For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟಿ ರೀಚಾ ಚಡ್ಡಾಗೆ ಭಾರತ ರತ್ನ ಅಂಬೇಡ್ಕರ್ ಪ್ರಶಸ್ತಿ

  |

  ಬಾಲಿವುಡ್‌ ನಟಿ ರೀಚಾ ಚಡ್ಡಾಗೆ ಭಾರತ ರತ್ಮ ಡಾ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

  ಪ್ರಯೋಗಾತ್ಮಕ, ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ 33 ವರ್ಷದ ರೀಚಾ ಚಡ್ಡಾಗೆ ಮಹಾರಾಷ್ಟ್ರ ಸರ್ಕಾರವು ಈ ಗೌರವ ನೀಡಿದ್ದು, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಪ್ರಶಸ್ತಿಯನ್ನು ವಿತರಿಸಲಿದ್ದಾರೆ.

  ಪ್ರಶಸ್ರಿಯ ಸುದ್ದಿ ಕೇಳಿ ಥ್ರಿಲ್ ಆಗಿರುವ ರೀಚಾ ಚಡ್ಡಾ, 'ಈ ಗೌರವವು ನನ್ನ ಹೃದಯಕ್ಕೆ ಹತ್ತಿರವಾದುದು, ಯಾವುದೇ ಗಾಡ್‌ಫಾದರ್‌ಗಳಿಲ್ಲದೆ ಚಿತ್ರರಂಗಕ್ಕೆ ಬಂದ ನನ್ನಂಥಹವರಿಗೆ ಇಂಥಹಾ ಎಲ್ಲಾ ಪ್ರಶಸ್ತಿ ಗೌರವಗಳೂ ಸಹ ವಿಶೇಷವೇ' ಎಂದಿದ್ದಾರೆ.

  'ಈ ಪ್ರಶಸ್ತಿಯು ನನ್ನ ಕನಸನ್ನು ಜೀವಂತವಾಗುಳಿಸಿದೆ. ನನ್ನ ಪ್ರತಿಭೆ ಮೇಲೆ ವಿಶ್ವಾಸ ಹೆಚ್ಚಿಸಿದೆ. ಕೇವಲ ಮನೊರಂಜನೆಗೆ ಮಾತ್ರವಲ್ಲದೆ, ಸಮಾಜದ ಪ್ರತಿಬಿಂಬದಂಥಹಾ ಸಿನಿಮಾಗಳನ್ನು ಮಾಡುವುದು ನನ್ನ ಉದ್ದೇಶ ಅದನ್ನು ಮುಂದುವರೆಸಲಿದ್ದೇನೆ' ಎಂದಿದ್ದಾರೆ ರೀಚಾ ಚಡ್ಡಾ.

  ಧ್ರುವ ಸರ್ಜಾ ನೋಡಲು ಮುಗಿಬಿದ್ದ ಅಭಿಮಾನಿಗಳು | Dhruva Sarja | Filmibeat Kannada

  ವೃತ್ತಿಯ ಆರಂಭದಲ್ಲಿಯೇ ತಾಯಿ, ಅಜ್ಜಿಯ ಪಾತ್ರಗಳನ್ನು ನಿರ್ವಹಿಸಿದ ರೀಚಾ ಚಡ್ಡಾ ತಮ್ಮ ನಟನೆಯಿಂದ ಬಾಲಿವುಡ್‌ನ ಗಮನ ಸೆಳೆದಿದ್ದರು. 'ಗ್ಯಾಂಗ್ಸ್ ಆಫ್ ವಾಸೆಪ್ಪುರ್, ಮಸಾನ್, ಸರಬ್ಜಿತ್, ದಾಸ್ಸ ದೇವ್, ಸೆಕ್ಷನ್ 375 ಇನ್ನೂ ಹಲವು ಉತ್ತಮ ಸಿನಿಮಾಗಳಲ್ಲಿ ನಟಿಸಿದ್ದಾರೆ ರೀಚಾ ಚಡ್ಡಾ.

  English summary
  Bollywood actress Richa Chadha honored with Bharat Ratna Dr Ambedkar award by Maharashtra government.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X