For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ ಶರ್ಮಾ ಬಳಿಕ ತಾಯಿ ಆಗುವ ಬಯಕೆ ಬಿಚ್ಚಿಟ್ಟ ನಟಿ ಪ್ರಿಯಾಂಕಾ ಚೋಪ್ರಾ

  |

  ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ನಿನ್ನೆ (ಜನವರಿ 11) ರಂದು ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಅನುಷ್ಕಾ ಪತಿ ವಿರಾಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಸಂತಸ ವ್ಯಕ್ತ ಪಡಿಸಿದ್ದಾರೆ.

  Virat ಹಾಗು Anushka ದಂಪತಿಗೆ ಮುದ್ದಾದ ಹೆಣ್ಣು ಮಗು ಜನನ | Oneindia Kannada

  ಅನುಷ್ಕಾ ಶರ್ಮಾ ತಾಯಿಯಾಗುತ್ತಿದ್ದಂತೆ ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟಿ ಪ್ರಿಯಾಂಕಾ ತಾಯಿಯಾಗುವ ಬಯಕೆ ಬಿಚ್ಚಿಟ್ಟಿದ್ದಾರೆ. ಇತ್ತೀಚಿಗೆ ಸಂದರ್ಶವೊಂದರಲ್ಲಿ ಮಾತನಾಡಿದ ಪ್ರಿಯಾಂಕಾ ಮಕ್ಕಳ ಬಗ್ಗೆ ಮತ್ತು ತನ್ನ ಸುಂದರ ಸಂಸಾರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

  ಪ್ರಿಯಾಂಕಾ ಚೋಪ್ರಾ ಪತಿ ಈ ವರ್ಷ ಗಳಿಸಿದ್ದಾರೆ ಹುಬ್ಬೇರುವಷ್ಟು ಹಣ!

  ತುಂಬಾ ಮಕ್ಕಳನ್ನು ಪಡೆಯುವ ಆಸೆ ಇದೆ ಎಂದು ಹೇಳಿದ್ದಾರೆ.'ನಾನು ಮಕ್ಕಳನ್ನು ಪಡೆಯಲು ಬಯಸುತ್ತೇನೆ. ಎಷ್ಟು ಸಾಧ್ಯವೋ ಅಷ್ಟು' ಎಂದು ಹೇಳಿದ್ದಾರೆ. ಎಷ್ಟು ಮಕ್ಕಳು ಬೇಕು ಎಂದು ಕೇಳಿದ ಪ್ರಶ್ನೆಗೆ ಪ್ರಿಯಾಂಕಾ 'ಕ್ರಿಕೆಟ್ ಟೀಂ ಕಟ್ಟುವಷ್ಟು' ಎಂದು ಹೇಳಿದ್ದಾರೆ.

  ಇನ್ನು ತನ್ನ ಸಂಸಾರದ ಬಗ್ಗೆ ಮಾತನಾಡಿದ ಪ್ರಿಯಾಂಕಾ,'ಭಾರತಕ್ಕೆ ಬರಬೇಕು ಎಂದಾಗಲೆಲ್ಲ ನಿಕ್ ನೀರಿನಲ್ಲಿ ಇರುವ ಮೀನಿನಂತೆ ಕರೆದುಕೊಂಡು ಬರುತ್ತಾರೆ. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡರೆ ಇಬ್ಬರ ನಡುವೆ ಸಮಸ್ಯೆ ಇರುವುದಿಲ್ಲ' ಎಂದಿದ್ದಾರೆ.

  ಇನ್ನು ಕ್ವಾರಂಟೈನ್ ಬಗ್ಗೆ ಮಾತನಾಡಿದ ಪ್ರಿಯಾಂಕಾ, 'ನಮಗೆ ಒಟ್ಟಿಗೆ ಸಮಯ ಕಳೆಯಲು ಸಾಧ್ಯವಾಯಿತು. ನಿಜಕ್ಕೂ ಒಂದು ರೀತಿಯಲ್ಲಿ ಒಳ್ಳೆಯದಾಯಿತು. ಇಬ್ಬರ ಮೃತ್ತಿಜೀವನದಲ್ಲಿ ಒಟ್ಟಿಗೆ ಸಮಯ ಕಳೆಯಲು ಸಿಗುವುದೇ ತೀರ ಕಡಿಮೆ' ಎಂದು ಹೇಳಿದ್ದಾರೆ.

  ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ನಿಕ್ ಜೋನಸ್ 2018 ಡಿಸೆಂಬರ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾರತದಲ್ಲಿ ನಡೆದ ವಿವಾಹ ಮಹೋತ್ಸವಕ್ಕೆ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿ ಶುಭಹಾರೈಸಿದ್ದರು.

  English summary
  Bollywood Actress priyanka chopra wants many childrens with Nick Jonas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X