»   » ಬಾಲಿವುಡ್ ಗೆ ವಿದಾಯ ಹೇಳಿದ ವೀಣಾ ಮಲಿಕ್

ಬಾಲಿವುಡ್ ಗೆ ವಿದಾಯ ಹೇಳಿದ ವೀಣಾ ಮಲಿಕ್

By: ಉದಯರವಿ
Subscribe to Filmibeat Kannada

ಪಾಕಿಸ್ತಾನಿ ಬೆಡಗಿ, ಬಾಲಿವುಡ್ ತಾರೆ, ವಿವಾದಗಳ ರಾಣಿ ವೀಣಾ ಮಲಿಕ್ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಮುಂದೆ ಅವರು ಕಮರ್ಷಿಯಲ್ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲವಂತೆ. ಮುಖ್ಯವಾಗಿ ಭಾರತದಲ್ಲಿ ನಿರ್ಮಾಣವಾಗುವ ಕಮರ್ಷಿಯಲ್ ಚಿತ್ರಗಳಲ್ಲಿ ಅಭಿನಯಿಸಲ್ಲ ಎಂಬುದು ವಿಶೇಷ.

ಮುಸ್ಲಿಂ ಮೌಲ್ವಿಯೊಬ್ಬರು ಕೊಟ್ಟ ಸಲಹೆ ಮೇರೆಗೆ ತಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ವೀಣಾ ಮಲಿಕ್ ತಿಳಿಸಿದ್ದಾರೆ. ಇನ್ನು ಮುಂದೆ ವೀಣಾರನ್ನು ಕೇವಲ ಸಾಮಾಜಿಕ, ಧಾರ್ಮಿಕ ಚಿತ್ರಗಳಲ್ಲಷ್ಟೇ ನೋಡಬಹುದು. [ವೀಣಾ ಮಲಿಕ್ ಗೆ ಶಾದಿಭಾಗ್ಯ]


ತಮ್ಮ ನಿವೃತ್ತಿ ಬಗ್ಗೆ ವೀಣಾ ಮಲಿಕ್ ಹೀಗೆಂದಿದ್ದಾರೆ, "ಚಿತ್ರರಂಗಕ್ಕೆ ವಿದಾಯ ಹೇಳುತ್ತಿದ್ದೇನೆ. ಇನ್ನು ಮುಂದೆ ಪಾಕಿಸ್ತಾನಿ ಹಾಗೂ ಭಾರತೀಯ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ" ಎಂದಿದ್ದಾರೆ ವೀಣಾ ಮಲಿಕ್. ಪತ್ರಿಕೆಯೊಂದದಲ್ಲಿ ನಗ್ನವಾಗಿ ಕಾಣಿಸಿಕೊಂಡಿದ್ದ ನಟಿ ವೀಣಾ ಮಲಿಕ್ ಈ ರೀತಿ ಮಾತನಾಡುತ್ತಿರುವುದು ಎಂದು ಅವರ ಅಭಿಮಾನಿಗಳು ನಿಬ್ಬೆರಗಾಗಿದ್ದಾರೆ.

ಈಗಾಗಲೆ ಸಹಿ ಹಾಕಿರುವ ಚಿತ್ರಗಳಲ್ಲೂ ಅಭಿನಯಸದಿರಲು ವೀಣಾ ಮಲಿಕ್ ನಿರ್ಧರಿಸಿದ್ದಾರೆ. "ಭಾರತೀಯ ನಿರ್ಮಾಪಕರ ಬಳಿ ಅಭಿನಯಿಸಲು ಅಂಗೀಕರಿಸಿರುವ ಚಿತ್ರಗಳನ್ನು ಕ್ಯಾನ್ಸಲ್ ಮಾಡಿಕೊಳ್ಳುತ್ತಿದ್ದೇನೆ" ಎಂದು ವೀಣಾ ಹೇಳಿದ್ದಾರೆ.

ಇತ್ತೀಚೆಗೆ ತಮ್ಮ ಪತಿ ಅಸಾದ್ ಜೊತೆಗೆ ಸೌದಿ ಅರೇಬಿಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಾಕಿಸ್ತಾನಿ ಪತ್ರಕರ್ತರೊಬ್ಬರು ವೀಣಾರನ್ನು ಸಂದರ್ಶಿಸಿದ್ದರು. ಆಗ ವೀಣಾ ಮಲಿಕ್ ನಿವೃತ್ತಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ ಸಾಮಾಜಿಕ ಸಂದೇಶ ಸಾರುವ ಚಿತ್ರಗಳಲ್ಲಿ ಅಭಿನಯಿಸುವುದಾಗಿ ಹೇಳಿಕೊಂಡಿದ್ದಾರೆ.

ಧಾರ್ಮಿಕ ಗುರು ಮೌಲಾನಾ ತಾರಿಖ್ ಜಮೀಲ್ ಅವರು ಕೊಟ್ಟ ಸಲಹೆ ಮೇರೆಗೆ ತಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ಯಾವುದೇ ಕಾರಣಕ್ಕೂ ಸ್ಕಾರ್ಫ್ ತೆಗೆಯದಿರುವಂತೆ ಅವರು ಸೂಚಿಸಿದರು. ನನ್ನ ಜೀವನದಲ್ಲಿ ಚಾಚೂ ತಪ್ಪದಂತೆ ಅವರು ಕೊಟ್ಟ ಸೂಚನೆಯನ್ನು ಪಾಲಿಸುತ್ತೇನೆ ಎಂದಿದ್ದಾರೆ.

English summary
Veena Malik, Pakistani actress and controversy queen, announced her retirement from commercial films, especially from ones that are made in India. She confesses that a Muslim cleric changed her life absolutely.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada