»   » ಭಾರತದ ಈ ಸ್ಟಾರ್ ಕ್ರಿಕೆಟರ್ ಜೊತೆ ಪರಿಣಿತಿ ಚೋಪ್ರಾ ಲವ್ವಿ-ಡವ್ವಿ.!

ಭಾರತದ ಈ ಸ್ಟಾರ್ ಕ್ರಿಕೆಟರ್ ಜೊತೆ ಪರಿಣಿತಿ ಚೋಪ್ರಾ ಲವ್ವಿ-ಡವ್ವಿ.!

Posted By:
Subscribe to Filmibeat Kannada
Parineeti Chopra and Indian cricketer Hardik Pandya's romantic chat on Twitter

ಭಾರತದ ಕ್ರಿಕೆಟರ್ ಗಳ ಜೊತೆ ಬಾಲಿವುಡ್ ನಟಿಯರ ಲವ್ವಿ-ಡವ್ವಿ ಹೊಸದೇನಲ್ಲ. ಈ ಸಂಸ್ಕೃತಿ ತುಂಬ ಹಳೆಯ ಕಾಲದಿಂದಲೂ ನಡೆದುಕೊಂಡು ಬಂದಿದೆ. ಕ್ರಿಕೆಟ್ ಆಟದಲ್ಲಿ ಖ್ಯಾತಿಗಳಿಸುತ್ತಿದ್ದಂತೆ ಆ ಆಟಗಾರನ ಜೊತೆ ಓರ್ವ ನಟಿಯ ಹೆಸರು ಅಂಟಿಕೊಳ್ಳುತ್ತೆ. ಹೆಸರು ಮಾತ್ರವಲ್ಲ, ಅವರಿಬ್ಬರ ಮಧ್ಯೆ ಲವ್, ಡೇಟಿಂಗ್ ಅಂತ ಸುದ್ದಿ ಹರಿದಾಡುತ್ತೆ.

ಈ ಹಿಂದೆ ಕೂಡ ಅಂತಹ ಉದಾಹರಣೆಗಳು ನಡೆದಿದ್ದು, ಶರ್ಮಿಳಾ ಠಾಗೋರ್‌-ಮನ್ಸೂರ್ ಆಲಿ ಪಟೌಡಿ, ಸಂಗೀತ ಬಿಜಲಾನಿ-ಮೊಹಮ್ಮದ್ ಅಜರುದ್ದೀನ್, ವಿರಾಟ್ ಕೋಹ್ಲಿ-ಅನುಷ್ಕಾ ಶರ್ಮಾ ಅವರ ಲವ್‌ಸ್ಟೋರಿ ಹೆಚ್ಚು ಫೇಮಸ್. ಈಗ ಇಂತಹದ್ದೇ ಸುದ್ದಿಯಲ್ಲಿ ಭಾರತದ ಯಂಗ್ ಕ್ರಿಕೆಟರ್ ಒಬ್ಬನ ಹೆಸರು ಕೇಳಿ ಬರುತ್ತಿದೆ. ಯಾರದು? ಮುಂದೆ ಓದಿ.....

ಪರಿಣಿತಿ ಜೊತೆ ಈ ಕ್ರಿಕೆಟರ್ ಡೇಟಿಂಗ್!

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಜೊತೆ ಭಾರತದ ಯಂಗ್ ಕ್ರಿಕೆಟರ್ ಡೇಟಿಂಗ್ ಮಾಡ್ತಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಈಗ ಬಾಲಿವುಡ್ ನಲ್ಲಿ ಬ್ಲ್ಯಾಸ್ಟ್ ಆಗಿದೆ. ಈ ಕ್ರಿಕೆಟರ್ ಸದ್ಯ ಶ್ರೀಲಂಕಾ ವಿರುದ್ಧದ ಸರಣೆಯಲ್ಲಿ ಆಡುತ್ತಿದ್ದಾರೆ.

ಇವರೇ ಆ ಕ್ರಿಕೆಟರ್

ಪರಿಣಿತಿ ಚೋಪ್ರಾ ಜೊತೆ ತಳುಕು ಹಾಕಿಕೊಂಡಿರುವ ಆ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ. ಐಪಿಎಲ್ ಕ್ರಿಕೆಟ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಭಾರತದ ಯುವ ಕ್ರಿಕೆಟ್ ಆಟಗಾರ.

ಇಬ್ಬರು ಮಧ್ಯೆ ಸಂಥಿಂಗ್!

ಇಬ್ಬರು ಪರಸ್ಪರ ಟ್ವಿಟ್ಟರ್ ನಲ್ಲಿ 'ಲವ್' ಎಂಬ ಟಾಪಿಕ್ ಬಗ್ಗೆ ಮಾತನಾಡಿರುವುದು ಎಲ್ಲರಿಗೂ ಕುತೂಹಲ ಮೂಡಿಸಿದೆ. ಹೀಗಾಗಿ, ಇವರಿಬ್ಬರ ಮಧ್ಯೆ ಸಂಥಿಂಗ್ ಇರಬಹುದು ಎನ್ನುತ್ತಿದ್ದಾರೆ.

ಟ್ವಟ್ಟರ್ ನಲ್ಲಿ ನಡೆದಿದ್ದೇನು?

"The perfect trip with the most amazing partner. Love is in the air!!!" ಎಂದು ಪರಿಣಿತಿ ಟ್ವಿಟ್ಟ್ ಮಾಡಿದ್ದರು. ಅದಕ್ಕೆ ಹಾರ್ದಿಕ್ ಪಾಂಡ್ಯ "Can I guess? I think this is a second Bollywood and Cricket link. Great click by the way" ಎಂದು ಮರು ಟ್ವಿಟ್ಟ್ ಮಾಡಿದ್ದರು. ಇದಕ್ಕೆ ಮತ್ತೆ ಉತ್ತರ ಕೊಟ್ಟ ಪರಿಣಿತಿ ''Hahaha. Maybe. Maybe not. All I can say is that the clue is in the pic itself" ಎಂದಿದ್ದರು. ಇದು ಮತ್ತಷ್ಟು ಕುತೂಹಲ ಹೆಚ್ಚಿಸಿತು.

ಎಲ್ಲರ ದೃಷ್ಟಿ ಬದಲಿಸಿದ ಪರಿಣಿತಿ

ಪರಿಣಿತಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಟ್ವೀಟ್ ಸಂಭಾಷಣೆ ನೋಡಿ ಎಲ್ಲರೂ ಅವರದ್ದೇ ಆದ ಕಲ್ಪನೆ ಮಾಡಿಕೊಂಡರು. ಇದನ್ನ ಗಮನಿಸಿದ ಪರಿಣಿತಿ ''ತನ್ನ ಹೊಸ ಪಾರ್ಟನರ್ Xiaomi ಫೋನ್'' ಎಂದು ವಿಡಿಯೋದಲ್ಲಿ ಹೇಳುವ ಮೂಲಕ ಎಲ್ಲ ಚರ್ಚೆಗಳಿಗೂ ತೆರೆ ಎಳೆದರು.

English summary
Rumours of a love connect between bollywood actress Parineeti Chopra and indian cricketer Hardik Pandya recently started doing the rounds.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada