For Quick Alerts
  ALLOW NOTIFICATIONS  
  For Daily Alerts

  ಸಂಜಯ್ ದತ್ ಎದುರು ನಿಂತಾಗ ಗಡಗಡ ನಡುಗಿದ್ದರಂತೆ ಶ್ರುತಿ ಹಾಸನ್

  |

  ಖ್ಯಾತ ನಟ ಕಮಲ್ ಹಾಸನ್ ಮಗಳು ಶ್ರುತಿ ಹಾಸನ್, ಸೋಹಮ್ ಶಾ ನಿರ್ದೇಶನದ 'ಲಕ್' ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದರು. ಈ ಚಿತ್ರದಲ್ಲಿ ಇಮ್ರಾನ್ ಖಾನ್ ಮತ್ತು ಸಂಜಯ್ ದತ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

  ಈ ಚಿತ್ರದ ಮೊದಲ ದೃಶ್ಯವನ್ನು ಶ್ರುತಿ, ಸಂಜಯ್ ದತ್ ಎದುರು ಅಭಿನಯಿಸಬೇಕಿತ್ತು. ಮೊದಲ ದಿನದಂದೇ ದೈತ್ಯ ದೇಹಿ ಸಂಜಯ್ ದತ್ ಎದುರು ನಟಿಸುವುದೆಂದರೆ ಸಾಮಾನ್ಯದ ಮಾತಾಗಿರಲಿಲ್ಲ. ಆ ಗಳಿಗೆ ಅವರ ವೃತ್ತಿಜೀವನದ ಅತ್ಯಂತ ಕಷ್ಟಕರ ಮತ್ತು ಭಯದ ಸಂದರ್ಭವಾಗಿತ್ತಂತೆ. ಮೊದಲ ದೃಶ್ಯದಲ್ಲಿ ನಟಿಸುವಾಗ ಅವರು ಅಕ್ಷರಶಃ ನಡುಗಿದ್ದರಂತೆ. ಈ ಕುರಿತಾದ ಅನುಭವವನ್ನು ಅವರು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

  ಪ್ಲಾಸ್ಟಿಕ್ ಸರ್ಜರಿ ನಂತರ ಶ್ರುತಿ ಹಾಸನ್ ಮುಖ ಹೀಗಾಗಿದೆ ನೋಡಿಪ್ಲಾಸ್ಟಿಕ್ ಸರ್ಜರಿ ನಂತರ ಶ್ರುತಿ ಹಾಸನ್ ಮುಖ ಹೀಗಾಗಿದೆ ನೋಡಿ

  ನರ್ವಸ್ ಆಗಿದ್ದೆ

  ನರ್ವಸ್ ಆಗಿದ್ದೆ

  'ನನ್ನ ಮೊದಲ ದೃಶ್ಯವಿದ್ದದ್ದು ಸಂಜಯ್ ದತ್ ಜತೆ. ಕ್ಯಾಮೆರಾ ಸ್ವಿಚ್ ಆನ್ ಮಾಡಿದ ಕೂಡಲೇ ನಾನು ನಡುಗತೊಡಗಿದೆ. ನಾನು ಬಹಳ ನರ್ವಸ್ ಆಗಿದ್ದೆ. ನನ್ನ ಸಹನಟ ಸಂಜಯ್ ದತ್ ಅವರಿಗೆ ಇದು ನನ್ನ ಮೊದಲ ಚಿತ್ರ ಎಂಬುದು ತಿಳಿದಿರಲಿಲ್ಲ. ಆದರೆ ನಿರ್ದೇಶಕ ಸೋಹಮ್ ಶಾ ನನಗೆ ಧೈರ್ಯ ತುಂಬಿ ನಿಭಾಯಿಸಿದರು' ಎಂದು ತಿಳಿಸಿದ್ದಾರೆ.

  ಡೈಲಾಗ್ ಇಲ್ಲದೆ ಕ್ಯಾಮೆರಾ ಎದುರಿಸಿದ್ದು

  ಡೈಲಾಗ್ ಇಲ್ಲದೆ ಕ್ಯಾಮೆರಾ ಎದುರಿಸಿದ್ದು

  ತಂದೆ ಕಮಲ್ ಹಾಸನ್ ಅವರ 'ಹೇ ರಾಮ್' ಚಿತ್ರದಲ್ಲಿ 2000ನೇ ಇಸವಿಯಲ್ಲಿಯೇ ಶ್ರುತಿ ಮೊದಲ ಬಾರಿ ಕ್ಯಾಮೆರಾ ಎದುರಿಸಿದ್ದರು. ಚಿತ್ರದಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಕಿರಿಯ ಪುತ್ರಿಯ ಪಾತ್ರಕ್ಕೆ ನಟಿಯೊಬ್ಬರು ಬೇಕಿತ್ತು. ಆಗ ಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡುತ್ತಿದೆ ಅಮ್ಮನಿಗೆ (ಸಾರಿಕಾ) ಸಹಾಯ ಮಾಡಲು ನಾನು ಸೆಟ್‌ನಲ್ಲಿದ್ದೆ. ಇದ್ದಕ್ಕಿದ್ದಂತೆ ಅವರು ಸಲ್ವಾರ್ ಕಮೀಜ್ ಕೊಟ್ಟು, ಅದನ್ನು ಧರಿಸಿ ಕ್ಯಾಮೆರಾ ಮುಂದೆ ನಿಲ್ಲುವಂತೆ ಮಾಡಿದರು. ಒಂದೂ ಡೈಲಾಗ್ ಇಲ್ಲದೆ ನಟಿಸಿದ ಮೊದಲ ದೃಶ್ಯ ಅದು. ಆಗ ನನ್ನ ವಯಸ್ಸು 14 ಎಂಬುದನ್ನು ನೆನಪಿಸಿಕೊಂಡಿದ್ದಾರೆ.

  ಮದುವೆಗೂ ಮುನ್ನ ಮುರಿದು ಬಿತ್ತು ಕಮಲ್ ಹಾಸನ್ ಪುತ್ರಿಯ ಪ್ರೀತಿಮದುವೆಗೂ ಮುನ್ನ ಮುರಿದು ಬಿತ್ತು ಕಮಲ್ ಹಾಸನ್ ಪುತ್ರಿಯ ಪ್ರೀತಿ

  ಮಾಧುರಿ ದೀಕ್ಷಿತ್ ಸ್ಫೂರ್ತಿ

  ಮಾಧುರಿ ದೀಕ್ಷಿತ್ ಸ್ಫೂರ್ತಿ

  'ನಾನು ಆರು ವರ್ಷದವಳಿದ್ದಾಗಲೇ ನಟಿಯಾಗಲು ಬಯಸಿದ್ದೆ. ಮಾಧುರಿ ದೀಕ್ಷಿತ್ ಅವರನ್ನು ಆರಾಧಿಸುತ್ತಿದ್ದೆ. ಆದರೆ ಕಾಲ ಕಳೆದಂತೆ ನಾನು ಆಕೆಯಷ್ಟು ಸುಂದರವಾಗಿ ಕಾಣುವುದಿಲ್ಲ ಅಥವಾ ಅವರಷ್ಟು ಚೆನ್ನಾಗಿ ನರ್ತಿಸುವುದಿಲ್ಲ ಎಂದು ಹೇಳಿಕೊಳ್ಳತೊಡಗಿದೆ. ಈ ಕನಸು ಬಿಟ್ಟು ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟೆ. ಅದೂ ಕೂಡ ನನ್ನ ಮೆಚ್ಚಿನದು. ಕ್ಯಾಲಿಫೋರ್ನಿಯಾದಲ್ಲಿ ಸಂಗೀತ ಅಧ್ಯಯನ ಮಾಡುವಾಗ ಅದರ ಭಾಗವಾಗಿ ನಾವು ನಾಟಕಗಳಲ್ಲಿ ನಟಿಸಬೇಕಿತ್ತು. ಅದಕ್ಕೆ ಆಗ ತಂದೆ ಸಹಾಯ ಮಾಡಿದ್ದರು. ಅಭಿನಯದ ಬಗ್ಗೆ ಆಲೋಚಿಸುವಂತೆ ಸಲಹೆ ನೀಡಿದ್ದರು' ಎಂದು ತಿಳಿಸಿದ್ದಾರೆ.

  ಮೊದಲ ಚಿತ್ರದಲ್ಲಿಯೇ ಡಬಲ್ ರೋಲ್

  ಮೊದಲ ಚಿತ್ರದಲ್ಲಿಯೇ ಡಬಲ್ ರೋಲ್

  ನಾನು ಭಾರತಕ್ಕೆ ಮರಳಿದ ನಂತರ ನನ್ನ ರಾಖಿ ಸಹೋದರ ಇಮ್ರಾನ್ ಖಾನ್, 2009ರ ಆಕ್ಷನ್ ಥ್ರಿಲ್ಲರ್ 'ಲಕ್' ಚಿತ್ರದ ನಿರ್ದೇಶಕರಿಗೆ ನನ್ನ ಹೆಸರು ಸೂಚಿಸಿದ್ದರು. ಸಂಜಯ್ ದತ್, ಮಿಥುನ್ ಚಕ್ರವರ್ತಿ ಜತೆಗೆ ಇಮ್ರಾನ್ ಕೂಡ ಪ್ರಮುಖ ಪಾತ್ರದಲ್ಲಿದ್ದರು. ಆಯೇಶಾ/ನಟಾಶಾ ಪಾತ್ರಕ್ಕೆ ನಾನು ಸೂಕ್ತಳೆಂದು ಒಪ್ಪಿಸಿದ್ದರು. ಹೀಗೆ ಮೊದಲ ಚಿತ್ರದಲ್ಲೇ ದ್ವಿಪಾತ್ರ ಸಿಕ್ಕಿತ್ತು. ಆದರೆ ಮೊದಲ ಸಲ ಕ್ಯಾಮೆರಾ ಎದುರಿಸಿದ ಅನುಭವ ಭಯಾನಕವಾಗಿತ್ತು ಎಂದು ತಿಳಿಸಿದ್ದಾರೆ.

  English summary
  Bollywood actress Shuti Haasan remembers her first movie scene experince with Sanjay Dutt in Luck movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X