಗುಂಪೊಂದು ದಾಳಿ ಮಾಡಿ ಅವರ ಮೇಲೆ ಆಸಿಡ್ ಎರಚಲು ಯತ್ನಿಸಿತು. ಅವರ ಮೇಲೆ ಹಲ್ಲೆ ಸಹ ಮಾಡಲಾಗಿತ್ತು. ಈ ದಾಳಿಯಲ್ಲಿ ನಟಿಯ ಕೈಗೆ ತೀವ್ರ ಪೆಟ್ಟಾಗಿತ್ತು. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

  ಅದಕ್ಕೂ ಹಿಂದೆ ನಟಿ ನಿಖಿತಾ ರಾವಲ್‌ ಮೇಲೆ ದೆಹಲಿಯಲ್ಲಿ ಗುಂಪೊಂದು ದಾಳಿ ಮಾಡಿತ್ತು. ನಟಿಗೆ ಬಂದೂಕು ತೋರಿಸಿ ನಟಿಯಿಂದ ಏಳು ಲಕ್ಷ ರುಪಾಯಿ ಮೌಲ್ಯದ ನಗದು ಹಾಗೂ ಒಡವೆಗಳನ್ನು ದೋಚಲಾಗಿತ್ತು. ಇನ್ನೋವಾ ಕಾರಿನಲ್ಲಿ ಬಂದಿದ್ದ ದರೋಡೆಕೋರರ ಗುಂಪು, ನಟಿಯಿಂದ ಚಿನ್ನದ ಉಂಗುರ, ವಜ್ರ ಹೊಂದಿದ್ದ ಸರ, ಕೆಲವು ಲಕ್ಷ ರುಪಾಯಿ ನಗದು ಹಣವನ್ನು ದೋಚಿಕೊಂಡು ಹೋಗಿದ್ದರು.

  ಬಾಲಿವುಡ್ ನಟಿ ಅಲಂಕೃತಾ ಸಹಾಯ್ ಅವರ ಚಂಡೀಘಡದ ಬಾಲಿವುಡ್ ನಟಿ ಅಲಂಕೃತಾ ಸಹಾಯ್ ಚಂಡೀಘಡದ ತಮ್ಮ ಹೊಸ ಮನೆಯಲ್ಲಿ ಒಬ್ಬರೇ ಇರುವ ಸಮಯದಲ್ಲಿ ಮನೆಗೆ ನುಗ್ಗಿದ ಮೂವರು ದರೋಡೆಕೋರರು ನಟಿಗೆ ಚಾಕು ತೋರಿಸಿ ಹೆದರಿಸಿದ್ದಾರೆ, ಹಲ್ಲೆ ಸಹ ಮಾಡಿದ್ದಾರೆ. ನಟಿಯು ಹೆಗೊ ತಪ್ಪಿಸಿಕೊಂಡು ತಮ್ಮ ರೂಮ್‌ ಸೇರಿಕೊಂಡಿದ್ದಾಳೆ, ರೂಮ್‌ನ ಒಳಗೂ ನುಗ್ಗಿದಾಗ ಬಾತ್‌ರೂಂ ಸೇರಿಕೊಂಡಿದ್ದಾಳೆ. ಆದರೆ ದರೋಡೆಕೋರರು ನಟಿಯನ್ನು ಹೆದರಿಸಿ, ಪ್ರಾಣ, ಮಾನ ಬೆದರಿಕೆ ಹಾಕಿ ಆಕೆಯ ಎಟಿಎಂ ಕಾರ್ಡ್‌, ಪಿನ್ ನಂಬರ್, ಮನೆಯಲ್ಲಿದ್ದ ಹಣ ಚಿನ್ನಗಳನ್ನು ದೋಚಿಕೊಂಡು ಹೋಗಿದ್ದರು. ಮೇಲಿನ ಈ ಎಲ್ಲ ಪ್ರಕರಣಗಳು ಕೆಲವೇ ತಿಂಗಳ ಅಂತರದಲ್ಲಿ ನಡೆದಿವೆ.

  English summary
  Actress Nikita Dutta's mobile phone snatched in Mumbai. She filled FIR in police station. She said two men came in bike and snatched her phone and ran away.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X