»   » ಅಮಲೇರಿಸುವ ಆಮದು ತಾರೆ ಸರಾ ಲೋರೆನ್

ಅಮಲೇರಿಸುವ ಆಮದು ತಾರೆ ಸರಾ ಲೋರೆನ್

By: ಉದಯರವಿ
Subscribe to Filmibeat Kannada

ಬಾಲಿವುಡ್ ಚಿತ್ರಜಗತ್ತಿಗೆ ಮತ್ತೊಬ್ಬ ಅಮಲೇರಿಸುವ ಬೆಡಗಿ ಅಡಿಯಿಟ್ಟಿದ್ದಾರೆ. ಪಾಕಿಸ್ತಾನದಿಂದ ಆಮದಾದ ಈ ಚೆಲುವೆ ಹೆಸರು ಸರಾ ಲೋರೆನ್. ತಮ್ಮ ಅತ್ಯದ್ಭುತ ಮೈಮಾಟದ ಮೂಲಕ ಚಿತ್ರರಸಿಕರ ನಿದ್ದೆಗೆಡಿಸಲಿದ್ದಾರೆ.

ಈ ಚೆಲುವೆ ಈ ಹಿಂದೆ ಬಾಲಿವುಡ್ ಚಿತ್ರಳಾದ ಕಜ್ ರಾರೆ ಹಾಗೂ ಮರ್ಡರ್ 3 ಚಿತ್ರಗಳಲ್ಲಿ ಅಭಿನಯಿಸಿದ್ದರು. ಆಗ ಅಪರಿಚರಾಗಿದ್ದ ಸರಾ ಈಗ 'ಇಷ್ಕ್ ಕ್ಲಿಕ್' ಚಿತ್ರದ ಮೂಲಕ ಎಲ್ಲರೂ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದಾರೆ. [ವೀಣಾ ಮಲಿಕ್ ನಗ್ನ ದೇಹದ ಮೇಲೆ ಅರಳಿದ ಚಿತ್ರಕಲೆ]

ಇಷ್ಕ್ ಕ್ಲಿಕ್ ಚಿತ್ರದ ಸ್ಟಿಲ್ಸ್ ಒಂದಕ್ಕಿಂತ ಒಂದು ಸೂಪರ್ ಆಗಿದ್ದು, ಸರಾ ಲೋರೆನ್ ಅವರ ಮೈಸಿರಿಗೆ ಮಾರುಹೋಗಿದ್ದಾರೆ. ಇಷ್ಕ್ ಕ್ಲಿಕ್ ಚಿತ್ರ ಮತ್ತಷ್ಟು ರೋಮ್ಯಾಂಟಿಕ್ ಚಿತ್ರಗಳನ್ನು ಸ್ಲೈಡ್ ನಲ್ಲಿ ನೋಡೋಣ ಬನ್ನಿ.

ಚಿತ್ರ ಹೀರೋಯಿನ್ನೇ ಪ್ರಮುಖ ಆಕರ್ಷಣೆ

ಅನಿಲ್ ಬಾಲನಿ ಆಕ್ಷನ್ ಕಟ್ ಹೇಳಿರುತ್ತಿರುವ ಈ ಚಿತ್ರ ಹೀರೋ ಅಧ್ಯಾಯನ್ ಸುಮನ್. ಚಿತ್ರದ ಪೋಸ್ಟರ್ ಗಳನ್ನು ನೋಡುತ್ತಿದ್ದರೆ ಹೀರೋಗಿಂತಲೂ ಹೀರೋಯಿನ್ನೇ ಈ ಚಿತ್ರದ ಪ್ರಮುಖ ಆಕರ್ಷಣೆ ಅನ್ನಿಸುತ್ತದೆ.

ಸಂಗೀತ ನಿರ್ದೇಶಕರೇ ನಿರ್ಮಾಪಕರು

ನಿರ್ಮಾಪಕರಾಗಿ ಬದಲಾಗಿರುವ ಸಂಗೀತ ನಿರ್ದೇಶಕರಾದ ಅಜಯ್ ಜೈಸ್ವಾಲ್ ಮತ್ತು ಸತೀಶ್ ತಿರುಪತಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಭಟ್ ಕ್ಯಾಂಪ್ ನಿಂದ ಬಂದವರು

ಇನ್ನು ಚಿತ್ರದ ಹೀರೋ ಹಾಗೂ ನಾಯಕಿ ಸರಾ ಲೋರೆನ್ ಇಬ್ಬರೂ ಬಾಲಿವುಡ್ ಭಟ್ ಕ್ಯಾಂಪ್ ನಿಂದ ಬಂದವರು.

ಇದೊಂದು ಪಕ್ಕಾ ಲವ್ ಸ್ಟೋರಿ

ಇಷ್ಟಕ್ಕೂ ಈ ಚಿತ್ರದ ಕಥೆ ಏನೆಂದರೆ ಶೀರ್ಷಿಕೆಯೇ ಅರ್ಧ ಕಥೆ ಹೇಳುವಂತಿದೆ! ಇದೊಂದು ಪಕ್ಕಾ ಲವ್ ಸ್ಟೋರಿ.

ಒಂದಕ್ಕಿಂತ ಒಂದು ಸೂಪರ್ ಪೋಸ್ಟರ್ ಗಳು

ಇನ್ನು ಫೋಟೋಗಳು ನೋಡುತ್ತಿದ್ದರೆ ಲವ್ ಸ್ಟೋರಿಗೂ ಮೀರಿದ ವಿಶೇಷತೆ ಇನ್ನೇನೋ ಇದೆ ಅನ್ನಿಸದೆ ಇರದು.

English summary
Pakistani actress Sara Loren stills from Bollywood Movie Ishq Click. The movie is director by Anil Balani. Starring Adhyayan Suman and Sara Loren in the lead roles.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada