For Quick Alerts
  ALLOW NOTIFICATIONS  
  For Daily Alerts

  'ಕ್ಯಾಸ್ಟಿಂಗ್ ಕೌಚ್' ಭೂತ ರಾಧಿಕಾ ಆಪ್ಟೆ ಅವರನ್ನೂ ಬಿಟ್ಟಿಲ್ಲಾ

  By Sonu
  |

  ತೆರೆಯ ಮೇಲೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ನಟಿ ರಾಧಿಕಾ ಆಪ್ಟೆಯನ್ನು ಕೂಡ 'casting couch' ಭೂತ ಬೆನ್ನು ಬಿಟ್ಟಿಲ್ಲ ಅಂದ್ರೆ ನಂಬ್ತೀರಾ. ಖಂಡಿತ ನಂಬಲೇಬೇಕು ನೀವು, ಇತ್ತೀಚೆಗಷ್ಟೇ 'ಕಬಾಲಿ' ನಟಿ ರಾಧಿಕಾ ಅವರು ಈ ಬಗ್ಗೆ ಮಾಧ್ಯಮದ ಮುಂದೆ ಕಿಡಿ ಕಾರಿದ್ದರು.

  ಯಾವುದೇ ಸಿನಿಮಾಗಳಲ್ಲಿ ನಟಿಯಾಗಿ ಕಾಣಿಸಿಕೊಳ್ಳಬೇಕಾದರೆ, ಒಂದೋ ನಿರ್ದೇಶಕರ ಜೊತೆ ಸಹಕರಿಸಬೇಕು, ಇಲ್ಲಾ ನಿರ್ಮಾಪಕರು ಹೇಳಿದಂತೆ ಕುಣಿಯಬೇಕು. ಚಿತ್ರರಂಗ ಎಂಬ ಕಲರ್ ಫುಲ್ ದುನಿಯಾದಲ್ಲಿ ಹಲವು ನಟಿಯರಿಗೆ ಕಹಿ ಅನುಭವಗಳೇ ಜಾಸ್ತಿ ಸಿಗುತ್ತೆ.

  ಈಗಾಗಲೇ 'ಕ್ಯಾಸ್ಟಿಂಗ್ ಕೌಚ್' (ಲೈಂಗಿಕವಾಗಿ ದುರುಪಯೋಗ ಪಡಿಸಿಕೊಳ್ಳೋದು) ಬಗ್ಗೆ ಹಲವು ನಟಿಯರು ಬಾಯಿ ಬಿಟ್ಟಿದ್ದಾರೆ. ಸ್ಯಾಂಡಲ್ ವುಡ್ ನಟಿ ಪ್ರಿಯಾಂಕ ಜೈನ್ ಮತ್ತು ಬಹುಭಾಷಾ ನಟಿ ಸುರ್ವಿನ್ ಚಾವ್ಲಾ ತಮಗಾದ ಕೆಟ್ಟ ಅನುಭವಗಳನ್ನು ಯಾವುದೇ ಸಂಕೋಚ ಇಲ್ಲದೆ ಹೇಳಿಕೊಂಡಿದ್ದಾರೆ.[ನಿರ್ದೇಶಕನ ಅಸಹ್ಯತನ ಬಯಲು ಮಾಡಿದ ನಟಿ ಸುರ್ವಿನ್]

  ಇದೀಗ ನಟಿ ರಾಧಿಕಾ ಆಪ್ಟೆ ಅವರು ಕೂಡ ಈ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿನಿಮಾ ಎಂಬ ರಂಗೀನ್ ಪ್ರಪಂಚದಲ್ಲಿ ವಾಸ್ತವ ಬೇರೆ ರೀತಿ ಇರುತ್ತೆ. ಹೊರಗಡೆಯಿಂದ ನೋಡಲು ಮಾತ್ರ ಚೆಂದ ಒಳಗಡೆ ಹೋಗಿ ನೋಡಿದರೆ ಬಂಡವಾಳ ಗೊತ್ತಾಗುತ್ತೆ, ಎನ್ನುತ್ತಾರೆ ಆಪ್ಟೆ. ಮುಂದೆ ಓದಿ....

  ಬಾಲಿವುಡ್ ಮತ್ತು ದಕ್ಷಿಣ ಭಾರತದಲ್ಲಿ ಆಪ್ಟೆಗೆ ಈ ಅನುಭವ

  ಬಾಲಿವುಡ್ ಮತ್ತು ದಕ್ಷಿಣ ಭಾರತದಲ್ಲಿ ಆಪ್ಟೆಗೆ ಈ ಅನುಭವ

  ನಟಿ ಸುರ್ವಿನ್ ಚಾವ್ಲಾ ಅವರು ದಕ್ಷಿಣ ಭಾರತದಲ್ಲಿ ಮಾತ್ರ ತಮಗೆ ಕೆಟ್ಟ ಅನುಭವ ಆಯ್ತು, ಆದರೆ ಬಾಲಿವುಡ್ ನಲ್ಲಿ ಯಾವತ್ತೂ ಹಾಗೆ ಆಗಲಿಲ್ಲ, ಎಂದಿದ್ದರು. ಆದ್ರೆ ರಾಧಿಕಾ ಆಪ್ಟೆ ಅವರಿಗೆ ದಕ್ಷಿಣ ಭಾರತ ಮತ್ತು ಬಾಲಿವುಡ್ ಎರಡೂ ಚಿತ್ರರಂಗ ಕ್ಷೇತ್ರದಲ್ಲಿ ಕೆಟ್ಟ ಅನುಭವ ಎರುರಾಗಿದೆ ಎಂದಿದ್ದಾರೆ.[ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಬಗ್ಗೆ ಮನಬಿಚ್ಚಿ ಮಾತಾಡಿದ ನಟಿ ಸುರ್ವಿನ್]

  ಹತ್ತಿರವಾಗಲು ಯತ್ನಿಸಿದ ನಟ

  ಹತ್ತಿರವಾಗಲು ಯತ್ನಿಸಿದ ನಟ

  ನಟಿ ರಾಧಿಕಾ ಅವರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬಿಜಿಯಾಗಿದ್ದಾಗ, ಒಬ್ಬ ದಕ್ಷಿಣ ಭಾರತ ಚಿತ್ರರಂಗದ ನಟ, ರಾಧಿಕಾ ಆಪ್ಟೆ ಅವರ ರೂಮ್ ಗೆ ಪದೇ ಪದೇ ಫೋನ್ ಮಾಡಿ ತುಂಬಾ ಹತ್ತಿರವಾಗಲು ಪ್ರಯತ್ನಪಟ್ಟಿದ್ದನಂತೆ. ಆವಾಗ ರಾಧಿಕಾ ಅವರು ಅವನ ಹತ್ತಿರ ಬಹಳ ಒರಟಾಗಿ ನಡೆದುಕೊಂಡರಂತೆ. ತದನಂತರ ಆ ನಟ ರಾಧಿಕಾ ಅವರ ಮೇಲೆ ಇದೇ ದ್ವೇಷ ಒಟ್ಟುಕೊಂಡು ಒಂದು ಬಾರಿ ಜಗಳ ಬೇರೆ ಆಡಿದ್ದನಂತೆ. ಆದರೆ ಆ ನಟ ಯಾರು ಅಂತ ರಾಧಿಕಾ ಅವರು ಬಾಯಿ ಬಿಟ್ಟಿಲ್ಲ.[ಕನ್ನಡ ಚಿತ್ರರಂಗದ 'ಕಾಮ'ಪುರಾಣ ಬಿಚ್ಚಿಟ್ಟ ನಟಿ ಪೂವಿಶಾ]

  ಮಲಗಲು ಆಫರ್ ಕೊಟ್ಟ ಬಾಲಿವುಡ್ ನಿರ್ಮಾಪಕ

  ಮಲಗಲು ಆಫರ್ ಕೊಟ್ಟ ಬಾಲಿವುಡ್ ನಿರ್ಮಾಪಕ

  'ಒಂದ್ಸಾರಿ ರಾಧಿಕಾ ಅವರಿಗೆ ಒಬ್ಬ ಬಾಲಿವುಡ್ ಸಿನಿಮಾ ನಿರ್ಮಾಪಕನಿಂದ ಕಾಲ್ ಬಂದಿತ್ತಂತೆ, ನಾವೊಂದು ಬಾಲಿವುಡ್ ಸಿನಿಮಾ ಮಾಡುತ್ತಿದ್ದೇವೆ, ನಾನು ನಿರ್ದೇಶಕರನ್ನು ಪರಿಚಯ ಮಾಡಿಸುತ್ತೇನೆ, ನಿಮಗೆ ಅವರ ಜೊತೆ ಹಾಸಿಗೆ ಹಂಚಿಕೊಳ್ಳಲು ಏನೂ ಅಭ್ಯಂತರ ಇಲ್ಲ ತಾನೆ' ಅಂತ ಕೂಲ್ ಆಗಿ ಕೇಳಿದ್ದನಂತೆ'.[ಸ್ಯಾಂಡಲ್ ವುಡ್ ನಲ್ಲಿ 'ಲೈಂಗಿಕ ಕಿರುಕುಳ' ಬಗ್ಗೆ ಕವಿತಾ ಲಂಕೇಶ್ ಪ್ರತಿಕ್ರಿಯೆ]

  ಸರಿಯಾಗಿ ಝಾಡಿಸಿದ್ದ ಆಪ್ಟೆ

  ಸರಿಯಾಗಿ ಝಾಡಿಸಿದ್ದ ಆಪ್ಟೆ

  ನಿರ್ಮಾಪಕ ಈ ಮಾತನ್ನು ಕೇಳಿದ ರಾಧಿಕಾ ಅವರು, ಅಷ್ಟೇ ಕೂಲಾಗಿ, ನಗುತ್ತಾ, ನೀವು ತುಂಬಾ ತಮಾಷೆ ಮಾಡುತ್ತೀರಾ, ಆದ್ರೆ ನನಗೆ ಅಭ್ಯಂತರ ಇದೆ. ಅವನು ಯಾವನೋ ಇದ್ದಾನಲ್ಲಾ ಅವನಿಗೆ ಹೋಗಿ ಎಲ್ಲಾದ್ರೂ ಸಾಯೋಕೆ ಹೇಳು, ಅವನು ಬದುಕಿದ್ದೂ ವೇಸ್ಟ್ ಅಂತ, ಸರಿಯಾಗಿ ಉಗಿದು ಉಪ್ಪಿನಕಾಯಿ ಹಾಕಿದ್ರಂತೆ.

  'ಪಾರ್ಚ್ಡ್' ಬಿಡುಗಡೆ ಆಯ್ತು

  'ಪಾರ್ಚ್ಡ್' ಬಿಡುಗಡೆ ಆಯ್ತು

  ರಾಧಿಕಾ ಆಪ್ಟೆ ಅವರ ಅರೆಬೆತ್ತಲೆ ದೃಶ್ಯಗಳಿಂದ ಕೂಡಿದ 'ಪಾರ್ಚ್ಡ್' ಚಿತ್ರದ ಕೆಲವು ದೃಶ್ಯಗಳು, ಬಿಡುಗಡೆಗೆ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿ ಭಾರಿ ಸುದ್ದಿ ಮಾಡಿತ್ತು. ಇದೀಗ ಆ ಸಿನಿಮಾ ನಿನ್ನೆ (ಸೆಪ್ಟೆಂಬರ್ 23) ತೆರೆಕಂಡಿದ್ದು ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಅಜಯ್ ದೇವಗನ್ ಅವರ ನಿರ್ಮಾಣದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಹೆಣ್ಣುಮಕ್ಕಳ ಮೇಲೆ ಗಂಡು ಜಾತಿ ಹೇಗೆ ಸವಾರಿ ಮಾಡುತ್ತಿದೆ ಅನ್ನೋದನ್ನ ಸವಿಸ್ತಾರವಾಗಿ ಹೇಳುತ್ತಾ ಹೋಗಿದ್ದಾರೆ, ನಿರ್ದೇಶಕಿ ಲೀನಾ ಯಾದವ್ ಅವರು.

  English summary
  'Kabali' Actress Radhika Apte recently spoke about her casting couch experience.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X