»   » 'ಸಿಂಗ್ ಈಸ್ ಬ್ಲಿಂಗ್'ನಲ್ಲಿ ಅಕ್ಕಿ ಆಕ್ಷನ್, ಕಾಮಿಡಿ, ರೊಮಾನ್ಸ್

'ಸಿಂಗ್ ಈಸ್ ಬ್ಲಿಂಗ್'ನಲ್ಲಿ ಅಕ್ಕಿ ಆಕ್ಷನ್, ಕಾಮಿಡಿ, ರೊಮಾನ್ಸ್

Posted By:
Subscribe to Filmibeat Kannada

ಬಾಲಿವುಡ್‌ನ ಅಕ್ಷಯ್ ಆಕ್ಷನ್ ಬಿಟ್ಟು ಕಾಮಿಡಿಗೆ ಇಳಿದು ಬಹಳ ದಿನವಾಯ್ತು. 'ಸಿಂಗ್ ಇಸ್ ಕಿಂಗ್' ಮಾಡಿ ಆಸ್ಟ್ರೇಲಿಯಾಕ್ಕೆ ಭಾರತೀಯರನ್ನು ಕರೆದೊಯ್ದು ನಕ್ಕುನಲಿಸಿದ್ದ ಅಕ್ಷಯ್‌ಕುಮಾರ್ ಈಗ 'ಸಿಂಗ್ ಈಸ್ ಬ್ಲಿಂಗ್'ಗೆ ಮಾಡಲು ಹೊರಟಿದ್ದಾರೆ.

ಮೊದಲು 'ಹೇ ಬೇಬಿ' ಮಾಡಿ ಹಲವರೊಂದಿಗೆ ರೊಮಾನ್ಸ್ ಮಾಡಿದ್ದ ಅಕ್ಷಯ್ ಈಗಷ್ಟೇ 'ಬೇಬಿ' ಮುಗಿಸಿದ ಮೂಡಿನಲ್ಲಿದ್ದಾರೆ. ಆಗಲೇ ಹೊಸ ಪ್ರೊಜೆಕ್ಟ್ ಸಿಂಗ್ ಈಸ್ ಬ್ಲಿಂಗ್‌ಗೆ ತಯಾರಿ ನಡೆಸಿದ್ದಾರೆ.

akki

"ನನ್ನ ಹೊಸ ಸಿನಿ ಸಿಂಗ್ ಈಸ್ ಬ್ಲಿಂಗ್ ಇದೆಯಲ್ಲ. ಅದು ಪಕ್ಕಾ ಮನೋರಂಜನೆ ಕೊಡುತ್ತೆ. ಅದರಲ್ಲಿ ಆಕ್ಷನ್, ಕಾಮಿಡಿ, ರೊಮಾನ್ಸ್ ಎಲ್ಲಾ ಇರುತ್ತೆ. ಬೇಗ ಆರಂಭಿಸಿ ಬೇಗ ಮುಗಿಸ್ತೀವಿ" ಎಂದು ಅಕ್ಕಿ ಹೇಳಿಕೊಂಡಿದ್ದಾರೆ. [ಕತ್ರಿನಾ ರಣ್ಬೀರ್ ನಡುವೆ ನಿರ್ದೇಶಕ ಅಡ್ಡಗಾಲು]

ಇದರಲ್ಲಿ ಅವರ ಹಿಟ್ ಜೋಡಿಯಲ್ಲೊಬ್ಬರಾದ ಕರೀನಾ ಕಪೂರ್ ನಾಯಕಿ. ಕೃತಿ ಸನಾನ್ ಕೂಡ ನಟಿಸ್ತಾರಂತೆ. ಇದಲ್ಲದೆ ಅಕ್ಷಯ್ ಕೈಯಲ್ಲಿ 'ಮೈ ಗಬ್ಬರ್' ಹಾಗೂ ವಾರಿಯರ್ ಇಂಗ್ಲಿಷ್ ಚಿತ್ರದ ಹಿಂದಿ ರಿಮೇಕ್ 'ಬ್ರದರ್‌' ಕೂಡ ಇದೆ.

akki

ಒಂದು ಕಾಲದಲ್ಲಿ ಕಿಲಾಡಿ, ಸೂಪರ್ ಕಿಲಾಡಿಯಂತಹ ಆಕ್ಷನ್ ಸಿನಿಮಾಗಳಲ್ಲಿ ನಟಿಸಿ ಮತ್ತೊಬ್ಬ ಅಮಿತಾಬ್ ಬಚ್ಚನ್ ಆಗುವ ಎಲ್ಲ ನಿರೀಕ್ಷೆ ಮೂಡಿಸಿದ್ದರು. ಆದರೆ, ದಿಢೀರ್ ಬೇಡಿಕೆ ಕಳೆದುಕೊಂಡ ಅಕ್ಕಿ ಗೆಲ್ಲುವ ಕುದುರೆ ಕಾಮಿಡಿ ಕೈ ಹಿಡಿದು ಮತ್ತೆ ಕ್ಲಿಕ್ಕಾದರು. [ಬೇಬಿಯನ್ನು ಮೋದಿಯೂ ಮೆಚ್ತಾರೆ]

ಈಚೆಗೆ ಓ ಮೈ ಗಾಡ್ ಹಾಗೂ ಸ್ಪೆಷಲ್ 26 ನಂತಹ ವಿಶೇಷ ಚಿತ್ರಗಳಲ್ಲಿಯೂ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಏನೇ ಆದ್ರೂ ಕಡಿಮೆ ಬಂಡವಾಳ ಹೆಚ್ಚು ಲಾಭ ಅಕ್ಷಯ್ ಕುಮಾರ್ ಅವರ ಈಗಿನ ಗುರಿ.

English summary
Bollywood's action star Akshay Kumar says he will begin shooting for wholesome entertainer 'Singh Is Bling'. IT is perfect mix of comedy, action and romance.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada