For Quick Alerts
  ALLOW NOTIFICATIONS  
  For Daily Alerts

  'ರಾಮ್ ಸೇತು' ರಕ್ಷಣೆಗೆ ನಿಂತ ಕಿಲಾಡಿ ಅಕ್ಷಯ್!: 'ರಾಮ್‌ ಸೇತು' ಸಿನಿಮಾ ಟೀಸರ್ ಸೂಪರ್ ಹಿಟ್

  |

  ಸೋತು ಸೊರಗಿರುವ ಬಾಲಿವುಡ್‌ಗೆ ಆಕ್ಸಿಜನ್ ಕೊಡಲು ದೀಪಾವಳಿಗೆ ಅಕ್ಷಯ್ ಕುಮಾರ್ ಬರ್ತಿದ್ದಾರೆ. ಅಭಿಷೇಕ್ ಶರ್ಮಾ ನಿರ್ದೇಶನದ 'ರಾಮ್‌ ಸೇತು' ಚಿತ್ರದಲ್ಲಿ ಪುರಾತತ್ವಶಾಸ್ತ್ರಜ್ಞನಾಗಿ ಆಕ್ಷನ್ ಕಿಂಗ್ ನಟಿಸಿದ್ದು, ಚಿತ್ರದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿ ಧೂಳೆಬ್ಬಿಸಿದೆ.

  ರಾಮ ಸೇತು ಪ್ರಾಕೃತಿಕವೋ ಅಥವಾ ಮನುಷ್ಯ ನಿರ್ಮಿತವೋ ಎನ್ನುವ ಚರ್ಚೆ ಬಹಳ ದಿನಗಳಿಂದ ನಡಿತಾನೇ ಇದೆ. ಈ ವಿಚಾರ ದೊಡ್ಡ ವಿವಾದವನ್ನು ಹುಟ್ಟಿ ಹಾಕಿದೆ. ಇದೀಗ ರಾಮ ಸೇತುವನ್ನು ಆಧರಿಸಿ ಬಾಲಿವುಡ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ನಟಿಸಿದ್ದಾರೆ. ಜಾಕ್ವೆಲಿನ್ ಪರ್ಫಾಂಡಿಸ್, ಸತ್ಯದೇವ್ ಹಾಗೂ ನಾಸರ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಟೀಸರ್ ನೋಡಿ ಬಾಲಿವುಡ್ ಪ್ರೇಕ್ಷಕರು ಕಣ್ಣರಳಿಸಿದ್ದಾರೆ.

  ಸೋಲಿನ ಸುಳಿಯಲ್ಲಿರುವ ಅಕ್ಷಯ್‌ಗೆ ಮತ್ತೊಂದು ಸಂಕಷ್ಟ ತಂದಿಟ್ಟ ಬಿಜೆಪಿ ಸಂಸದಸೋಲಿನ ಸುಳಿಯಲ್ಲಿರುವ ಅಕ್ಷಯ್‌ಗೆ ಮತ್ತೊಂದು ಸಂಕಷ್ಟ ತಂದಿಟ್ಟ ಬಿಜೆಪಿ ಸಂಸದ

  ಕೇಪ್ ಆಫ್ ಗುಡ್ ಫಿಲ್ಮ್ಸ್, ಅಮೇಜಾನ್ ಪ್ರೈಂ, ಲೈಕಾ ಪ್ರೊಡಕ್ಷನ್ಸ್‌ ಸಂಸ್ಥೆಗಳು ಜಂಟಿಯಾಗಿ 'ರಾಮ್‌ ಸೇತು' ಚಿತ್ರವನ್ನು ನಿರ್ಮಿಸಿವೆ. ಬಹಳ ಹಿಂದೆಯೇ ಸೆಟ್ಟೇರಿದ್ದ ಸಿನಿಮಾ ಕೊರೊನಾ ಹಾವಳಿಯಿಂದ ಬಿಡುಗಡೆಯಾಗುವುದು ತಡವಾಗುತ್ತಿದೆ.

   'ರಾಮ್‌ ಸೇತು' ರಕ್ಷಣೆಗೆ ನಿಂತ ಅಕ್ಕಿ

  'ರಾಮ್‌ ಸೇತು' ರಕ್ಷಣೆಗೆ ನಿಂತ ಅಕ್ಕಿ

  ಮೊದಲ ನೋಟದಲ್ಲೇ 'ರಾಮ್‌ ಸೇತು' ಟೀಸರ್ ಗಮನ ಸೆಳೀತಿದೆ. ಪುರಾತತ್ವಶಾಸ್ತ್ರಜ್ಞ ಆರ್ಯನ್ ಕುಲಶ್ರೇಷ್ಟ ಪಾತ್ರದಲ್ಲಿ ಅಕ್ಷಯ್ ಕುಮಾರ್ ಬಣ್ಣ ಹಚ್ಚಿದ್ದಾರೆ. ನಾಸ್ತಿಕನಾದ ಆರ್ಯನ್ ಕುಲಶ್ರೇಷ್ಟ ದುಷ್ಟರು ರಾಮಸೇತುವನ್ನು ಒಡೆದು ನಾಶ ಮಾಡುವ ಮುನ್ನ ಅದರ ಅಸ್ತಿತ್ವವನ್ನು ಸಾಬೀತುಪಡಿಸುವ ಕಥೆ ಚಿತ್ರದಲ್ಲಿದೆ. "ರಾಮ್ ಸೇತುನ ರಕ್ಷಿಸಲು 3 ದಿನ ಮಾತ್ರ ಅವಕಾಶ ಇದೆ" ಎನ್ನುವ ಡೈಲಾಗ್ ಕೂಟ ಟೀಸರ್‌ನಲ್ಲಿದೆ.

  ಗಾಯಕ ಅರ್ಮಾನ್ ಮಲಿಕ್‌ ತಂದೆಗೆ 6 ಕೋಟಿ ರೂ. ಬಂಗಲೆ ಮಾರಿದ ಅಕ್ಷಯ್ ಕುಮಾರ್!ಗಾಯಕ ಅರ್ಮಾನ್ ಮಲಿಕ್‌ ತಂದೆಗೆ 6 ಕೋಟಿ ರೂ. ಬಂಗಲೆ ಮಾರಿದ ಅಕ್ಷಯ್ ಕುಮಾರ್!

   ಪುರಾತತ್ವ ಶಾಸ್ತ್ರಜ್ಞನಾಗಿ ಅಕ್ಷಯ್‌

  ಪುರಾತತ್ವ ಶಾಸ್ತ್ರಜ್ಞನಾಗಿ ಅಕ್ಷಯ್‌

  ಭಾರತ ಮತ್ತು ಶ್ರೀಲಂಕಾ ಭೂಖಂಡಗಳನ್ನು ಸಮುದ್ರತಳದಲ್ಲಿ ರಾಮ್‌ ಸೇತು ಒಟ್ಟುಗೂಡಿಸಿದೆ. ಆದರೆ ಇದು ಪ್ರಾಕೃತಿಕ ರಚನೆಯೋ ಅಥವಾ ಮನುಷ್ಯ ನಿರ್ಮಿತವೋ? ಎನ್ನುವ ಚರ್ಚೆ ನಡೀತಾನೆ ಇದೆ. ಇದೇ ವಿಚಾರದ ಬಗ್ಗೆ ಇದೀಗ ಚಿತ್ರದಲ್ಲೂ ಚರ್ಚಿಸಲಾಗುತ್ತಿದೆ. ಚಿತ್ರದ ಕಥೆ ಉತ್ತರಭಾರತದಿಂದ ಶ್ರೀಲಂಕಾವರೆಗೂ ಸಾಗುತ್ತದೆ. ಚಿತ್ರದಲ್ಲಿ 'ರಾಮ್‌ ಸೇತು' ಪ್ರಾಕೃತಿಕ ರಚನೆಯೋ ಅಥವಾ ಮನುಷ್ಯ ನಿರ್ಮಿತವೋ? ಎನ್ನುವುದರ ಸಂಶೋಧನೆ ಮಾಡುವ ಪುರಾತತ್ವ ಶಾಸ್ತ್ರಜ್ಞನಾಗಿ ಅಕ್ಷಯ್‌ಕುಮಾರ್ ಮಿಂಚಿದ್ದಾರೆ.

   ಬಹಳ ರೋಚಕ ಕಥೆ 'ರಾಮ್‌ ಸೇತು'

  ಬಹಳ ರೋಚಕ ಕಥೆ 'ರಾಮ್‌ ಸೇತು'

  ಬಹಳ ಅದ್ಧೂರಿಯಾಗಿ 'ರಾಮ್‌ ಸೇತು' ಚಿತ್ರವನ್ನು ನಿರ್ಮಿಸಲಾಗಿದೆ. ಅಕ್ಷಯ್‌ಕುಮಾರ್ ಹೆಲಿಕ್ಯಾಪ್ಟರ್‌ ಏರಿ 'ರಾಮ್‌ ಸೇತು' ನೋಡಿ ಬೆರಗಾಗುವ ದೃಶ್ಯ, ಇನ್ನು ಸಮುದ್ರಕ್ಕೆ ಇಳಿಯಲು ಐರನ್ ಮ್ಯಾನ್ ರೀತಿ ಸೂಟ್ ಧರಿಸಿರುವ ಶಾಟ್, ಆಕ್ಷನ್ ಸೀಕ್ವೆನ್ಸ್‌ ಹುಬ್ಬೇರಿಸುವಂತಿದೆ. ಇನ್ನು ಬಿಜಿಎಂ ಜೊತೆ ಕೇಳಿಬರುವ ರಾಮ ಮಂತ್ರ ಮೈರೋಮಾಂಚನಗೊಳಿಸುವಂತಿದೆ. ಬಹಳ ರೋಚಕವಾಗಿ ಚಿತ್ರವನ್ನು ಕಟ್ಟಿಕೊಟ್ಟಿರೋದು ಟೀಸರ್‌ನಲ್ಲಿ ಗೊತ್ತಾಗ್ತಿದೆ.

  ಅಕ್ಷಯ್ ಕುಮಾರ್ ಹೊಸ ಜಾಹೀರಾತಿಗೆ ವಿರೋಧ: ಜಾಹೀರಾತಿನಲ್ಲಿ ಅಂಥಹದ್ದೇನಿದೆ?ಅಕ್ಷಯ್ ಕುಮಾರ್ ಹೊಸ ಜಾಹೀರಾತಿಗೆ ವಿರೋಧ: ಜಾಹೀರಾತಿನಲ್ಲಿ ಅಂಥಹದ್ದೇನಿದೆ?

   ದೀಪಾವಳಿಗೆ 'ರಾಮ್‌ ಸೇತು' ಚಿತ್ರ ರಿಲೀಸ್

  ದೀಪಾವಳಿಗೆ 'ರಾಮ್‌ ಸೇತು' ಚಿತ್ರ ರಿಲೀಸ್

  ರಾವಣನನ್ನು ಸಂಹಾರ ಮಾಡಿ ಲಂಕೆಯಿಂದ ಸೀತಾದೇವಿಯನ್ನು ಕರೆತರಲು ಶ್ರೀರಾಮ, ವಾನರ ಸೈನ್ಯದ ಜೊತೆ ಸೇರಿ ಸೇತುವೆಯನ್ನು ನಿರ್ಮಿಸಿದ ಎನ್ನು ಪ್ರತೀತಿ ಇದೆ. ಇದನ್ನೇ ಭಾರತೀಯರು ನಂಬಿದ್ದಾರೆ. ಹಿಂದೂ ಪುರಾಣಗಳ ಪ್ರಕಾರ ಸೇತುವೆಗೆ ಹೆಚ್ಚಿನ ಮಹತ್ವವಿದೆ. ಹಿಂದುಗಳಿಗೆ ಇದು ಬಹಳ ಪವಿತ್ರ. ಇದೇ ವಿಚಾರವಾಗಿ ಸಿನಿಮಾ ಮಾಡಿರುವುದು ಬಾಲಿವುಡ್ ಪ್ರೇಕ್ಷಕರಿಗೆ ಸಂತಸ ತಂದಿದೆ. ಟೀಸರ್ ನೋಡಿದವರು ಇಂತಾದೊಂದು ಚಿತ್ರಕ್ಕಾಗಿ ಇಷ್ಟು ದಿನದಿಂದ ಕಾಯುತ್ತಿದ್ದೆವು ಎಂದಿದ್ದಾರೆ. ಅಕ್ಟೋಬರ್ 24ಕ್ಕೆ ದೀಪಾವಳಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಲಿದೆ.

  English summary
  Akshay kumar Starrer Ram Setu First Glimpse Teaser Released. Know More.
  Monday, September 26, 2022, 14:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X