»   » ಲಂಡನ್ ನಲ್ಲಿ ಖುಲ್ಲಂ ಖುಲ್ಲಾ ಒಂದಾದ ಅತ್ತೆ-ಸೊಸೆ

ಲಂಡನ್ ನಲ್ಲಿ ಖುಲ್ಲಂ ಖುಲ್ಲಾ ಒಂದಾದ ಅತ್ತೆ-ಸೊಸೆ

By: ಉದಯರವಿ
Subscribe to Filmibeat Kannada

ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮದುವೆಯಾದವರಿಗಿಂತಲೂ ಹೆಚ್ಚಾಗಿ ಅವಿವಾಹಿತರಿಗೂ ಚೆನ್ನಾಗಿ ಗೊತ್ತು. ಕಾಲಚಕ್ರ ತಿರುಗುತ್ತಿದ್ದಂತೆ ಹೊಸ ಹೊಸ ಗಾದೆಗಳು ಹುಟ್ಟಿಕೊಳ್ಳುತ್ತಿವೆ. ಅತ್ತೆ ಸೊಸೆ ಜಗಳ ಉಂಡು ಮಲಗಿದ ಮೇಲೂ ಶುರುವಾಗಬಹುದು.

ಸದ್ಯಕ್ಕೆ ಐಶ್ವರ್ಯಾ ರೈ ಹಾಗೂ ಅವರ ಪತಿ ಅಭಿಷೇಕ್, ಪುತ್ರಿ ಆರಾಧ್ಯಾ ಬಚ್ಚನ್ ಯೂರೋಪ್ ಪ್ರವಾಸದಲ್ಲಿದ್ದಾರೆ. ಈ ರೊಮ್ಯಾಂಟಿಕ್ ಸಮಯದಲ್ಲಿ ಅತ್ತೆಯವರನ್ನು ಕ್ಷಣಕಾಲ ಮರೆಯುವಂತಾಗಿದೆ ಐಶ್ವರ್ಯಾ ರೈ ಅವರಿಗೆ. [ಅಮಿತಾಬ್ ಬಚ್ಚನ್ ಕುಟುಂಬದಲ್ಲಿ ಅತ್ತೆ ಸೊಸೆ ಜಗಳ]

ಇದೇ ಸಂದರ್ಭದಲ್ಲಿ ಐಶೂ ಅವರ ಅತ್ತೆ ಜಯಾ ಬಚ್ಚನ್ ಅವರು ತನ್ನ ಮಗಳು ಶ್ವೇತಾ ನಂದನ್ ಜೊತೆ ಲಂಡನ್ ಗೆ ಪ್ರವಾಸಕ್ಕೆ ಹೊರಟಿದ್ದಾರೆ. ಅಲ್ಲಿಗೆ ಐಶೂ ಹಾಗೂ ಅಭಿಷೇಕ್ ಸಹ ಬಂದು ಸೇರಿದ್ದಾರೆ. ಅತ್ತೆಯನ್ನು ನೋಡಿದ ಕೂಡಲೆ ಐಶೂ ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿಲಿ ಎಂಬಂತೇನು ಭಾವಿಸಲಿಲ್ಲ.

ಖುಲ್ಲಂ ಖುಲ್ಲ ಒಂದಾದ ಅತ್ತೆ ಸೊಸೆ ಜಯಾ-ಐಶೂ

ಇಬ್ಬರೂ ತಮ್ಮ ಹಳೆಯ ದ್ವೇಷವನ್ನು ಮರೆತಿರುವುದು ಲಂಡನ್ ನಲ್ಲಿ ಬಹಿರಂಗವಾಗಿದೆ. ಅತ್ತೆ ಸೊಸೆ ಜಗಳದಲ್ಲಿ ಅತ್ತ ಅಮಿತಾಬ್ ಬಚ್ಚನ್ ಇತ್ತ ಅಭಿಷೇಕ್ ಬಚ್ಚನ್ ಬಡವಾಗಿದ್ದರು. ಈಗ ಇಬ್ಬರ ನಡುವೆ ಯುದ್ಧವಿರಾಮ ಘೋಷಣೆಯಾದಂತಿದೆ ಎಂದು ಬಾಲಿವುಡ್ ಭಾವಿಸುತ್ತಿದೆ.

ಎಂಥಹಾ ಚಾನ್ಸ್ ಮಿಸ್ ಆದರು ಬಿಗ್ ಬಿ

ಲಂಡನ್ ನಲ್ಲಿ ಎಲ್ಲರೂ ಭೇಟಿಯಾಗಿ ಸುಖವಾಗಿ ಕಾಲ ಕಳೆದಿದ್ದಾರೆ. ಆದರೆ ಮಿಸ್ ಆಗಿದ್ದು ಮಾತ್ರ ಬಿಗ್ ಬಿ ಅಮಿತಾಬ್ ಬಚ್ಚನ್. ಶೂಟಿಂಗ್ ಒಂದರಲ್ಲಿ ಅವರು ಬಿಜಿಯಾಗಿದ್ದು ಲಂಡನ್ ಗೆ ಅವರು ಹೋಗಲು ಸಾಧ್ಯವಾಗಿರಲಿಲ್ಲ. ಎಂಥಹಾ ಚಾನ್ಸ್ ಮಿಸ್ ಮಾಡಿಕೊಂಡರು ಅಲ್ಲವೆ?

ಮನೆಯಲ್ಲಿ ನಡೆದಿತ್ತಂತೆ ಮುಸುಕಿನ ಗುದ್ದಾಟ

ಬಹುಶಃ ಅತ್ತೆ ಸೊಸೆ ನಡುವಿನ ಜಗಳಕ್ಕೆ ಇಂಥಹದ್ದೇ ಕಾರಣ ಎಂದು ಹೇಳುವುದು ಕಷ್ಟ. ಈಗ ಬಚ್ಚನ್ ಕುಟುಂಬದಲ್ಲಿ ಎಲ್ಲರೂ ಒಟ್ಟಿಗೆ ಇದ್ದಾರೆ. ಆದರೆ ಮನೆಯಲ್ಲಿ ಅತ್ತೆ ಸೊಸೆ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಕಾರಣವಾಗಿದ್ದು ಅತ್ತೆ ಜಯಾ ಬಚ್ಚನ್ ಅವರು ತಾನೇ ಮೇಲು. ಮನೆಯಲ್ಲಿ ತನ್ನ ಮಾತೇ ನಡೆಯಬೇಕು ಎಂಬ ಧೋರಣೆ ಎನ್ನಲಾಗಿತ್ತು.

ಬೇರೆ ಮನೆ ಮಾಡಬೇಕೆಂದ ಕನವರಿಕೆ

ಮಾವನ ಮನೆಯಲ್ಲಿ ಇರಲು ತಮಗಿಷ್ಟವಿಲ್ಲ ಎಂದು ಐಶ್ವರ್ಯಾ ರೈ ಬಹಳ ದಿನಗಳಿಂದ ಕನವರಿಸುತ್ತಿದ್ದಾರಂತೆ. ಅಂದರೆ ಬೇರೆ ಮನೆ ಮಾಡಬೇಕೆಂಬ ಆಸೆ ಅವರದು. ಅತ್ತೆ ಜಯಾ ಬಚ್ಚನ್ ಜೊತೆ ಐಶೂ ಹೊಂದಿಕೊಳ್ಳಲು ಕಷ್ಟವಾಗುತ್ತಿರುವುದು. ಇಷ್ಟು ದಿನ ಸಹಿಸಿಕೊಂಡಿದ್ದೇ ಸಾಕು. ಇನ್ನು ಬೇರೆ ಮನೆ ಮಾಡೋಣ ಎಂಬುದು ಜಗಳಕ್ಕೆ ಕಾರಣ ಎನ್ನಲಾಗಿತ್ತು.

ಈಗ ಎಲ್ಲವೂ ಖುಲ್ಲಂ ಖುಲ್ಲಾ ಬರ್ಕಾತ್

ಐಶ್ವರ್ಯಾ ರೈ ಜೊತೆ ಪ್ರತಿ ಸಣ್ಣ ವಿಚಾರಕ್ಕೂ ಜಯಾ ಬಚ್ಚನ್ ಮೂಗು ತೂರಿಸುತ್ತಿರುವುದು ಐಶೂಗೆ ಸಹಿಸಿಕೊಳ್ಳಲು ಆಗುತ್ತಿಲ್ಲವಂತೆ. ಈ ಕಾರಣಗಳಿಂದ ಅತ್ತೆ ಸೊಸೆ ನಡುವಿನ ಅಂತರ ಹೆಚ್ಚಾಗುತ್ತಿತ್ತು ಇಬ್ಬರ ನಡುವೆ ಮಾತುಕತೆಯೂ ಗೌಣವಾಗುತ್ತಿದೆಯಂತೆ ಎಂಬ ಸುದ್ದಿ ಇತ್ತು. ಈಗ ಎಲ್ಲವೂ ಖುಲ್ಲಂ ಖುಲ್ಲ ಬರ್ಕಾತ್ ಆಗಿದೆ.

English summary
A while ago, when the rumours were rife that there was saas-bahu rift between Ashwarya Rai and Jaya Bachchan ji. Looks like things have changed between Ash and Jaya and maybe they want to try out holidaying together to overcome their differences in life.
Please Wait while comments are loading...