»   » ಕಾಫಿ ಕಪ್ ನಲ್ಲಿ ಮಾನ ಮುಚ್ಚಿಕೊಂಡ ಶೆರ್ಲಿನ್!

ಕಾಫಿ ಕಪ್ ನಲ್ಲಿ ಮಾನ ಮುಚ್ಚಿಕೊಂಡ ಶೆರ್ಲಿನ್!

By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ನಲ್ಲಿ ಬಿಚ್ಚಮ್ಮ ಎಂದೇ ಖ್ಯಾತಳಾಗಿರುವ ನಟಿ ಶೆರ್ಲಿನ್ ಚೋಪ್ರಾ ಮತ್ತೊಮ್ಮೆ ತಮ್ಮ ದೇಹಸಿರಿಯನ್ನು ಅನಾವರಣಗೊಳಿಸಿದ್ದಾರೆ. ಈ ಬಾರಿ ಅವರ ಮಾನ ಮುಚ್ಚಿದ್ದು ಕೇವಲ ಒಂದೇ ಒಂದು ಕಾಫಿ ಕಪ್ ! ಹೌದು ಇದು ಅಚ್ಚರಿಯಾದರೂ ನಿಜ. ಬೇಕಿದ್ದರೆ ಚಿತ್ರಗಳನ್ನು ನೋಡಿ. ನಿಮ್ಮ ಕಣ್ಣನ್ನು ನೀವೇ ನಂಬಲ್ಲ!

ಸದಾ ಸುದ್ದಿಯಲ್ಲಿ ಇರಬೇಕೆಂದರೆ ಶೆರ್ಲಿನ್ ಈ ರೀತಿ ಯಾವುದೋ ಒಂದು ಅಡ್ಡದಾರಿ ಹಿಡಿಯುತ್ತಲೇ ಬಂದಿದ್ದಾರೆ. ಈ ಬಾರಿ ಅವರ ತಲೆಗೆ ಹೊಳೆದದ್ದು ಕಾಫಿ ಕಪ್. ಅಷ್ಟೇ ಅದನ್ನೇ ತಮ್ಮ ಮಾನ ಕಾಪಾಡಿಕೊಳ್ಳಲು ಬಳಸಿದ್ದಾರೆ. ಈ ಮೂಲಕ ಕಾಫಿ ಕಪ್ ನಲ್ಲೂ ಮಹಿಳೆಯರು ಪ್ರಾಣ ಹೇಗೋ ಗೊತ್ತಿಲ್ಲ, ಆದರೆ ಮಾನವನ್ನಂತೂ ಕಾಪಾಡಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಕಾಲು ಮೇಲೆ ಕಾಲು ಹಾಕಿಕೊಂಡು ಆ ಭಾಗದಲ್ಲೊಂದು ಕಪ್ ಇಟ್ಟ ಹೊಸ ಫೋಟೋವನ್ನು ಹರಿಯಬಿಟ್ಟಿದ್ದಾರೆ. ಈ ರೀತಿಯ ಫೋಟೋಗಳು ಶೆರ್ಲಿನ್ ಅವರಿಗೆ ಹೊಸದಲ್ಲ ಬಿಡಿ. ಈ ಹಿಂದೆ ಹುಟ್ಟುಡುಗೆಯಲ್ಲೇ ದರ್ಶನ ನೀಡಿ ತಮ್ಮ ಅಭಿಮಾನಿಗಳನ್ನು ಹಳ್ಳಕ್ಕೆ ತಳ್ಳಿದ್ದರು.

ಪಡ್ಡೆಗಳ ಉಸಿರುಗಟ್ಟುವಂತೆ ಮಾಡಿದ ಶೆರ್ಲಿನ್

ಈ ಬಾರಿ ಏಕ್ ದಂ ಈ ರೀತಿ ಭಂಗಿಯಲ್ಲಿ ಕಾಣಿಸಿಕೊಂಡು ಪಡ್ಡೆಗಳು ಉಕ್ಕಿರಿಬಿಕ್ಕಿರಿಯಾಗಿ ಉಸಿರುಗಟ್ಟುವಂತೆ ಮಾಡಿದ್ದಾರೆ.

ಕಾಫಿ ಕಪ್ ಮೂಲಕ ಆ ಭಾಗ ಕವರ್ ಮಾಡಿದ ಶೆರ್ಲಿನ್

ತಮ್ಮ ಉತ್ತರ ಪ್ರದೇಶವನ್ನು ತಲೆಗೂದಲಿಂದ ಮುಚ್ಚಿಕೊಂಡಿದ್ದು, ಮಧ್ಯಪ್ರದೇಶವನು ಹಾಗೆಯೇ ಗಾಳಿಗೆ ಬಿಟ್ಟು ಬಂಗಾಳ ಕೊಲ್ಲಿಯ ಮೇಲೆ ಮೇಲೊಂದು ಕಾಫಿ ಕಪ್ ಇಡುವ ಮೂಲಕ ಆ ಭಾಗವನ್ನು ಕವರ್ ಮಾಡಿದ್ದಾರೆ.

ಪಾರದರ್ಶಕ ಉಡುಗೆಯಲ್ಲೂ ದರ್ಶನ

66ನೇ ಕ್ಯಾನೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶೆರ್ಲಿನ್ ಪಾರದರ್ಶಕ ಉಡುಗೆಯಲ್ಲಿ ದರ್ಶನ ನೀಡಿದ್ದರು. ಅದಾದ ಬಳಿಕ ಈಗ ಈ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಾಮಸೂತ್ರ 3dಯಲ್ಲೂ ಇದೇ ಅವತಾರ

ಇನ್ನು ಶೆರ್ಲಿನ್ ಚೋಪ್ರಾ ಕಾಮಸೂತ್ರ 3d ಚಿತ್ರದಲ್ಲೂ ಅಭಿನಯಿಸಿದ್ದಾರೆ. ಈ ಚಿತ್ರ ಈಗಾಗಲೆ ಎಲ್ಲರ ನಿದ್ದೆಗೆಡಿಸಿರುವುದು ಗೊತ್ತೇ ಇದೆ.

ವಾತ್ಸಾಯನ ಕಾಮಸೂತ್ರ ಗ್ರಂಥವೇ ಇದಕ್ಕೆ ಸ್ಫೂರ್ತಿ

ವಾತ್ಸಾಯನ ಬರೆದ ಭಾರತದ ಅತ್ಯಂತ ಪ್ರಾಚೀನ ಗ್ರಂಥ 'ಕಾಮಸೂತ್ರ' ಮೂಲಾಧಾರವಾಗಿಟ್ಟುಕೊಂಡು ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ.

ರುಪೇಶ್ ಪೌಲ್ ಆಕ್ಷನ್ ಕಟ್ ಹೇಳಿರುವ ಚಿತ್ರ

ರುಪೇಶ್ ಪೌಲ್ ಆಕ್ಷನ್ ಕಟ್ ಹೇಳಲಿರುವ ಚಿತ್ರ. 2012ರ ಕ್ಯಾನೆ ಚಿತ್ರೋತ್ಸವದಲ್ಲಿ ಈ ಚಿತ್ರವನ್ನು ಪ್ರಕಟಿಸಲಾಯಿತು.

English summary
Actress Sherlyn Chopra poses for stunning photo. The latest is a picture of the Sherlyn sitting on a chair, nude with just a cup of coffee to cover what needs to be covered.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada