For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಮನೆಯಲ್ಲಿ ಚೋರಿ

  By Rajendra
  |

  ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ "ಚೋರಿಯಾಗಿದೆ ನನ್ನ ದಿಲ್..." (ಪ್ರೀತ್ಸೋದ್ ತಪ್ಪ) ಎಂದು ಹಾಡಿ ಕುಣಿದಿದ್ದ ಬಾಲಿವುಡ್ ಬೊಂಬಾಟ್ ಬೆಡಗಿ ಶಿಲ್ಪಾ ಶೆಟ್ಟಿ ಮನೆಯಲ್ಲಿ ಚೋರಿಯಾಗಿದೆ. ಆದರೆ ಅವರ ದಿಲ್ ಅಲ್ಲ, ಬದಲಾಗಿ ಅವರ ಐಪಾಡ್ ಹಾಗೂ ಐಪ್ಯಾಡ್ ಕದ್ದಿದ್ದಾನೆ ಖತರ್ನಾಕ್ ಕಳ್ಳ.

  ಶಿಲ್ಪಾ ಶೆಟ್ಟಿ ಅವರ ಐಪಾಡ್ ಹಾಗೂ ಐಪ್ಯಾಡ್ ಸುಮಾರು ರು.1.10 ಲಕ್ಷ ಬೆಲೆಬಾಳುತ್ತವೆ. ಈ ಸಂಬಂಧ ಜುಹು ಪೊಲೀಸ್ ಠಾಣೆಯಲ್ಲಿ ಬುಧವಾರ (ಅ.16) ಶಿಲ್ಪಾ ಮ್ಯಾನೇಜರ್ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು ಅವರ ಜುಹು ಅಪಾರ್ಟ್ ಮೆಂಟ್ ನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

  ತನ್ನ ಪತಿ ರಾಜ್ ಕುಂದ್ರಾ ಜೊತೆ ಜುಹು ಫ್ಲಾಟ್ ನಲ್ಲಿ ಶಿಲ್ಪಾ ವಾಸವಾಗಿದ್ದು ಇಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳನ ಚಿತ್ರಗಳು ಸೆರೆಯಾಗಿವೆ. ಆ ಕಳ್ಳ ಮಾತ್ರ ಇನ್ನೂ ಪೊಲೀಸರ ಕೈಗೆ ಸಿಕ್ಕಿಬಿದ್ದಿಲ್ಲ. ಪಾಪ ಐಪ್ಯಾಡ್ ಹಾಗೂ ಐಪಾಡ್ ನಲ್ಲಿ ಏನೆಲ್ಲಾ ಖಾಸಗಿ ಮಾಹಿತಿಗಳಿದ್ದವೋ ಏನೋ?

  ಅಪಾರ್ಟ್ ಮೆಂಟ್ ನ ನೆಲ ಮತ್ತು ಮೊದಲ ಮಹಡಿ ಶಿಲ್ಪಾ ಅವರಿಗೆ ಸೇರಿದೆ. ನೆಲ ಮಹಡಿಯನ್ನು ಜಿಮ್ ಆಗಿ ಬದಲಾಯಿಸಲಾಗಿತ್ತು. ಮೊದಲ ಮಹಡಿಯಲ್ಲಿ ದಂಪತಿಗಳು ವಾಸಿಸುತ್ತಿದ್ದರು. ಮಂಗಳವಾರ ರಾತ್ರಿ ಜಿಮ್ ಮಹಡಿಯಲ್ಲಿ ರಾಜ್ ಕುಂದ್ರಾ ಐಪಾಡ್ ಬಳಸಿದ್ದರು. ಮರುದಿನ ಬೆಳಗ್ಗೆ ನೋಡಿದರೆ ಅವು ನಾಪತ್ತೆಯಾಗಿದ್ದವು. ಪೊಲೀಸರು ಮನೆಯ ಕೆಲಸದವರನ್ನು ವಿಚಾರಣೆ ನಡೆಸಿದ್ದಾರೆ. (ಏಜೆನ್ಸೀಸ್)

  English summary
  Bollywood star Shilpa Shetty's manager has filed a theft case against an unknown person at Juhu police station on Wednesday, alleging that someone stole her iPod player and iPad collectively worth Rs 1.10 lakh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X