»   » ನಟಿ ಸನಾ ಖಾನ್ ಮತ್ತವರ ಬಾಯ್ ಫ್ರೆಂಡ್ ಅರೆಸ್ಟ್

ನಟಿ ಸನಾ ಖಾನ್ ಮತ್ತವರ ಬಾಯ್ ಫ್ರೆಂಡ್ ಅರೆಸ್ಟ್

By: ಉದಯರವಿ
Subscribe to Filmibeat Kannada

ಬಾಲಿವುಡ್ ತಾರೆ ಸನಾ ಖಾನ್ ಮತ್ತವರ ಬಾಯ್ ಫ್ರೆಂಡ್ ಇಸ್ಮಾಯಿಲ್ ಖಾನ್ ಅವರನ್ನು ಮುಂಬೈ ನಗರ ಪೊಲೀಸರು ಬಂಧಿಸಿದ್ದಾರೆ. ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಇವರಿಬ್ಬರ ಜೊತೆಗೆ ಅವರ ಮನೆಕೆಲಸದವನನ್ನೂ ಬಂಧಿಸಲಾಗಿದೆ.

ಮಾಧ್ಯಮ ಸಮಾಲೋಚಕರೊಂದಿಗೆ ಇವರು ಅಸಭ್ಯವಾಗಿ ವರ್ತಿಸಿದ್ದಷ್ಟೇ ಅಲ್ಲದೆ ಲೈಂಗಿಕ ದೌರ್ಜನ್ಯ ಎಸಗಿರುವ ಕಾರಣ ಅರೆಸ್ಟ್ ಮಾಡಲಾಗಿದೆ. ಈ ಘಟನೆಯ ಬಗ್ಗೆ ಮುಂಬೈ ಅಂಬಲಿ ಪೊಲೀಸ್ ಸ್ಟೇಷನ್ ಅಧಿಕಾರಿ ರಮೇಶ್ ಖಟಾರೆ ವಿವರಿಸುತ್ತಾ, "ಸನಾ ಖಾನ್, ಇಸ್ಮಾಯಿಲ್ ಖಾನ್, ಅವರ ಮನೆಕೆಲಸದವ ರಾಮುಲು ಅವರನ್ನು ಸೆಕ್ಷನ್ 354, 506, 34ರಡಿ ಬಂಧಿಸಿದ್ದೇವೆ" ಎಂದಿದ್ದಾರೆ.


ಮಾಧ್ಯಮ ಸಮಾಲೋಚಕಿ ಪೂನಮ್ ಖನ್ನಾ ಅವರು ಕೊಟ್ಟ ದೂರಿನ ಮೇರೆಗೆ ಇವರ ಮೇಲೆ ಕೇಸು ನಮೂದಿಕೊಂಡಿದ್ದೆವು. ಬಂಧಿಸಿದ ಕೂಡಲೇ ನ್ಯಾಯಾಲಯದಲ್ಲಿ ಹಾಜರುಪಡಿಸಿದೆವು. ಕೂಡಲೆ ಅವರು ಜಾಮೀನಿನ ಮೇಲೆ ಬಿಡುಗಡೆಯಾದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿಯೊಂದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 21ರಂದು ಇವರು ಪೂನಮ್ ಖನ್ನಾ ಅವರಿಗೆ ಕಿರುಕುಳ ನೀಡಿದ್ದಾರೆಂದು, ಮುಂಬೈ ಅಂಧೇರಿಯ ಆಸ್ಪತ್ರೆಯೊಂದರ ಬಳಿ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸದ್ಯಕ್ಕೆ ಪೂನಮ್ ಖನ್ನಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಹಿಂದೊಮ್ಮೆ ಸನಾ ಖಾನ್ ಕಿಡ್ನಾಪ್ ಕೇಸ್ ವೊಂದರಲ್ಲಿ ಅರೆಸ್ಟ್ ಆಗಿದ್ದರು. ಹದಿನೈದು ವರ್ಷದ ಯುವತಿಯೊಬ್ಬರು ತನ್ನ ಸೋದರ ಸಂಬಂಧಿಯೊಂದಿಗಿನ ಮದುವೆಯನ್ನು ತಿರಸ್ಕರಿಸಿದ್ದಕ್ಕೆ ಆಕೆಯನ್ನು ಕಿಡ್ನಾಪ್ ಮಾಡಲು ಪ್ರಯತ್ನಿಸಿದ್ದರು. ಈ ಕೇಸಿನಲ್ಲಿ ಸನಾ ಖಾನ್ ನಿರೀಕ್ಷಿಣಾ ಜಾಮೀನಿನ ಮೇಲಿದ್ದಾರೆ.

ಸನಾ ಖಾನ್ ಅವರಿಗೆ ಈ ನಿರೀಕ್ಷಣಾ ಜಾಮೀನು ಹೇಗೆ ಸಿಕ್ಕಿತು ಎಂಬ ಬಗ್ಗೆ ವರದಿ ಪ್ರಕಟಿಸಲಾಗಿತ್ತು. ಈ ಸಂಬಂಧ ಮಾಧ್ಯಮ ಸಮಾಲೋಚಕಿ ಪೂನಂ ಖನ್ನಾ ಅವರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಸನಾ ಖಾನ್ ಅವರು ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆಗೆ 'ಜೈ ಹೋ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

English summary
Bollywood actress Sana Khan, her boyfriend Ismail Khan, and their servant were today arrested after a media consultant accused them of criminal intimidation and molestation.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada