»   » ದೇಹ ಕಾಂತಿ ಹೆಚ್ಚಿಸಲು ಐಶ್ವರ್ಯ ರೈ ಗುಟ್ಟಾಗಿ ಮಾಡುತ್ತಿರುವುದೇನು?

ದೇಹ ಕಾಂತಿ ಹೆಚ್ಚಿಸಲು ಐಶ್ವರ್ಯ ರೈ ಗುಟ್ಟಾಗಿ ಮಾಡುತ್ತಿರುವುದೇನು?

Posted By:
Subscribe to Filmibeat Kannada

ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮದುವೆಯ ನಂತರವೂ ತಮ್ಮ ಮೋಹಕ ಸೌಂದರ್ಯವನ್ನ ಹಾಗೆ ಕಾಪಾಡಿಕೊಂಡು ಬರುತ್ತಿದ್ದಾರೆ. 'ಎ ದಿಲ್ ಹೈ ಮುಷ್ಕಿಲ್' ಚಿತ್ರದ ನಂತರ ತಮ್ಮ ಮುಂದಿನ ಚಿತ್ರಕ್ಕೆ ಸಜ್ಜಾಗುತ್ತಿರುವ ಐಶ್, ಯಾರಿಗೂ ಗೊತ್ತಾಗಾದ ಹಾಗೆ, ಫಿಟ್ನೆಸ್ ಕಾಪಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಕರೀನಾ ಕಪೂರ್ ಅವರ ಟೆಕ್ನಿಕ್ ಫಾಲೋ ಮಾಡ್ತಿದ್ದಾರೆ ಬಚ್ಚನ್ ಸೊಸೆ.

ಕರೀನಾ ಕಪೂರ್ ಮತ್ತು ಐಶ್ವರ್ಯ ರೈ ಇಬ್ಬರು ಬ್ಯೂಟಿಫುಲ್ ನಟಿಯರು. ಕರೀನಾ ಕಪೂರ್ ಸ್ಲಿಮ್ ಹಾಗೂ ಹಾಟ್ ಆಗಿ ಕಾಣಲು ಯೋಗದ ಮೊರೆ ಹೋಗಿದ್ದರು. ಅದಕ್ಕಾಗಿಯೆ ಈಗ ಐಶ್ ಕೂಡ ಇದೇ ಪ್ಲಾನ್ ಮಾಡಿದ್ದಾರೆ.

'ನ್ಯೂಯಾರ್ಕ್'ನಲ್ಲಿ ಹೊಸ ಮನೆ ಖರೀದಿಸಿದ ಐಶ್-ಅಭಿಷೇಕ್ ದಂಪತಿ

Aishwarya has appointed yoga instructor

ಅನಿಲ್ ಕಪೂರ್ ಹಾಗೂ ಐಶ್ವರ್ಯ ರೈ ಜೊತೆಯಾಗಿ ನಟಿಸುತ್ತಿರುವ 'ಫನ್ನಿಖಾನ್' ಚಿತ್ರಕ್ಕಾಗಿ ಐಶ್ವರ್ಯ ರೈ ಸ್ಲಿಮ್ ಹಾಗೂ ಹಾಟ್ ಆಗುತ್ತಿದ್ದಾರಂತೆ. ಇದಕ್ಕಾಗಿ ಯೋಗದ ಮೊರೆ ಹೋಗಿದ್ದಾರೆ. ಯೋಗ ತರಬೇತಿ ನೀಡಲು ಓರ್ವ ವ್ಯಕ್ತಿಯನ್ನ ಕೂಡ ನೇಮಿಸಿಕೊಂಡಿದ್ದಾರಂತೆ. ಈ ವ್ಯಕ್ತಿ 'ಧೂಮ್-2' ಚಿತ್ರದ ವೇಳೆ ಐಶ್ ಹಾಟ್ ಆಗಿ ಕಾಣಿಸಲು ಸಹಕಾರಿಯಾಗಿದ್ದರಂತೆ. ಹೀಗಾಗಿ, 'ಧೂಮ್-2' ಚಿತ್ರದಲ್ಲಿದ್ದ ಐಶ್ ಆಗಲು ಮತ್ತೆ ಪ್ರಯತ್ನ ಪಡುತ್ತಿದ್ದಾರೆ.

ಐಶ್ವರ್ಯ ರೈ ಬರ್ತಿಲ್ಲ, ಇವರು ಬಿಡ್ತಿಲ್ಲ.!

Aishwarya has appointed yoga instructor

ಆಗಸ್ಟ್ ಮೊದಲ ವಾರದಲ್ಲಿ 'ಫನ್ನಿಖಾನ್' ಸಿನಿಮಾ ಚಿತ್ರಿಕರಣ ಶುರುವಾಗುತ್ತಿದ್ದು, ಈ ತಿಂಗಳ ಅಂತ್ಯದಲ್ಲಿ ಐಶ್ವರ್ಯ ಭಾಗಿಯಾಗಲಿದ್ದಾರೆ. ನಂತರ ಅಕ್ಟೋಬರ್ ಅಂತ್ಯಕ್ಕೆ ಈ ಸಿನಿಮಾ ಕಂಪ್ಲೀಟ್ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ. ಇನ್ನು ಈ ಚಿತ್ರದಲ್ಲಿ ಐಶ್ವರ್ಯ ಅವರದ್ದು ತುಂಬಾ ಗ್ಲಾಮರೆಸ್ ಪಾತ್ರವಾಗಿದೆಯಂತೆ.

English summary
Aishwarya Rai Bachchan has already started preparing for her upcoming film Fanney Khan. Aishwarya has appointed the same yoga instructor whom she had lined up for Dhoom 2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada